ಹನೂರು.07.ಆಗಸ್ಟ್.25:- ಶ್ರೀ ಜಿ ವಿ ಗೌಡ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ, ಇ ಎಲ್ ಸಿ, ಇಕೋ ಕ್ಲಬ್ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಹಾಗೂ ಬೀಳ್ಕೋಡುಗೆ ಸಮಾರಂಭ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಜೇಗೌಡರವರು ಉದ್ಘಾಟಿಸಿ ಬಳಿಕ ಮಾತನಾಡಿದರು.
ವಿದ್ಯಾರ್ಥಿಗಳು ಓದುವುದರ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಧೃಡತೆಯಿಂದ ಇರಬಹುದು. ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಅಂಕಗಳನ್ನು ಪಡೆಯುವುದರ ಜೊತೆಗೆ ಸಂಸ್ಕಾರವನ್ನು ಕಲಿತರೆ ಸಮಾಜದಲ್ಲಿ ನಾವು ಮಾದರಿಯಾಗಿ ಬದುಕಬಹುದು.

ಭಾರತ ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಹೆಚ್ಚು ಹೆಚ್ಚು ಸಾಧನೆ ಮಾಡಬೇಕಾದರೆ ಈ ದೇಶದ ಯುವಶಕ್ತಿ ಉತ್ತಮ ಶಿಕ್ಷಣವನ್ನು ಪಡೆಯಬೇಕು. ಜೊತೆಗೆ ದುಶ್ಚಟಗಳಿಂದ ದೂರವಿರಬೇಕು.
ಸಮಾಜದಲ್ಲಿ ನಾಗರೀಕರಾಗಿ ಜೀವನ ನಡೆಸಬೇಕಾದರೆ ಶಿಕ್ಷಣ ಅಗತ್ಯ. ಶಿಕ್ಷಣದಿಂದ ನಮಗೆ ಎಲ್ಲಾ ಗೌರವ ಸಿಗುತ್ತದೆ ಎಂದರು.
ಪ್ರಾಂಶುಪಾಲರಾದ ರಾಜೇಶ್ ಬಿ ಮಾತನಾಡಿ. ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಗುಣಮಟ್ಟ ಶಿಕ್ಷಣ ನೀಡಲಾಗುತ್ತದೆ ಇತಿಹಾಸವನ್ನು ನೋಡಿದರೆ ಬಹುಸಂಖ್ಯಾತ ಸಾಧಕರು ಸರಕಾರಿ ಶಾಲೆಯಲ್ಲಿಯೇ ಅಧ್ಯಯನಮಾಡಿ ಸಾಧಕರಾಗಿದ್ದಾರೆ.
ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸ್ವಾಗತಿಸಿಕೊಳ್ಳುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ಉತ್ತಮ ಭಾವನೆ ಸೃಷ್ಟಿಯಾಗುತ್ತದೆ ನಾನು ಕೂಡ ಈ ಕಾಲೇಜಿಗೆ ಹೊಸದಾಗಿ ಬಂದಿರುತ್ತೇನೆ ವಿದ್ಯಾರ್ಥಿಗಳು ಹಿತಾ ದೃಷ್ಟಿಯಿಂದ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳುವುದಕ್ಕೆ ಯೋಜನೆಯನ್ನು ರೂಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ರಾಜೇಶ್ ಬಿ, ಉಪನ್ಯಾಸಕರಾದ ಲಾಜರಸ್, ನಂಜುಂಡಯ್ಯ, ಶಿವಕುಮಾರ್, ಫರ್ಹಾನಾ ಬೇಗಂ, ಕುಸುಮ, ಸವಿತ, ಹರೀಶ್, ಮಹೇಂದ್ರ, ನಂದಿನಿ, ದೇವಿಕಾ,ಲಿಂಗರಾಜ್, ಯಶಸ್ವಿನಿ, ಹಾಗೂ ಸಿಬ್ಬಂದಿಗಳಾದ ಪ್ರಭು, ಮೂರ್ತಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.