ಬೀದರ,27 ನವೆಂಬರ್.24:- ನಗರಸಭೆ ಬೀದರ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ವಿವಿಧ ಮಾನದಂಡಗಳಾದ ವೈಯಕ್ತಿಕ ಶೌಚಾಲಯ ನಿರ್ಮಾಣ, ಪ್ರಾಥಮಿಕ ಹಂತದ ಮನೆ ಮನೆ ಕಸ ಸಂಗ್ರಹಣೆ ಹಾಗೂ ವಿಂಗಡಣೆ ಕಾರ್ಯ ಸಾರ್ವಜನಿಕರ ಸಹಕಾರ ಹಾಗೂ ಸಮುದಾಯ ಸಾರ್ವಜನಿಕ ಶೌಚಾಲಯಗಳ ಬಳಕೆ ಸಂಬAಧಿಸಿದ ವಿವಿಧ ಮಾನದಂಡಗಳ ಅನುಸಾರವಾಗಿ ಕಾರ್ಯಕ್ರಮವನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದ್ದು.
ಅದರಂತೆ ಬೀದರ ನಗರ ಸಭೆಯನ್ನು ಬಯಲು ಶೌಚ ಮುಕ್ತ ಪ್ಲಸ್ ಪ್ರದೇಶವೇಂದು (declaration of open defecation free + City) ಘೋಷಣೆಯಾಗಿರುವಂತೆ ನಗರವು ಸ್ವಚ್ಛ ಸರ್ವೇಕ್ಷಣಾ 2024ರಲ್ಲಿ ಭಾಗವಹಿಸಿದ್ದು (garbage free City rating) ನಿಯಮಾವಳಿ ರಿತ್ಯಾ ಬೀದರ ನಗರಸಭೆಯನ್ನು (1 star) ನಗರವೆಂದು ಘೋಷಣೆ ಮಾಡಲಾಗಿದೆ. ಸಾರ್ವಜನಿಕರು ಸ್ವಚ್ಛ ಸರ್ವೇಕ್ಷಣೆಯಲ್ಲಿ ಭಾಗವಹಿಸಿ ಬೀದರ ನಗರ ಸಭೆ ಉತ್ತಮ ಶ್ರೇಯಾಂಕ ಪಡೆಯಲು ಸಂಪೂರ್ಣ ಸಹಕಾರ ನೀಡಬೇಕೆಂದು ಬೀದರ ನಗರಶಬೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.