Home » ಲೈವ್ ನ್ಯೂಸ್ » (ಪಿ.ಹೆಚ್.ಡಿ.) ಸಂಶೋಧನ ಅಭ್ಯರ್ಥಿಗಳಿಗೆ ಫೆಲೋಶಿಪ್ಗಾಗಿ ಅರ್ಜಿ ಆಹ್ವಾನಿಸಲಾಗಿದೆ.

(ಪಿ.ಹೆಚ್.ಡಿ.) ಸಂಶೋಧನ ಅಭ್ಯರ್ಥಿಗಳಿಗೆ ಫೆಲೋಶಿಪ್ಗಾಗಿ ಅರ್ಜಿ ಆಹ್ವಾನಿಸಲಾಗಿದೆ.  

Facebook
X
WhatsApp
Telegram

ಬೆಂಗಳೂರು.30.ಡಿಸೆಂಬರ್.25:  ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಫೆಲೋಶಿಪ್‌ಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಯಲಾಗಿದೆ;

ಇದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪಿಹೆಚ್‌ಡಿ ಫೆಲೋಶಿಪ್ (2025-26) ಆಗಿದ್ದು, 10-02-2025 ಅಥವಾ ನಂತರ ಪಿಹೆಚ್‌ಡಿ ಆರಂಭಿಸಿದ ಪ್ರವರ್ಗ-1, 2A, 3A, ಮತ್ತು 3B ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ; ಆಫ್‌ಲೈನ್ ಅರ್ಜಿಗಳನ್ನು ಜನವರಿ 9, 2026ರೊಳಗೆ ಸಂಬಂಧಪಟ್ಟ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.


ಅರ್ಜಿ ಪ್ರಕ್ರಿಯೆ:
ವೆಬ್‌ಸೈಟ್‌ಗೆ ಭೇಟಿ ನೀಡಿ: bcwd.karnataka.gov.in (ಇಲಾಖೆ ವೆಬ್‌ಸೈಟ್)ಗೆ ಹೋಗಿ.


ಮಾಹಿತಿ ಡೌನ್‌ಲೋಡ್ ಮಾಡಿ: ಪಿಹೆಚ್‌ಡಿ ಫೆಲೋಶಿಪ್ ಯೋಜನೆ ವಿವರಗಳು ಮತ್ತು ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ.
ಅರ್ಜಿ ಭರ್ತಿ: ನಮೂನೆಯಲ್ಲಿ ಕೇಳಲಾದ ವಿವರ, ಭಾವಚಿತ್ರ, ಸಹಿ, ಮತ್ತು ಶೈಕ್ಷಣಿಕ ಮಾಹಿತಿಯನ್ನು ನಮೂದಿಸಿ.


ದಾಖಲೆಗಳ ಲಗತ್ತು: ಮುಚ್ಚಳಿಕೆ ಪತ್ರ, ವಿಶ್ವವಿದ್ಯಾಲಯದ ದೃಢೀಕರಣ ಪತ್ರ, ಮತ್ತು ಇತರ ಅಗತ್ಯ ದಾಖಲೆಗಳನ್ನು ಲಗತ್ತಿಸಿ.
ಅರ್ಜಿ ಸಲ್ಲಿಸುವುದು: ಎಲ್ಲಾ ದಾಖಲೆಗಳ ಒಂದು ಸೆಟ್‌ನ ಸ್ವ-ದೃಢೀಕೃತ ಪ್ರತಿಗಳನ್ನು ಪಿಹೆಚ್‌ಡಿ ಮಾಡುತ್ತಿರುವ ವಿಶ್ವವಿದ್ಯಾಲಯ ಇರುವ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ.


ಮುಖ್ಯ ದಿನಾಂಕ: ಜನವರಿ 9, 2026ರಂದು ಅನ್ವಯಿಸುತ್ತದೆ.
ಸಂಪರ್ಕಿಸಿ: ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ: 8050770004.

ಕರ್ನಾಟಕದ ಶಾಸನಬದ್ಧ ವಿಶ್ವ ವಿದ್ಯಾಲಯಗಳಲ್ಲಿ/ ಅಧೀನಕ್ಕೆ ಒಳಪಡುವ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಪಿ.ಹೆಚ್.ಡಿ. ಅಧ್ಯಯನ ಮಾಡುತ್ತಿರುವ ಹೊಸ ಅಭ್ಯರ್ಥಿಗಳು ಮಾತ್ರ ಆಫ್-ಲೈನ್ ಮೂಲಕ ಅರ್ಜಿ ಸಲ್ಲಿಸಲು 2026 ರ ಜನವರಿ, 09 ಕೊನೆಯ ದಿನವಾಗಿದೆ.

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆಫ್ಲೈನ್ ಅರ್ಜಿ ಪ್ರತಿ ಹಾಗೂ ಮೂಲ ದಾಖಲಾತಿಗಳನ್ನು ಜನವರಿ, 09 ರ ಸಂಜೆ 5.30 ಗಂಟೆ ಯೊಳಗೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಮ್ಯಾನ್ಸ್ ಕಾಂಪೌಂಡ್ ಹತ್ತಿರ ದೇವರಾಜ ಅರಸು ಭವನ, ಮಡಿಕೇರಿ ಇಲ್ಲಿಗೆ ಸಲ್ಲಿಸಬಹುದಾಗಿದೆ.

ಹೆಚ್ಚಿನ ವಿವರಗಳು ಇಲಾಖಾ ವೆಬ್ಸೈಟ್ https://bcwd.karnataka.gov.in ನಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ಎಲ್ಲಾ ಮಾಹಿತಿಯನ್ನು ಓದಿ, ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ದೀಪಕ್ ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 8050770004 (ಕಚೇರಿ ಕಾರ್ಯನಿರ್ವಹಿಸುವ ಸಮಯ ಬೆಳಿಗ್ಗೆ 10.00 ರಿಂದ ಸಂಜೆ 05.30 ರವರೆಗೆ) ನ್ನು ಸಂಪರ್ಕಿಸಬಹುದು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology