02/08/2025 4:59 PM

Translate Language

Home » ಲೈವ್ ನ್ಯೂಸ್ » ಪ್ರವಾಸಿ ತಾಣಗಳ ವೀಕ್ಷಣೆಗಿರುವ ವಿಶೇಷ ಬಸ್ ಸೌಲಭ್ಯವನ್ನುಸಾರ್ವಜನಿಕರು ಸದುಪಯೋಗಪಡೆದುಕೊಳ್ಳಬೇಕು- ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಪ್ರವಾಸಿ ತಾಣಗಳ ವೀಕ್ಷಣೆಗಿರುವ ವಿಶೇಷ ಬಸ್ ಸೌಲಭ್ಯವನ್ನುಸಾರ್ವಜನಿಕರು ಸದುಪಯೋಗಪಡೆದುಕೊಳ್ಳಬೇಕು- ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

Facebook
X
WhatsApp
Telegram

ಬೀದರ.20.ಜುಲೈ.25:- ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗಿರುವ ವಿಶೇಷ ಬಸ್ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತಿಳಿಸಿದರು.

ಅವರು ಶನಿವಾರ ಬೀದರ ನಗರದ ಕೋಟೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಇವರು ಪ್ರಸ್ತುತಪಡಿಸಿರುವ ವಿನೂತನ ಪ್ರವಾಸ ಕಾರ್ಯಕ್ರಮ ‘ಬೀದರ ದರ್ಶನ’ ಒಂದು ದಿನದ ಪ್ರೇಕ್ಷಣೀಯ ಸ್ಥಳಗಳ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬೀದರ ಜಿಲ್ಲೆಯಲ್ಲಿರುವ ಐತಿಹಾಸಿಕ, ಸಾಂಸ್ಕøತಿಕ, ಧಾರ್ಮಿಕ ಮತ್ತು ಪರಿಸರ ಪ್ರವಾಸಿ ತಾಣಗಳಾದ ಬೀದರ ಕೋಟೆ, ಗುರುದ್ವಾರ, ಬರಿದ್ ಶಾಹಿ ಉದ್ಯಾನ, ಪಾಪನಾಶ ದೇವಸ್ಥಾನ, ಝರಣಿ ನರಸಿಂಹ ದೇವಸ್ಥಾನ, ಅಷ್ಟೂರ ಟೊಂಬ್ಸ್ ಮತ್ತು ಚೌಖಂಡಿ, ಬ್ಯಾಕ್ ಬಕ್ ಸಪಾರಿ, ಬಸವಕಲ್ಯಾಣದ ಅನುಭವ ಮಂಟಪ, ಕೋಟೆ, ಭಾಲ್ಕಿ ಕೋಟೆ, ಹುಮನಾಬಾದ ವಿರಭಧ್ರೇಶ್ವರ ದೇವಸ್ಥಾನ, ಚಳಕಾಪುರ ಸಿದ್ಧಾರೂಢ ಮಠ, ಹನುಮಾನ ದೇವಸ್ಥಾನ ಸೇರಿದಂತೆ ಹಲವು ತಾಣಗಳಿಗೆ ಭೇಟಿ ನೀಡಲು ಈ ಬಸ್ ಸೌಲಭ್ಯ ಅನುಕೂಲ ಮಾಡಲಿದೆ. ಪ್ರವಾಸಿಗರು ಆನ್‍ಲೈನ್ ಮೂಲಕ ನೊಂದಣಿ ಮಾಡಿಕೊಳ್ಳಬಹುದು, ವಯಸ್ಕರಿಗೆ 685 ರೂ ಮತ್ತು ಶಾಲಾ ಮಕ್ಕಳಿಗೆ 400 ರೂ. ಟಿಕೆಟ್ ದರ ಇರುತ್ತದೆ ಹಾಗೂ ರಾಜ್ಯ ಮತ್ತು ಜಿಲ್ಲೆಯ ಪ್ರವಾಸಿಗರಿಗೆ ಬಹಳ ಅನುಕೂಲ ಆಗಲಿದೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎಂದರು.


ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವಲಿಂಗಪ್ಪ ಅವರು ಮಾತನಾಡಿ, ಪ್ರತಿದಿನ ಪ್ರವಾಸಿ ಬಸ್ ಬರಿದ್ ಶಾಹಿ ಉದ್ಯಾನವನದಿಂದ ಆರಂಭವಾಗಲಿದೆ, 6:30 ಪ್ರಾರಂಭವಾಗಿ 7:30ಕ್ಕೆ ಬ್ಲಾಕ್ ಬಕ್ ಸಪಾರಿ, 9:30ಕ್ಕೆ ಝರಣಾ, 11:30ಕ್ಕೆ ಅಷ್ಟೂರ ಟೊಂಬ್ಸ್ ಮತ್ತು ಚೌಖಂಡಿ, 1:30ಕ್ಕೆ ಗುರು ನಾನಕ, 2:30 ಊಟದ ವಿರಾಮ, 4:30ಕ್ಕೆ ಬರಿದ್ ಶಾಹಿ ಉದ್ಯಾನ, 5:30ಕ್ಕೆ ಪಾಪನಾಶ ದೇವಸ್ಥಾನ, 6:30ಕ್ಕೆ ಮುಕ್ತಾಯವಾಗಲಿದೆ ಹಾಗೂ ನೊಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9845624001 ಸಂಖ್ಯೆಗೆ ಸಂಪರ್ಕಿಸಬಹುದು ಎಂದರು.

ಈ ಸಂದರ್ಭದಲ್ಲಿ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ ಅನುರುದ್ಧ ದೇಸಾಯಿ, ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಮ್ಯಾನೇಜರ್ ಶಿವಕುಮಾರ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!