ಬೀದರ.06.ಜನವರಿ.26:- ಬೀದರ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದಲ್ಲಿ ಖಾಲಿ ಇರುವ ನಾಗರೀಕ ಸೇವಾ ಸಮಾಜದಿಂದ ಒಬ್ಬ ಸದಸ್ಯರನ್ನು ಮತ್ತು ನಾಗರೀಕ ಸಮಾಜದ ಒಬ್ಬ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದರ ಜಿಲ್ಲೆಯ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರಗಳಲ್ಲಿ ಖಾಲಿ ಇರುವ ನಾಗರೀಕ ಸೇವಾ ಸಮಾಜದ (ನಾಗರೀಕ ಸೇವೆಗಳಿಂದ ನಿರ್ವತ್ತನಾದ ಸಹಾಯಕ ಆಯುಕ್ತರು ದರ್ಜೆಗಿಂತ ಕಡಿಮೆಯಿಲ್ಲದ ದರ್ಜೆಯ ನಿವೃತ್ತ ಅಧಿಕಾರಿ) ಒಬ್ಬ ಸದಸ್ಯರನ್ನು ಹಾಗೂ ನಾಗರೀಕ ಸೇವಾ ಸಮಾಜದ (ಸಾರ್ವಜನಿಕ ವ್ಯಕ್ತಿಗಳು ಶಿಕ್ಷಣ, ಆರೋಗ್ಯ, ಬಡವರ ಏಳಿಗೆ ಮುಂತಾದ ಜನೋಪಕಾರಿ ಸೇವಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಪ್ರಖ್ಯಾತರಾಗಿರುವ ಪ್ರತಿಷ್ಠಿತ ವ್ಯಕ್ತಿಯಾಗಿರತಕ್ಕದ್ದು ಮತ್ತು ಸ್ವತಃ ಯಾವುದೇ ರಾಜಕೀಯ ಪಕ್ಷದೊಡನೆ ಅಥವಾ ಸೈದ್ದಾಂತಿಕ ಗುಂಪಿನೊಂದಿಗೆ ಜೊತೆಗೂಡಿರದ ವ್ಯಕ್ತಿಯಾಗಿರತಕ್ಕದ್ದು) ಒಬ್ಬ ಸದಸ್ಯರನ್ನು ನೇಮಕ ಮಾಡುವ ಸಂಬಂಧ ನಾಮನಿರ್ದೇಶನ ಮಾಡಿ ಸರ್ಕಾರಕ್ಕೆ ಕಳುಹಿಸಬೇಕಾಗಿರುತ್ತದೆ.
ಆದ್ದರಿಂದ ಬೀದರ ಜಿಲ್ಲೆಯ ಅರ್ಹ ಮತ್ತು ಅಭ್ಯರ್ಥಿಗಳು ದಿನಾಂಕ: 23-01-2026 ರೊಳಗಾಗಿ ಅಧ್ಯಕ್ಷರು, ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳು ಬೀದರ ಜಿಲ್ಲೆ ಬೀದರ ಅವರ ಕಛೇರಿಗೆ ಲಿಖಿತ ಪತ್ರದ ಮೂಲಕ ತಮ್ಮ ಅರ್ಹತಾ ಪತ್ರಗಳೊಂದಿಗೆ ಅಂಚೆ ಮೂಲಕ ಅಥವಾ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.






Any questions related to ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಹುದ್ದೆಗೆ ಅರ್ಜಿ ಆಹ್ವಾನ?