Home » ಲೈವ್ ನ್ಯೂಸ್ » ಫ್ಯಾಶನ್ ಡಿಸೈನಿಂಗ್ & ಟೈಲರಿಂಗ್ ಕುರಿತು ಕೌಶಲ್ಯಾಧಾರಿತ ತರಬೇತಿಗೆ ಅರ್ಜಿ ಆಹ್ವಾನ

ಫ್ಯಾಶನ್ ಡಿಸೈನಿಂಗ್ & ಟೈಲರಿಂಗ್ ಕುರಿತು ಕೌಶಲ್ಯಾಧಾರಿತ ತರಬೇತಿಗೆ ಅರ್ಜಿ ಆಹ್ವಾನ

Facebook
X
WhatsApp
Telegram

ಕೊಪ್ಪಳ.17.ಜನವರಿ.26: ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಕೊಪ್ಪಳ ವತಿಯಿಂದ ಯುವ ನಿಧಿ & ಮಹಿಳಾ ಫಲಾನಭವಿಗಳಿಗೆ ಉಚಿತವಾಗಿ ಫ್ಯಾಶನ್ ಡಿಸೈನಿಂಗ್ & ಟೈಲರಿಂಗ್ ಕುರಿತು 30 ದಿನಗಳ ಕೌಶಲ್ಯಾಧಾರಿತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.


ಸ್ವಯಂ ಉದ್ಯೋಗ ಪ್ರಾರಂಭಿಸುವ ಆಸಕ್ತರುಗಳಿಗಾಗಿ ಕೊಪ್ಪಳದಲ್ಲಿ ಫ್ಯಾಶನ್ ಡಿಸೈನಿಂಗ್ & ಟೈಲರಿಂಗ್ ಬಗ್ಗೆ 30 ದಿನಗಳ ಕೌಶಲ್ಯಾಧಾರಿತ ತರಬೇತಿಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಜಿಲ್ಲೆಯ ಯಾವುದೆ ತಾಲೂಕಿನ ಅಭ್ಯರ್ಥಿಗಳು ಈ ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ. ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ(ಸಿಡಾಕ್), ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗುವದು.

ಈ ಕಾರ್ಯಕ್ರಮದಲ್ಲಿ ಆಯಾ ವೃತ್ತಿಗಳಲ್ಲಿ ಕೌಶಲ್ಯದ ಪ್ರಾಯೋಗಿಕ ಹಾಗೂ ಸಿದ್ಧಾಂತದೊಂದಿಗೆ ಸ್ವಯಂ ಉದ್ಯಮಗಳ ಬಗ್ಗೆ ಮಾಹಿತಿ, ಉದ್ಯಮಶೀಲತೆ, ಯಶಸ್ವಿ ಉದ್ಯಮಶೀಲರ ಗುಣಲಕ್ಷಣಗಳು, ಉದ್ಯಮಗಳನ್ನು ಪ್ರಾರಂಭಿಸುವ ಹಂತಗಳು, ಸ್ವಯಂ ಉದ್ಯೋಗಕ್ಕೆ ಇರುವ ಸರ್ಕಾರದ ಯೋಜನೆಗಳು, ಬ್ಯಾಂಕ್ ವ್ಯವಹಾರ ಮಾಡುವ ಬಗ್ಗೆ, ಸಾಲ ಮತ್ತು ಹಣಕಾಸು ಮತ್ತು ಹಣಕಾಸೇತರ ಸೌಲಭ್ಯಗಳ ಬಗ್ಗೆ, ಲೆಕ್ಕ ಪತ್ರ ನಿರ್ವಹಣೆ, ಯೋಜನಾ ವರದಿ ತಯಾರಿಕೆ, ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವಲ್ಲಿ ಸಹಾಯ ನೀಡುವದು ಮತ್ತು ಸಂಬoಧಪಟ್ಟ ಇತ್ಯಾದಿ ವಿಷಯಗಳ ಬಗ್ಗೆ ಅನುಭವಿ ಅತಿಥಿ ಬೋಧಕರಿಂದ ಉಪನ್ಯಾಸ, ಮಾಹಿತಿ ನೀಡಲಾಗುವದು.

ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರ ನೀಡಲಾಗುವದು. ಸ್ವಯಂ ಉದ್ಯಮಗಳನ್ನು ಪ್ರಾರಂಭಿಸಲು ಅರ್ಹರಿಗೆ ಸರ್ಕಾರಿ ಯೋಜನೆ ಅಡಿಯಲ್ಲಿ ಬ್ಯಾಂಕ್ ಸಾಲ ಸೌಲಭ್ಯಕ್ಕಾಗಿ ಶಿಫಾರಸ್ಸು ಮಾಡಲಾಗುವದು.


ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರಿರುವ 18 ರಿಂದ 40 ವರ್ಷದೊಳಗಿನ, ಕನಿಷ್ಠ SSLC ಪಾಸ್ ಆದ ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳು. ಜಂಟಿ ನಿರ್ದೇಶಕರು, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರದ ಕಟ್ಟಡ, ಹೊಸಪೇಟೆ ರಸ್ತೆ, ನಗರ ಸಭೆ ಎದುರು, ಕೊಪ್ಪಳ-583231 ಇಲ್ಲಿಗೆ ಜನವರಿ 17 ರೊಳಗಾಗಿ ಭೇಟಿ ನೀಡುವದು ಅಥವಾ ಮೋಬೈಲ್ ಸಂಖ್ಯೆ 7204016012 ಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳ್ಳಬಹುದಾಗಿದೆ ಎಂದು ಕೊಪ್ಪಳ ಸಿಡಾಕ್ ಜಂಟಿ ನಿರ್ದೇಶಕರಾದ ಜಿ.ಯು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology