ಬೀದರ.03.ಜನವರಿ.26:- 2025ರಲ್ಲಿ ರಾಜ್ಯದಲ್ಲಿ ಪ್ರಥಮ ಮುದ್ರಣಗೊಂಡು ಪ್ರಕಟಗೊಳ್ಳುವ ಯಾವುದೇ ಭಾμÉಯ ಪುಸ್ತಕಗಳನ್ನು ರಾಜ್ಯ ಕೇಂದ್ರ ಗ್ರಂಥಾಲಯ ಕಬ್ಬನ್ ಪಾರ್ಕ್, ಬೆಂಗಳೂರು ಇಲ್ಲಿಗೆ ಪ್ರತಿ ಶೀರ್ಷಿಕೆ ಮೂರು ಪ್ರತಿಗಳನ್ನು ಮುಫತ್ತಾಗಿ ಸಲ್ಲಿಸಿ ದಿನಾಂಕ:31-01-2026 ಸಂಜೆ 5.30 ರೊಳಗಾಗಿ ನೋಂದಣಿ ಮಾಡಿಸತಕ್ಕದ್ದು, ನೋಂದಣಿಯಾದ ಪುಸ್ತಕಗಳನ್ನು ಮಾತ್ರ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಗಾಗಿ ಪರಿಗಣಿಸಲಾಗುತ್ತದೆಂದು ಬೀದರ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ (ಪ್ರ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊರ ರಾಜ್ಯಗಳಲ್ಲಿ 2025ರಲ್ಲಿ ಪ್ರಥಮ ಮುದ್ರಣಗೊಂಡು ಪ್ರಕಟವಾಗುವ ಆಂಗ್ಲ, ಹಿಂದಿ ಅಥವಾ ಯಾವುದೇ ಭಾμÉಯ ಪುಸ್ತಕಗಳನ್ನು ಆಯಾ ರಾಜ್ಯ ಕೇಂದ್ರ ಗ್ರಂಥಾಲಯಗಳಲ್ಲಿ ಅಥವಾ ಕೇಂದ್ರ/ ಆಯಾ ರಾಜ್ಯ ಸರ್ಕಾರಗಳಿಂದ ಅಧಿಸೂಚಿಸಲ್ಪಟ್ಟ ಅಧಿಕೃತ ಪುಸ್ತಕ ನೋಂದಣಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿ, ನೋಂದಣಿ ಪ್ರಮಾಣ ಪತ್ರದ ನಕಲು ಪ್ರತಿಯೊಂದಿಗೆ ಮತ್ತು ಸದರಿ ಪುಸ್ತಕದ ಒಂದು ಪ್ರತಿಯನ್ನು ದಿನಾಂಕ: 31-01-2026ರ ಸಂಜೆ 5.30ರ ಒಳಗಾಗಿ ಆಯ್ಕೆಗಾಗಿ ರಾಜ್ಯ ಕೇಂದ್ರ ಗ್ರಂಥಾಲಯಕ್ಕೆ ಸಲ್ಲಿಸತಕ್ಕದ್ದು, ನಿಗದಿತ ದಿನಾಂಕದ ನಂತರ ಸಲ್ಲಿಸುವ ಪುಸ್ತಕಗಳನ್ನು ಸ್ವೀಕರಿಸಲಾಗುವುದಿಲ್ಲ. ಸಾಹಿತ್ಯ, ಮಕ್ಕಳ ಸಾಹಿತ್ಯ, ಕಲೆ ಮತ್ತು ವಿಜ್ಞಾನ ಪ್ರಕಾರಗಳ ಯಾವುದೇ ಭಾμÉಯ ಪುಸ್ತಕಗಳನ್ನು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಸಲ್ಲಿಸಬಹುದು.
ನೋಂದಣಿಗಾಗಿ ನಿಗದಿತ ಅರ್ಜಿ ನಮೂನೆ ಹಾಗೂ ಮಾಹಿತಿಗಾಗಿ www.dpl.karnataka.gov.in ಹಾಗೂ ಮುಖ್ಯ ಗ್ರಂಥಾಲಯಾಧಿಕಾರಿಗಳ ಕಛೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ ಬೀದರ ಇಲ್ಲಿ ಅಥವಾ ಈ ಕಛೇರಿಯ ದೂರವಾಣಿ 08482 226401 ಗೆ ಸಂಪರ್ಕಿಸಲು ಅವರು ತಿಳಿಸಿದ್ದಾರೆ.






Any questions related to ಪ್ರಥಮ ಮುದ್ರಣಗೊಂಡ ಪುಸ್ತಕ ನೋಂದಣಿಗೆ ಸೂಚನೆ?