Home » ಲೈವ್ ನ್ಯೂಸ್ » ಪುಸ್ತಕಗಳ ಆಯ್ಕೆಗಾಗಿ ಅರ್ಜಿ ಆಹ್ವಾನ

ಪುಸ್ತಕಗಳ ಆಯ್ಕೆಗಾಗಿ ಅರ್ಜಿ ಆಹ್ವಾನ

Facebook
X
WhatsApp
Telegram

ಬೀದರ,03.ಜನವರಿ.26:- ಸಾರ್ವಜನಿಕ ಗ್ರಂಥಾಲಯ ಇಲಾಖೆಯು 2025ರಲ್ಲಿ ಪ್ರಥಮ ಮುದ್ರಣಗೊಂಡ ಪುಸ್ತಕಗಳನ್ನು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ, ಪುಸ್ತಕ ಆಯ್ಕೆಗಾಗಿ ನೋಂದಣಿ ಮಾಡಲು ಲೇಖಕರು,

ಲೇಖಕ-ಪ್ರಕಾಶಕರು,ಪ್ರಕಾಶಕರು ,ಮತ್ತು ಪುಸ್ತಕ ಮಾರಾಟಗಾರರಿಂದ ಪುಸ್ತಕಗಳನ್ನು ಆಹ್ವಾನಿಸಲಾಗಿದೆ ಎಂದು ಬೀದರ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


  2025ನೇ ಸಾಲಿನಲ್ಲಿ ರಾಜ್ಯದಲ್ಲಿ ಪ್ರಥಮ ಮುದ್ರಣಗೊಂಡು ಪ್ರಕಟಗೊಳ್ಳುವ ಕನ್ನಡ ಹಾಗು ಇತರೆ ಭಾμÉಯ ಪುಸ್ತಕಗಳನ್ನು ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಒಂದು ಪುಸ್ತಕದ ಮೂರು ಪ್ರತಿಗಳನ್ನು ಉಚಿತವಾಗಿ ಸಲ್ಲಿಸಿ ದಿನಾಂಕ:31-01-2026 ಸಂಜೆ 5:30ರ ಒಳಗಾಗಿ ನೋದಣಿ ಮಾಡಿಸತಕ್ಕದ್ದು, ನೋದಣಿಯಾದ ಪುಸ್ತಕಗಳನ್ನು ಮಾತ್ರ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಗಾಗಿ ಪರಿಗಣಿಸಲಾಗುವುದು ಅಂತಿಮ ದಿನಾಂಕದ ನಂತರ ನೋಂದಣಿಯಾಗುವ ಪುಸ್ತಕಗಳನ್ನು ಆಯ್ಕೆಗಾಗಿ ಪರಿಗಣಿಸಲಾಗುವುದಿಲ್ಲಾ.

ಹೊರ ರಾಜ್ಯಗಳಲ್ಲಿ 2025ರಲ್ಲಿ ಪ್ರಥಮ ಮುದ್ರಣಗೊಂಡು ಪ್ರಕಟವಾಗುವ ಆಂಗ್ಲ,ಹಿಂದಿ, ಅಥವಾ ಯಾವುದೆ ಭಾμÉಯ ಪುಸ್ತಕಗಳನ್ನು ಆಯಾ ರಾಜ್ಯ ಕೇಂದ್ರ ಗ್ರಂಥಾಲಯಗಳಲ್ಲಿ ಅಥವಾ ಯಾವುದೆ ಭಾμÉಯ ಪುಸ್ತಕಗಳನ್ನು ಆಯಾ ರಾಜ್ಯ ಕೇಂದ್ರ ಗ್ರಂಥಾಲಯಗಳಲ್ಲಿ ಅಥವಾ ರಾಜ್ಯ ಸರಕಾರದಿಂದ ಅಧಿಸೂಚಿಸಲ್ಪಟ್ಟ ಅಧಿಕೃತ ಪುಸ್ತಕ ನೋಂದಣಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ನೊಂದಣಿ ಮಾಡಿಸಿ, ನೊಂದಣಿ ಪ್ರಮಾಣ ಪತ್ರದ ನಕಲು ಪ್ರತಿಯೋಂದಿಗೆ ಮತ್ತು ಸದರಿ ಪುಸ್ತಕದ ಒಂದು ಪ್ರತಿಯನ್ನು ಸಲ್ಲಿಸತಕ್ಕದ್ದು.

ಸಾಹಿತ್ಯ, ಮಕ್ಕಳ ಸಾಹಿತ್ಯ,ಕಲೆ ಮತ್ತು ವಿಜ್ಞಾನ ಪ್ರಕಾರಗಳ ಯಾವುದೆ ಭಾμÉಯ ಪುಸ್ತಕಗಳನ್ನು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಸಲ್ಲಿಸಬಹುದಾಗಿದೆ, ಪುಸ್ತಕಗಳನ್ನು ಸಲ್ಲಿಸುವ ವಿಳಾಸ:ರಾಜ್ಯ ಕೇಂದ್ರ ಗ್ರಂಥಾಲಯ ಕಬ್ಬನ ಉದ್ಯಾನವನ ಬೆಂಗಳೂರು-560001 ರವರಿಗೆ ಸಲ್ಲಿಸಬಹುದಾಗಿದೆ ಹಾಗು ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬಸೈಟ, Dpl Karnataka.gov.in ಅಥವಾ ಆಯುಕ್ತರ ಕಛೇರಿ ದೂರವಾಣಿ ಸಂಖ್ಯೆ 080-22212128 ಅಥವಾ ಮುಖ್ಯಗ್ರಂಥಾಲಯಾಧಿಕಾರಿಗಳ ಕಛೇರಿ ನಗರ ಕೇಂದ್ರ ಗ್ರಂಥಾಲಯ ಜನವಾಡ ರಸ್ತೆ ಬೀದರ ರವರಿಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology