ಸಚಿವ ದಿನೇಶ ಗುಂಡುರಾವ, ಅಧ್ಯಕ್ಷ ಎ. ಜಯಸಿಂಹರನ್ನು ಭೇಟಿ ಮಾಡಿದ ಬೀದರ ಎಕೆಬಿಎಂಎಸ್ ತಂಡ
ಬೀದರ.28.ಜೂನ್.25:- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಜಿಲ್ಲಾಧ್ಯಕ್ಷರಾದ ವೆಂಕಟೇಶ ಕುಲಕಣ ð ಗುರುವಾರದಂದು ಬೆಂಗಳೂರಿನಲ್ಲಿ ರಾಜ್ಯ ಅಧ್ಯಕ್ಷ ಎಸ್. ರಘೂನಾಥ ಅವರನ್ನು ಭೇಟಿ ಮಾಡಿ ಜಿಲ್ಲೇಯಲ್ಲೆ ನಡೆಯುತ್ತಿರುವ ಎಕೆಬಿಎಂಎಸ್ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಬೀದರನಲ್ಲಿ ಬ್ರಾಹ್ಮಣ ಸಮುದಾಯದವರಿಗೆ ಸಮುದಾಯ ಭವನಕ್ಕಾಗಿ ಸ್ಥಳ ವಿಕ್ಷಣೆ ಕೂಡಾ ಮಾಡಲಾಗಿದ್ದು ಅದು ತೆಗೆದುಕೊಳ್ಳುವ ಸಮಯದಲ್ಲಿ ತಾವು ಸಹಕರಿಬೇಕು ಅಲ್ಲದೇ ಬೀದರನಲ್ಲಿ ಎಕೆಬಿಎಂಎಸ್ ಕಛೇರಿ ಉದ್ಘಾಟನೆಗೆ ಬರಬೇಕೆಂದು ಮನವಿ ಮಾಡಿದರು.
ಈ ಸಮಯದಲ್ಲಿ ರಾಜ್ಯ ಅಧ್ಯಕ್ಷ ಎಸ್ ರಘುನಾಥ ಅವರು ಮಾತನಾಡಿ ಬೀದರ ಜಿಲ್ಲೇಯಲ್ಲಿ ಉತ್ತಮ ರೀತಿಯಿಂದ ಕೆಲಸ ಮಾಡುತ್ತಿದ್ದು ಇನ್ನೂ ಹೆಚ್ಚಿನ ರೀತಿಯಿಂದ ಕೆಲಸ ಮಾಡಿ ಸಮುದಾಯದ ಅಭಿವೃದ್ದಿಗೆ ಶ್ರಮಿಸಿ ಎಂದ ಅವರು ಕಛೇರಿ ಉದ್ಘಾಟನೆ ಬರುತ್ತೆನೆ ಎಂದು ಭರವಸಿ ನೀಡಿ ನಿಮ್ಮ ಎಲ್ಲಾ ಕೆಲಸಗಳಿಗೂ ರಾಜ್ಯ ಘಟಕ ಸಹಕರಿಸುತ್ತದೆ ಎಂದು ಹೇಳಿದರು.
ನಂತರ ಅಲ್ಲಿಂದ ಆರೋಗ್ಯ ಮತ್ತು ಕುಟುಂದ ಕಲ್ಯಾಣ ಸಚಿವರಾದ ದಿನೇಶ ಗುಂಡುರಾವ ಅವರನ್ನು ಬೇಟಿ ಮಾಡಿ ಅವರನ್ನು ಸನ್ಮಾನಿಸಿ ಸಮುದಾಯದ ಅಭಿವೃದ್ದಿಗಾಗಿ ಸಹಕರಿಸಬೇಕೆಂದು ಮನವಿ ಸಲ್ಲಿಸಲಾಯಿತು.
ಸಚಿವ ದಿನೇಶ ಗುಂಡುರಾವ ಮಾತನಾಡಿ ಬ್ರಾಹ್ಮಣ ಸಮುದಾಯ ಯಾವುದೇ ಕೆಲಸವಿದ್ದರೆ ಹೇಳಿ ಅದನ್ನೂ ಮಾಡುತ್ತೇನೆ ಹಾಗೂ ಸಮುದಾಯದ ಅಭಿವೃದ್ದಿಗಾಗಿ ನಾನು ಎಲ್ಲಿ ಕರೆದರು ಬರಲು ಸಿದ್ದ ಎಂದು ಭರವಸೆ ನೀಡಿದರು ನಂತರ ಬ್ರಾಹ್ಮಣ ಅಭಿವೃದ್ದಿ ಮಂಡಳಿ ನಿಗಮದ ಅಧ್ಯಕ್ಷರಾದ. ಎ ಜಯಸಿಂಹ ಅವರನ್ನು ಬೇಟಿ ಮಾಡಿ ಸನ್ಮಾನಿಸಿ ಬೀದರ ಜಿಲ್ಲೇಗೆ ಶವ ವಾಹಿನಿ ( ವೈಕುಂಟ ವಾಹಿನಿ) ಬ್ರಾಹ್ಮಣ ಅಭಿವೃದ್ದಿ ಮಂಡಳಿಯಿoದ ನೀಡಬೇಕೆಂದು ಹಾಗೂ ಬ್ರಾಹ್ಮಣ ಸಮುದಾಯಕ್ಕೆ ನಿಗಮದಿಂದ ಹೆಚ್ಚಿನ ಅನುಕೂಲ ಮಾಡಿ ಕೊಡಬೇಕೆಂದು ಮನವಿ ಸಲ್ಲಿಸಲಾಯಿತು. ಶವ ವಾಹಿನಿ ( ವೈಕುಂಟ ವಾಹಿನಿ) ನೀಡುವುದಾಗಿ ಭರವಸೆ ನೀಡಿದರು.
ಈ ಎಲ್ಲಾ ಬೇಟಿ ಸಮಯದಲ್ಲಿ ಎಕೆಬಿಎಂಎಸ್ ರಾಜ್ಯ ಜಂಟಿ ಕಾರ್ಯದರ್ಶಿ ರಾಜೇಶ ಕುಲಕಣ ð, ರಾಜ್ಯ ಸಂಘಟನಾ ಕಾರ್ಯದರ್ಶಿ ಸತೀಷ ಕುಲಕಣ ð ಹಾಗೂ ತಾಲ್ಲೂಕಾ ಅಧ್ಯಕ್ಷ ಮನೋಹರ ದಂಡೆ ಉಪಸ್ಥಿತರಿದ್ದರು.