Home » ಲೈವ್ ನ್ಯೂಸ್ » ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಅರ್ಜಿ ಆಹ್ವಾನ

ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಅರ್ಜಿ ಆಹ್ವಾನ

Facebook
X
WhatsApp
Telegram

ಬೀದರ,21.ಫೆಬ್ರವರಿ.26:- ದಿನಾಂಕ:19-02-2026 ರಂದು ಜಿಲ್ಲಾಧಿಕಾರಿಗಳು ಬೀದರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕೇಂದ್ರ ಪುರಸ್ಕೃತ ಮಿಷನ್ ಶಕ್ತಿ ಉಪಯೋಜನೆ ಸಾಮರ್ಥ್ಯಯಡಿ, ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ತಾಯಿ ಮತ್ತು ಮಗುವಿನ ಆರೋಗ್ಯ ಮತ್ತು ಪೌಷ್ಠಿಕಾಂಶವನ್ನು ಸುಧಾರಿಸಲು ಹಾಗೂ ಪ್ರಸವದ ಮತ್ತು ನಂತರದ ಸಾಕಷ್ಟು ವಿಶ್ರಾಂತಿಗಾಗಿ ಅಂಶಿಕ ಪರಿಹಾರವನ್ನು ವೇತನ ನಷ್ಟಕ್ಕಾಗಿ ಪ್ರೋತ್ಸಾಹಧನದ ರೂಪದಲ್ಲಿ ಮಹಿಳೆಯ ಮೊದಲನೇಯ ಜೀವಂತ ಮಗುವಿಗೆ ಈ ಪ್ರಯೋಜನ ಲಭ್ಯವಾಗುತ್ತದೆ ಮೊದಲ ಪ್ರಸವದ ಗರ್ಭಿಣಿ, ಬಾಣಂತಿ ಮಹಿಳೆಯರಿಗೆ ಮೊದಲ ಕಂತು, ಗರ್ಭಿಣಿ ಎಂದು ಅಂಗನವಾಡಿ ಕೇಂದ್ರದಲ್ಲಿ ನೊಂದಣಿಯಾದಗ (150 ದಿನಗಳ ಒಳಗಾಗಿ), 3000/- ಸಾವಿರ ಹಾಗೂ ಎರಡನೇ ಕಂತು ಮಗು ಜನನ ನೊಂದಣಿಯಾದಗ ರೂ. 2000/- ಸಾವಿರ ಒಟ್ಟು ರೂ. 5000/- ಸಾವಿರ ಸಹಾಯಧನ 02 ಕಂತುಗಳಲ್ಲಿ ನೀಡಲಾಗುತ್ತದೆ.

ದಿನಾಂಕ:01-04-2022 ರಿಂದ ಜಾರಿಯಾದ ಎರಡನೇ ಜೀವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ ಫಲಾನುಭವಿಗಳು (ಮಗುವಿನ 03 ಲಸಿಕೆಗಳು ಪೂರ್ಣಗೊಂಡ) ನಂತರ ರೂ. 6000/-ಗಳ ಪ್ರಯೋಜನವನ್ನು ಒಂದೇ ಕಂತಿನಲ್ಲಿ ನೀಡಲಾಗುವುದು. ಜಿಲ್ಲೆಯ ಅರ್ಹ ಫಲಾನುಭವಿಗಳು ಅರ್ಜಿಗಳನ್ನು ಸಲ್ಲಿಸಿ, ಯೋಜನೆಯ ಸದುಪಯೋಗಪಡಿಸಿಕೊಳ್ಳುವಂತೆ ಹಾಗೂ ಈ ಯೋಜನೆಯ ಪ್ರಾರಂಭದಿAದ (2017 ರಿಂದ) ಇಲ್ಲಿಯ ವರೆಗೆ ಮೊದಲನೇ ಪ್ರಸವದ ಗರ್ಭಿಣಿ/ಬಾಣಂತಿಯರಿಗೆ ಹಾಗೂ 02ನೇ ಜೀವಂತ ಹೆಣ್ಣು ಮಗುವಿನ ಜನ್ಮ ನೀಡಿದ ಮಹಿಳೆಯರಿಗೆ ಒಟ್ಟು ನೊಂದಾಣಿಯಾದ ಒಟ್ಟು 1,05,819 ಫಲಾನುಭವಿಗಳಲ್ಲಿ ಸಹಾಯಧನ ನೀಡಿರುವ ಒಟ್ಟು 96,842 ಫಲಾನುಭವಿಗಳಿಗೆ ಅನುದಾನ ಒಟ್ಟು 430,774,000/- ನೇರವಾಗಿ ನಗದು ವರ್ಗಾವಣೆ (ಡಿಬಿಟಿ) ಮೂಲಕ ಫಲಾನುಭವಿಯ ಆಧಾರ ಲಿಂಕ್ ಹೊಂದಿರುವ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ ಎಂದು ಮಾನ್ಯ ಜಿಲ್ಲಾಧಿಕಾರಿಗಳು, ಬೀದರ ಜಿಲ್ಲೆ ಬೀದರ ರವರು ತಿಳಿಸಿರುತ್ತಾರೆ.

ಕೇಂದ್ರ/ರಾಜ್ಯ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕ ಉದ್ದಿಮೆಗಳ ನೌಕರರನ್ನು ಹೊರತು ಪಡಿಸಿ, ಜಿಲ್ಲೆಯ ಎಲ್ಲಾ ಗರ್ಭಿಣಿ ಮತ್ತು ಬಾಣಂತಿಯರು ಈ ಯೋಜನೆಯ ಸೌಲಭ್ಯ ಪಡೆಯಬಹುದು. ಅರ್ಜಿ ನಮೂನೆಗಳು ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತವೆ ಹಾಗೂ ಅರ್ಹ ಫಲಾನುಭವಿಗಳು ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಉಚಿತವಾಗಿ ನೊಂದಾಯಿಸಿಕೊಳ್ಳಬೇಕು, ಅರ್ಜಿ ಸಲ್ಲಿsಸಲ್ಲು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ, ಮಹಿಳಾ ಮೇಲ್ವಿಚಾರಕಿ, ಶಿಶು ಅಭಿವೃದ್ಧಿ ಯೋಜನಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಹಾಗೂ ನೊಂದಣಿಗೆ ಬೇಕಾಗುವ ದಾಖಲಾತಿಗಳು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿ, ಫಲಾನುಭವಿಯ ಆಧಾರ್ ಕಾರ್ಡ್ ಪ್ರತಿ, ತಾಯಿ ಮತ್ತು ಶಿಶು ರಕ್ಷಣಾ ಕಾರ್ಡ್, ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನರೇಗಾ ಕಾರ್ಡ್, ಇ-ಶ್ರಮ್ ಕಾರ್ಡ್, ಆಯುಷ್ಮಾನ ಕಾರ್ಡ್ ಇದರಲ್ಲಿ ಯಾವುದಾದರು ಒಂದು ನಕಲು ಪ್ರತಿ ಸಲ್ಲಿಸುವುದು.

ಎಂದು ಉಪ ನಿರ್ದೇಶಕರಾದ ಶ್ರೀ ಶ್ರೀಧರ ಎಂ.ಎಸ್. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೀದರ ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology