ಕೊಪ್ಪಳ.12.ಜೂನ್.25:-ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಕೊಪ್ಪಳ ಇವರ ವತಿಯಿಂದ 2024-25 ನೇ ಸಾಲಿನಲ್ಲಿ ಮಹಿಳಾ ತರಬೇತಿ ಯೋಜನೆಯಡಿ ನಿರುದ್ಯೋಗಿ ಮಹಿಳೆಯರಿಗೆ ವಿವಿಧ ರೀತಿಯ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಗಳನ್ನು ನೀಡಲು ಗಂಗಾವತಿಯ ಮೆಟ್ರೋ ಸೋಷಿಯಲ್ ಎಜುಕೇಷನ್ ಟ್ರಸ್ಟ್ ಸಂಸ್ಥೆಯಿoದ ಅಸಿಸ್ಟೆಂಟ್ ಫ್ಯಾಶನ್ ಡಿಸೈನರ್ ತರಬೇತಿಯನ್ನು ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕನಿಷ್ಟ 10ನೇ ತರಗತಿ ಮುಗಿಸಿದ 18 ರಿಂದ 35 ವರ್ಷ ವಯೋಮಿತಿಯೊಳಗಿನ ಆಸಕ್ತ ಮತ್ತು ಅರ್ಹ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳು ಆಧಾರ್ ಕಾರ್ಡ್, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮತ್ತು ಇತ್ತೀಚಿನ 6 ಭಾವಚಿತ್ರಗಳೊಂದಿಗೆ ಅರ್ಜಿಯನ್ನು ನೇರವಾಗಿ ಮೆಟ್ರೋ ಸೋಷಿಯಲ್ ಎಜುಕೇಷನ್ ಟ್ರಸ್ಟ್, ಪ್ರಶಾಂತ ನಗರ, ಗಂಗಾವತಿ, ಜಿ.ಕೊಪ್ಪಳ ವಿಳಾಸಕ್ಕೆ ಜೂನ್ 21 ರೊಳಗಾಗಿ ಅರ್ಜಿ ಸಲ್ಲಿಸಬಹುದು ಎಂದು ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫ್ಯಾಶನ್ ಡಿಸೈನರ್ ಆಗಲು ಬಯಸುವವರಿಗೆ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗುತ್ತಿದೆ. ಫ್ಯಾಶನ್ ಡಿಸೈನಿಂಗ್‌ನಲ್ಲಿ ಪದವಿಪೂರ್ವ ಅಧ್ಯಯನ ಮಾಡುವುದು, ಬಟ್ಟೆ ಮತ್ತು ಜವಳಿಗಳನ್ನು ಕುಶಲತೆಯಿಂದ ಮಾಡುವುದು, ಫ್ಯಾಶನ್ ಈವೆಂಟ್‌ಗಳು ಅಥವಾ ಫ್ಯಾಶನ್ ಹೌಸ್ ಅನ್ನು ನಿರ್ವಹಿಸುವುದು, ಬಟ್ಟೆಗಳನ್ನು ಚಿತ್ರಿಸುವುದು ಮತ್ತು ಚಿತ್ರಿಸುವುದು ಇವುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.