ಬೀದರ್:-೦೩, ಬೀದರ ನಗರದ ವೈ. ಬಿ. ಹೋಟೆಲನಲ್ಲಿ ಪಿ.ಎಲ್.ಡಿ. ಬ್ಯಾಂಕಿನ ನೂತನ ಅಧ್ಯಕ್ಷರಾದ ಶ್ರೀ ರಾಜಕುಮಾರ ಮಾಳಗೆ ಅವರಿಗೆ ಚಂದ್ರ ಸಾಂಸ್ಕೃತಿಕ ಸಾಹಿತಿಕ ಹಾಗೂ ಶೈಕ್ಷಣಿಕ ಚಾರಿಟೇಬಲ ಟ್ರಸ್ಟ್ ವತಿಯಿಂದ ದಿನಾಂಕ ೨-೨-೨೦೨೫ ರಂದು ಸನ್ಮಾನಿಸಿ ಗೌರವಿಸಲಾಯಿತು.
ಟ್ರಸ್ಟ್ ಅಧ್ಯಕ್ಷರಾದ ಪ್ರವೀಣಚಂದ್ರ ಮೀರಾಗಂಜಕರ್ ಅವರು ಪಿ.ಎಲ್.ಡಿ. ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಶ್ರೀ ರಾಜಕುಮಾರ ಮಾಳಗೆ ಅವರಿಗೆ ಶಾಲು ಹೊದಿಸಿ ಹೂಮಾಲೆ ಹಾಕಿ ಸನ್ಮಾನಿಸಿ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ನ ಕಾರ್ಯದರ್ಶಿ ಪ್ರದೀಪಚಂದ್ರ, ಸಜ್ಞಾನಿ, ದೇವೇಂದ್ರ ಹಲಗೆ ಮತ್ತು ಕೃಷ್ಣಕಾಂತ ವಿಶ್ವಕರ್ಮ, ಸಂತೋಷ ಲದ್ದೆ, ಶರಣುಬಸಪ್ಪ ವಾಲಿ ಅವರುಗಳು ಉಪಸ್ಥಿತರಿದ್ದರು.