ಅತಿಥಿಗಳ ಪ್ರಮಾಣಪತ್ರ ನಕಲಿ!
ಬೆಂಗಳೂರು.07.ಜನವರಿ.26: ಉನ್ನತ ಶಿಕ್ಷಣ ಇಲಾಖೆ. ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಹುದ್ದೆ ಪಡೆಯುವ ಸಲುವಾಗಿ ನಕಲಿ ಪಿಎಚ್ .ಡಿ ಪ್ರಮಾಣಪತ್ರ ಸಲ್ಲಿಸಿ ನೇಮಕಗೊಂಡಿರುವ ದೊಡ್ಡ ಜಾಲವೇಬೆಳಕಿಗೆ ಬಂದಿದೆ.
ಕೋರ್ಟ್ ಆದೇಶದಂತೆ ಯುಜಿಸಿ ಅರ್ಹತೆ ಅನುಸಾರವಾಗಿ ನೇಮಕಗೊಳ್ಳಲು ಕೆಲ ಅತಿಥಿ ಉಪನ್ಯಾಸಕರು ಅನ್ಯರಾಜ್ಯಗಳ ವಿಶ್ವವಿದ್ಯಾಲಯಗಳಿಂದ ನಕಲಿ ದಾಖಲೆಗಳನ್ನು ಸಲ್ಲಿಸಿರುವುದನ್ನು ಕಾಲೇಜುಗಳ ಪ್ರಾಂಶುಪಾಲರು ಪತ್ತೆ ಹಚ್ಚಿದ್ದಾರ.
ಅತಿಥಿ ಉಪನ್ಯಾಸಕರ ನೇಮಕಾತಿ ಆದೇಶದಲ್ಲಿ ಪಿಎಚ್.ಡಿ
ಪ್ರಮಾಣಪತ್ರಗಳನ್ನು ಪರಿಶೀಲಿಸಿ ಇಎಂಐಎಸ್‌ನಲ್ಲಿ ನವೀಕರಿಸಲು ಪ್ರಾಂಶುಪಾಲರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಯಾವುದೇ ಪಿಎಚ್.ಡಿ ನಕಲಿ ಎಂದು ಕಂಡುಬಂದಲ್ಲಿ ಆ ಅಭ್ಯರ್ಥಿಯನ್ನು ತಕ್ಷಣವೇ ಸ್ಥಗಿತಗೊಳಿಸಿ, ಅತಿಥಿ ಉಪನ್ಯಾಸಕ ಹುದ್ದೆಯಿಂದ ಮುಂದುವರಿಯದಂತೆ ನಿರ್ಬಂಧಿಸಲಾಗುತ್ತದೆ.
|ಮಂಜುಶ್ರೀ ಆಯುಕ್ತ, ಉನ್ನತ ಶಿಕ್ಷಣ ಇಲಾಖೆ, ಬೆಂಗಳೂರು.
ಕೊಪ್ಪಳ-ಗಂಗಾವತಿಯಲ್ಲಿ ಬಯಲು
ಕೊಪ್ಪಳ ಜಿಲ್ಲೆಯ ಗಂಗಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಗಧ ವಿಶ್ವವಿದ್ಯಾಲಯದಿಂದ ನಕಲಿ ಪಿಎಚ್.ಡಿ ಪ್ರಮಾಣಪತ್ರ ಸಲ್ಲಿಸಿ ನೇಮಕಗೊಂಡಿದ್ದ ಇತಿಹಾಸ ವಿಭಾಗದ ಅತಿಥಿ ಉಪನ್ಯಾಸಕರನ್ನು ಪ್ರಾಂಶುಪಾಲರು ಪತ್ತೆ ಹಚ್ಚಿದ್ದಾರೆ. ಹಾಗೆಯೇ, ಭಾಗ್ಯಶ್ರೀ ಡೌಲಿ ಎಂಬ ಅಭ್ಯರ್ಥಿಯು ಜಿ. ಗೀತಾ ಎಂಬುವವರ ಮಾರ್ಗದರ್ಶನದಲ್ಲಿ ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದಂತೆ ಮದ್ರಾಸ್ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರವನ್ನು ವೆಬ್‌ಸೈಟ್‌ನಿಂದ ಪಡೆದು, ಹೆಸರು ಬದಲಾಯಿಸಿಕೊಂಡು ಕೊಪ್ಪಳದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಹುದ್ದೆ ಪಡೆದಿರುವುದು ಬೆಳಕಿಗೆ ಬಂದಿದೆ.






Any questions related to ನಕಲಿ ಪಿಎಚ್.ಡಿ ಪ್ರಮಾಣಪತ್ರ ಸಲ್ಲಿಸಿ ನೇಮಕಗೊಂಡಿರುವ ದೊಡ್ಡ ಜಾಲವೇಬೆಳಕಿಗೆ ಬಂದಿದೆ.?