07/07/2025 11:45 AM

Translate Language

Home » ಚುನಾವಣೆ » ಬೀದರ ಜಿಲ್ಲೆಯ ಕರುಡ ಮತದಾರರ ಪಟ್ಟಿ ಪ್ರಕಟ: ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು ಅವಕಾಶ-ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಂದೀಪ್ ಡಿ.

ಬೀದರ ಜಿಲ್ಲೆಯ ಕರುಡ ಮತದಾರರ ಪಟ್ಟಿ ಪ್ರಕಟ: ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು ಅವಕಾಶ-ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಂದೀಪ್ ಡಿ.

Facebook
X
WhatsApp
Telegram

ಬೀದರ, ನವೆಂಬರ್.23:- ಬೀದರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬೀದರ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕರಾದ ರಂದೀಪ್ ಡಿ. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರೊAದಿಗೆ ಹಾಗೂ ಜಿಲ್ಲೆಯ ಅಧಿಕಾರಿಗಳೊಂದಿಗೆ ಮತದಾರರ ಪಟ್ಟಿ ಪರೀಕ್ಷಕರಣೆ ಕುರಿತು ಪ್ರಥಮ ಸಭೆ ನಡೆಸಿದರು.


ಸಭೆಯಲ್ಲಿ ಮಾತನಾಡಿದ ಅವರು ಈಗಾಗಲೇ ದಿನಾಂಕ: 29-10-2024 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಸದರಿ ಮತದಾರರ ಪಟ್ಟಿಯಲ್ಲಿ ಯಾವುದೇ ಕುಂದು ಕೊರತೆಗಳಿದ್ದಲ್ಲಿ, ದಿನಾಂಕ: 29-10-2024 ರಿಂದ 28-11-2024 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿರುತ್ತದೆ ಹಾಗೂ ದಿನಾಂಕ 24-11-2024 ರಂದು ವಿಶೇಷ ನೊಂದಣಿ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲೆ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ಸದರಿ ದಿನಾಂಕಗಳನ್ನು ಸಾರ್ವಜನಿಕರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ನೇರವಾಗಿ ಬಿ.ಎಲ್.ಓ. ಗಳಿಗೆ ಸಲ್ಲಿಸಬಹುದಾಗಿದೆ ಎಂದರು.


ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಜಿಲ್ಲೆಯ ಅಧಿಕಾರಿಗಳಿಗೆ ಮಾರ್ಗದರ್ಶನಗಳನ್ನು ನೀಡಿದರು. ಸಾರ್ವಜನಿಕರಿಂದ ಮತದಾರರ ಪಟ್ಟಿ ಕುರಿತು ಆಕ್ಷೇಪಣೆ ಹಾಗೂ ಕುಂದು ಕೊರತೆಗಳಿದ್ದಲ್ಲಿ ಸಾರ್ವಜನಿಕರು, ರಾಜಕೀಯ ಮುಖಂಡರು ನೇರವಾಗಿ ಮತದಾರರ ಪಟ್ಟಿ ವೀಕ್ಷಕರಾದ ರಂದೀಪ್ ಡಿ. ಅವರ ದೂರವಾಣಿ ಸಂಖ್ಯೆ: 9449839565 ಗೆ ಕರೆ ಮಾಡಿ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಕರಡು ಮತದಾರ ಪಟ್ಟಿ ಕುರಿತು ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ 28-11-2024 ಕೊನೆಯ ದಿನಾಂಕವಾಗಿದ್ದು, ಸಾರ್ವಜನಿಕರು ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ತಹಸೀಲ್ ಕಛೇರಿಯಲ್ಲಿ ತಮ್ಮ ಆಹವಾಲು ಆಕ್ಷೇಪಣೆಗಳನ್ನು ಸಲ್ಲಿಸುವುದು ಹಾಗೂ ದೂರವಾಣಿಗೆ ಕರೆ ಮಾಡಿ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದು ಅವರು ಕೋರಿದ್ದಾರೆ.


ಅಹವಾಲು ಆಕ್ಷೇಪಣೆ ಸಲ್ಲಿಸುವ ದೂರವಾಣಿ ಸಂಖ್ಯೆ ವಿವರ: ಜಿಲ್ಲಾಧಿಕಾರಿಗಳ ಕಚೇರಿ ಬೀದರ ದೂರವಾಣಿ ಸಂಖ್ಯೆ: 08482-225409, ಬೀದರ ಜಿಲ್ಲೆ ಟೋಲ್ ಫ್ರೀ ನಂಬರ 08482-1950, 47-ಬಸವಕಲ್ಯಾಣ ತಹಸೀಲ್ ಕಚೇರಿ ದೂರವಾಣಿ ಸಂಖ್ಯೆ: 6361106624 48-ಹುಮನಾಬಾದ ತಹಸೀಲ್ ಕಚೇರಿ ದೂರವಾಣಿ ಸಂಖ್ಯೆ: 9448543450, 49-ಬೀದರ (ಎಸ್) ತಹಸೀಲ್ ಕಚೇರಿ ದೂರವಾಣಿ ಸಂಖ್ಯೆ: 9741089037 50-ಬೀದರ ತಹಸೀಲ್ ಕಚೇರಿ ದೂರವಾಣಿ ಸಂಖ್ಯೆ: 9448715591, 51-ಭಾಲ್ಕಿ ತಹಸೀಲ್ ಕಚೇರಿ ದೂರವಾಣಿ ಸಂಖ್ಯೆ: 9986095678, 52-ಔರಾದ (ಬಿ) ತಹಸೀಲ್ ಕಚೇರಿ ದೂರವಾಣಿ ಸಂಖ್ಯೆ: 9538137844 ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ತಮ್ಮ ಆಕ್ಷೇ[ಣೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.


ಸಭೆಯ ನಂತರ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಸಹಾಯಕ ಆಯುಕ್ತರದ ಎಂ.ಡಿ.ಶಕೀಲ, ತಹಸೀಲ್ದಾರರು ಸೇರಿದಂತೆ ಕಂದಾಯ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!