ಬೀದರ ಮಹಿಳಾ ಪೊಲೀಸ ಠಾಣೆ ಅಪರಾಧ ಸಂಖ್ಯೆ 51/2025 ಕಲಂ 4 ಮೊಕ್ಸ್ ಎಕ್ಸ್-2012
ದಿನಾಂಕ 24/07/2025 ರಂದು ಫಿರ್ಯಾದಿದಾರರ ದೂರಿನ ಮೇರೆಗೆ ಬೀದರ ಮಹಿಳಾ ಪೊಲೀಸ ಠಾಣೆ ಅಪರಾಧ ಸಂಖ್ಯೆ 51/2025 ಕಲಂ 4 ಮೊಕ್ಕೊ ಕಾಯ್ದೆ-2012 ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯಲ್ಲಿ ಮಗುವಿಗೆ ಬ್ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದು ವೈದ್ಯಕೀಯ ಪರೀಕ್ಷೆಯಲ್ಲಿ ವೈದ್ಯಾಧಿಕಾರಿಗಳು ಕುಲಂಕುಶವಾಗಿ ವೈದ್ಯಕೀಯ ತಪಾಸಣೆ ಮಾಡಿ ಮಗುವಿನ ಮೇಲೆ ಯಾವುದೆ ದೌರ್ಜನ್ಯ ನಡೆದ ಬಗ್ಗೆ ಯಾವುದೆ ಪುರಾವೆಗಳು ಕಂಡುಬಂದಿವುದಿಲ್ಲಾ, ಮಗುವಿಗೆ ಆದ ಗಾಯಗಳು ಆಕಸ್ಮಿಕವಾಗಿ ಯಾವುದೊ ವಸ್ತು ಚುಚ್ಚಿದರಿಂದ ಕೇವಲ ಮೇಲೆಯಲ್ಲಿ ಗಾಯವಾಗಿರುತ್ತದೆ ಅಂತ ಪ್ರಾಥಮಿಕ ಅಭಿಪ್ರಾಯ ನೀಡಿರುತ್ತಾರೆ.
ಮಗುವಿಗೆ ಮತ್ತು ಮಗುವಿನ ಪಾಲಕರಿಗೆ ಮಕ್ಕಳ ರಕ್ಷಣಾ ಘಟಕದಲ್ಲಿ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ) ಆಪ್ತ ಸಮಾಲೋಚನೆ ಮಾಡಿದ್ದು ಈ ಸಮಯದಲ್ಲಿ ಮಗುವಿನ ಮೇಲೆ ಯಾವುದೆ ಲೈಂಗಿಕ ದೌರ್ಜನ್ಯ ನಡೆದ ಕುರುಹುಗಳು ಕಂಡುಬಂದಿರುವುದ್ದಿಲ್ಲಾ.
ತನಿಖೆಯ ಎಲ್ಲಾ ಹಂತವನ್ನು ಮಗುವಿನ ಪೋಷಕರಿಗೆ ಕಡ್ಡಾಯವಾಗಿ ತಿಳಿಸಲಾಗುತ್ತಿದೆ ಇನ್ನು ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರೆದಿರುತ್ತದೆ, ಪ್ರಕರಣದ ಸೂಕ್ಷ್ಮತೆ ಮತ್ತು ಮಗುವಿನ ಭವಿಷ್ಯದ ದೃಷ್ಟಿಯಿಂದ ಸಾರ್ವಜನಿಕರು ಮತ್ತು ಪತ್ರಕರ್ತರು ಯಾವುದೇ ವದಂತಿಗಳಿಗೆ ಕಿವಿಗುಡಬಾರದೆಂದು ಈ ಮೂಲಕ ಮನವಿ