ಕಲಬುರಗಿ.07.ಫೆಬ್ರವರಿ.26: ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಗುರಿಯನ್ನು ಹೊಂದಿರಬೇಕು ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ .ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಉಪ ಕಾರ್ಯದರ್ಶಿಗಳಾದ ಸುರೇಖಾ ಕಿಣಗಿಯವರು ನುಡಿದರು,ನಗರದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಾಲಕಿಯರ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬಿಳ್ಕೋಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ನುಡಿದರು.

ಮುಂದುವರೆದು ಮಾತನಾಡಿದ ಅವರು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಮುಖ್ಯವಾಗಿ ತಮಗೆ ಕಲಿಸಿದ ಗುರುಗಳು ಹಾಗೂ ತಮ್ಮನ್ನು ಸಾಕಿ ಸಲುಹಿದ ಪಾಲಕರ ಋಣವನ್ನು ತೀರಿಸಲಿಕ್ಕಾಗದು ಎಂದು ಹೇಳುತ್ತಾ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಸರ್ವಾಂಗೀಣ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಹೇಳುತ್ತಾ ನಾವು ಯಾವುದೇ ಕಾರ್ಯವನ್ನು ಮನಸ್ಸಿಟ್ಟು ಮಾಡಿದ್ದಲ್ಲಿ ಯಶಸ್ಸು ಖಚಿತ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಂ.ಎಸ್.ಐ .ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಐ.ಕೆ ಪಾಟೀಲ್ ಅವರು ಮಾತನಾಡುತ್ತಾ ಪ್ರತಿಯೊಬ್ಬರು ಪರಿಶ್ರಮಪಟ್ಟು ಓದಿ ಯಶಸ್ಸು ಸಾಧಿಸಬೇಕು ಎಂದರು ಮತ್ತೋರ್ವ ಅತಿಥಿಗಳಾದ ವಿ.ಜಿ.ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ಮೋಹನರಾಜ್ ಪತ್ತಾರ್ ಇವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಇಷ್ಟಪಟ್ಟು ಓದಿ ಕಷ್ಟಪಟ್ಟು ಓದಬೇಡಿ ಎಂಬ ಕಿವಿ ಮಾತನ್ನು ಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಮಹೇಶ್ ಗಂವ್ಹಾರ್ ಅವರು ಅಧ್ಯಕ್ಷೀಯ ಭಾಷಣದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರು ತಮ್ಮ ತಮ್ಮ ವಿಭಾಗಗಳಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ವೈಯುಕ್ತಿಕವಾಗಿ ನಗದು ಬಹುಮಾನ ನೀಡಿ ಅವರಿಗೆ ಪ್ರೋತ್ಸಾಹಿಸುವ ಕ ಉಪನ್ಯಾಸಕರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿಯರಿಗೆ ಪ್ರೇರಣದಾಯಕ ಹಿತವಚನಗಳನ್ನು ಹೇಳಿದ ಸುರೇಖಾ ಕಿಣಿಗಿ ಮೇಡಂ ಅವರನ್ನು ಸಂಸ್ಥೆಯ ಪರವಾಗಿ ಅಭಿನಂದಿಸಿದರು ಇದೇ ಸಂದರ್ಭದಲ್ಲಿ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ವರ್ಷದ ಅತ್ಯುತ್ತಮ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಪ್ರಮಾಣ ಪತ್ರ ಪಾರಿತೋಷಕಗಳನ್ನು ವಿತರಿಸಲಾಯಿತು.
ವೇದಿಕೆ ಮೇಲೆ ವಿದ್ಯಾರ್ಥಿ ಸಂಘದ ಸಲಹೆಗಾರರಾದ ಝೇಭಾ ಅಕ್ತರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸವಿತಾ ಪಾಟೀಲ್, ಆನಂದ್ ಪಾಟೀಲ್ ,ವಿಜಯಲಕ್ಷ್ಮಿ ಪಾಟೀಲ್, ರಾಜಶ್ರೀ, ಹಾಗೂ ಬೋಧಕೇತರ ಸಿಬ್ಬಂದಿಗಳಾದ ಅನಸೂಯ ಗಾದಾ, ಪ್ರೀತಿ ಸೊರೋಡೆ, ಶಿಲ್ಪಕಲಾ ಗೊಲಗೇರಿ ಭಾಗವಹಿಸಿದ್ದರು .
ಕುಮಾರಿ ಅಕ್ಷತಾ ಹಾಗೂ ಸರಕ ಪ್ರಾರ್ಥಿಸಿದರು ಕುಮಾರಿ ಒಮೇಶ್ವರಿ ವಂದಿಸಿದರು ಸವಿತಾ ಪಾಟೀಲ್ ಸ್ವಾಗತಿಸಿದರು, ವಿಜಯಲಕ್ಷ್ಮಿ ಪಾಕಿನ್ ಅತಿಥಿಗಳನ್ನು ಪರಿಚಯಿಸಿದರು ,ಜಾನಕಿ ಪಾಟೀಲ್ ಕಾರ್ಯಕ್ರಮವನ್ನು ನಿರೂಪಿಸಿದರು.





Any questions related to ಬದುಕಿಗೆ ಗುರಿಯಿರಬೇಕು.-<br>ಸುರೇಖಾ ಕಿಣಿಗಿ.?