ಬೀದರ, ನವೆಂಬರ್.20 :-2024ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಯಾವುದೇ ಭಾಷೆಯ ಪುಸ್ತಕಗಳನ್ನು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯು ಪುಸ್ತಕ ಆಯ್ಕೆಗಾಗಿ ಲೇಖಕರು, ಲೇಖಕ-ಪ್ರಕಾಶಕರು ಮತ್ತು ಪ್ರಕಾಶಕರಿಂದ ಪುಸ್ತಕಗಳನ್ನು ಆಹ್ವಾನಿಸಿದೆ ಎಂದು ಬೀದರ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುಸ್ತಕಗಳು 2024ನೇ ವರ್ಷದಲ್ಲಿ ಮುದ್ರಣವಾಗಿ ಪ್ರಕಟವಾಗಿರಬೇಕು. ಪ್ರಥಮ ಮುದ್ರಣಗೊಂಡ ವರ್ಷದಿಂದ ಕನಿಷ್ಠ 10 ವರ್ಷಗಳ ಅಂತರವಿರಬೇಕು. ಆಯ್ಕೆಗೆ ಒಪ್ಪಿಸಿದ ಯಾವುದೇ ಭಾಷೆಯು ಗ್ರಂಥಗಳನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ. 2024 ರಲ್ಲಿ ಕರ್ನಾಟಕದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಪುಸ್ತಕಗಳನ್ನು ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ದಿನಾಂಕ: 01-01-2025ರ ಸಂಜೆ 5.30 ಒಳಗಾಗಿ ನೋಂದಣಿ ಮಾಡಿಸಬೇಕು. ಸದರಿ ಪುಸ್ತಕಗಳನ್ನು ಮಾತ್ರ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಅಯ್ಕೆಗಾಗಿ ಪರಿಗಣಿಸಲಾಗುವುದು. ಪುಸ್ತಕ ನೋಂದಣಿಗಾಗಿ ಅಂತರ್ಜಾಲ ತಿತಿತಿ. ಜಠಿಟ.ಞಚಿಡಿಟಿಚಿಣಚಿಞಚಿ.gov.iಟಿ ಅಥವಾ ದೂರವಾಣಿ ಸಂಖ್ಯೆ 080-22864990, 22867358 ಗೆ ಸಂಪರ್ಕಿಸಬಹುದಾಗಿದೆ. ಮಾಹಿತಿಗಾಗಿ ಮುಖ್ಯ ಗ್ರಂಥಾಲಯಾಧಿಕಾರಿ ಕಛೇರಿ ಬೀದರ ನಗರ ಕೇಂದ್ರ ಗ್ರಂಥಾಲಯಕ್ಕೆ ದೂರವಾಣಿ ಸಂಖ್ಯೆ 08482-220086 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
