02/08/2025 5:04 PM

Translate Language

Home » ಲೈವ್ ನ್ಯೂಸ್ » ಪ್ರಧಾನಿ, ಸಿಎಂ ಜತೆ ನಮ್ಮ ಪೋಟೋ ಹಾಕಿ: ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರ ಆಗ್ರಹ

ಪ್ರಧಾನಿ, ಸಿಎಂ ಜತೆ ನಮ್ಮ ಪೋಟೋ ಹಾಕಿ: ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರ ಆಗ್ರಹ

Facebook
X
WhatsApp
Telegram

ಕೂಪ್ಪಳ.23.ಜುಲೈ.25:- ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆದಿದ್ದು, ಅನುಷ್ಠಾನ ಸಮಿತಿ ಸದಸ್ಯರು ‘ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ಪ್ರಧಾನಿ ಹಾಗೂ ಮುಖ್ಯಮಂತ್ರಿ ಭಾವಚಿತ್ರದ ಜತೆ ನಮ್ಮ ಭಾವಚಿತ್ರವನ್ನೂ ಹಾಕಬೇಕು’ ಎಂದು ಆಗ್ರಹಿಸಿದ್ದಾರೆ. ಪ್ರಗತಿ ಪರಿಶೀಲನಾ ಸಭೆ ನಡೆದಿದ್ದು, ಅನುಷ್ಠಾನ ಸಮಿತಿ ಸದಸ್ಯರು ‘ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ಪ್ರಧಾನಿ ಹಾಗೂ ಮುಖ್ಯಮಂತ್ರಿ ಭಾವಚಿತ್ರದ ಜತೆ ನಮ್ಮ ಭಾವಚಿತ್ರವನ್ನೂ ಹಾಕಬೇಕು’ ಎಂದು ಆಗ್ರಹಿಸಿದ್ದಾರೆ.

‘ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ಪ್ರಧಾನಿ ಹಾಗೂ ಮುಖ್ಯಮಂತ್ರಿಯ ಭಾವಚಿತ್ರ ಅಳವಡಿಸುವದರ ಜತೆ ಗ್ಯಾರಂಟಿ ಸಮಿತಿ ಸದಸ್ಯರ ಬ್ಯಾನರ್‌ ಕೂಡ ಅಳವಡಿಸಬೇಕು’ ಎಂದು ಸದಸ್ಯರಾದ ದೇವರಾಜ ನಡುವಿನಮನಿ, ಜ್ಯೋತಿ ಗೊಂಡಬಾಳ ಒತ್ತಾಯಿಸಿದರು. ಆಹಾರ ನಿರೀಕ್ಷಕರು ಪಡಿತರ ಹಂಚುವಾಗ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಆಹಾರ ಧಾನ್ಯ ಪರಿವೀಕ್ಷಿಸಿ ಜಿಪಿಎಸ್‌ ಫೋಟೊ ವ್ಯಾಟ್ಸ್‌ ಆಯಪ್‌ ಗ್ರೂಪ್‌ಗೆ ಹಾಕಬೇಕು.

ಆಹಾರ ಧಾನ್ಯ ನೀಡುವಾಗ ಸ್ಥಳೀಯರಿಗೆ ಆದ್ಯತೆ ಕೊಡಬೇಕು ಎನ್ನುವುದನ್ನು ಪಾಲಿಸಲು ಸೂಚಿಸಬೇಕು ಎಂದರು.

ಸದಸ್ಯ ಮಾನ್ವಿ ಪಾಷಾ ‘ಫೆಬ್ರುವರಿ ಹಾಗೂ ಮಾರ್ಚ್‌ನಲ್ಲಿ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಬಂದಿಲ್ಲ’ ಎಂದರು. ಆಗ ಅಧಿಕಾರಿಗಳು ಮೇ ತಿಂಗಳ ಹಣ ಜಮೆಯಾಗಿದೆ ಎಂದು ಹೇಳಿದಾಗ, ಇದರ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು ಎಂದು ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಬಾಲಚಂದ್ರನ್‌ ಎಸ್‌. ಸೂಚಿಸಿದರು.

ಕುಷ್ಟಗಿ-ಕೊಪ್ಪಳ ತಡೆ ರಹಿತ ಬಸ್‌ ವಾಹನಗಳಿದ್ದು ಇರಕಲ್ಲಗಡ ಗ್ರಾಮದಲ್ಲಿ ನಿಲುಗಡೆ ಮಾಡಲು ಕ್ರಮ ವಹಿಸಬೇಕು ಎನ್ನುವ ಬೇಡಿಕೆ ಬಗ್ಗೆ ಹಿಂದಿನ ಸಭೆಯಲ್ಲಿ ಚರ್ಚೆಯಾಗಿತ್ತು. ಈ ಕುರಿತು ಮನವಿ ಸಲ್ಲಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಹೇಳಿದರು.

ತಾಲ್ಲೂಕು ಪಂಚಾಯಿತಿ ಇಒ ದುಂಡಪ್ಪ ತುರಾದಿ, ತಹಶೀಲ್ದಾರ್ ವಿಠ್ಠಲ್‌ ಚೌಗುಲಾ, ಸಮಿತಿ ಸದಸ್ಯರಾದ ರಾಮಣ್ಣ ಚೌಡ್ಕಿ, ಸವಿತಾ ಗೊರಂಟ್ಲಿ, ಅನ್ನದಾನಯ್ಯಸ್ವಾಮಿ, ಮೆಹಬೂಬಪಾಷಾ ಮಾನ್ವಿ, ಅನ್ವರ್ ಹುಸೇನ್ ಗಡಾದ, ಪರಶುರಾಮ ಕೊರವರ, ಆನಂದ ಕಿನ್ನಾಳ, ಲಕ್ಷ್ಮಣ ಡೊಳ್ಳಿನ ಪಾಲ್ಗೊಂಡಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!