ಬೀದರ್: ಜಿಲ್ಲೆಗೆ ಮಂಜೂರಾಗಿರುವ ಬೀದರ್ -ನಾಂದೇಡ್ ಹೊಸ ರೈಲ್ವೆ ಲೈನ್‌ಗೆ ರಾಜ್ಯ ಸರಕಾರದಿಂದ ಅನುದಾನ ಪಡೆದುಕೊಳ್ಳುವುದು ಹಾಗೂ ಮಂದಗತಿಯಲ್ಲಿ ಸಾಗುತ್ತಿರುವ ಬೀದರ್ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ವೇಗ ನೀಡುವುದು ಮತ್ತು ಬೀದರ್ ನಿಂದ ಬೆಂಗಳೂರಿಗೆ ವಂದೇ ಭಾರತ ರೈಲು ಸೇವೆ ಪ್ರಾರಂಭಿಸಬೇಕೆಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಮನವಿ ಮಾಡಿದರು.
ಹೊಸದಿಲ್ಲಿಯಲ್ಲಿ ಭೇಟಿಯಾದ ಅವರು, ಬೀದರ್ -ನಾಂದೇಡ್ ಯೋಜನೆಗೆ ಮಹಾರಾಷ್ಟ್ರ ಸರಕಾರ ಅನುದಾನ ನೀಡಲು ಮುಂದೆ ಬಂದಿದೆ. ಆದರೆ, ಕರ್ನಾಟಕ ಸರಕಾರ ಸಹಕಾರ ನೀಡುತ್ತಿಲ್ಲ, ಸಚಿವಾಲಯದಿಂದ ಈಗಾಗಲೇ ರಾಜ್ಯ ಸರಕಾರಕ್ಕೆ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಇಲ್ಲಿಯವರೆಗೆ ರಾಜ್ಯ ಸರಕಾರ ಸ್ಪಂದಿಸಿಲ್ಲ ಎಂದರು. ಇದಕ್ಕೆ ಸ್ಪಂದಿಸಿದ ಅಶ್ವಿನಿ ವೈಷ್ಣವ್ ಅವರು, ರಾಜ್ಯ ಸರಕಾರದಿಂದ ಸಹಕಾರ ಪಡೆದುಕೊಂಡು ರೈಲ್ವೆ ಲೈನ್ ಕಾಮಗಾರಿ ಪ್ರಾರಂಭಿಸುವುದಾಗಿ ವಿಶ್ವಾಸ ನೀಡಿದ್ದಾರೆ ಮತ್ತು ವಂದೇ ಭಾರತ ರೈಲಿನ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಜತೆಗೆ, ಬೀದರ್ ರೈಲ್ವೆ ನಿಲ್ದಾಣ ಕಾಮಗಾರಿ ವೇಗಗೊಳಿಸುವಂತೆಯೂ ಅಧಿ ಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ ಎಂದು ಭಗವಂತ ಖೂಬಾ ತಿಳಿಸಿದ್ದಾರೆ. ಸಚಿವ ಈಶ್ವರ್ ಖಂಡ್ರೆ ಅವರು ನಾನು ಮಾಡಿರುವ ಹಲವಾರು ಯೋಜನೆಗಳಿಗೆ ಅವರು ಮಾಡಿರುವುದಾಗಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಖಂಡ್ರೆ ಅವರ ಕೈಯಿಂದ ಆಗುವುದಾದರೆ ಈ ಬೆಳಗಾವಿ ಅಧಿವೇಶನದಲ್ಲಿ ಬೀದರ್-ನಾಂದೇಡ್ ರೈಲ್ವೆ ಲೈನ್ ಬಗ್ಗೆ ಧ್ವನಿ ಎತ್ತಿ ಅನುದಾನ ಕೊಡಿಸಬೇಕೆಂದು ಖೂಬಾ ಒತ್ತಾಯಿಸಿದ್ದಾರೆ.





Any questions related to ಬೀದರ್-ಬೆಂಗಳೂರು ವಂದೇ ಭಾರತ್‌ಗೆ ಮನವಿ?