Home » ಲೈವ್ ನ್ಯೂಸ್ » ಪಿಎಚ್‌ಡಿ ಮತ್ತು ವಿಕಲಚೇತರ ಪ್ರಮಾಣ ಪತ್ರಗಳ ನೈಜತೆಯ ಪರಿಶೀಲನೆ ಉನ್ನತ ಶಿಕ್ಷಣ ಇಲಾಖೆ ಅಂಗಳಕೆ

ಪಿಎಚ್‌ಡಿ ಮತ್ತು ವಿಕಲಚೇತರ  ಪ್ರಮಾಣ ಪತ್ರಗಳ ನೈಜತೆಯ ಪರಿಶೀಲನೆ ಉನ್ನತ ಶಿಕ್ಷಣ ಇಲಾಖೆ ಅಂಗಳಕೆ 

Facebook
X
WhatsApp
Telegram

 

ಪಿಎಚ್‌ಡಿ ಮತ್ತು ವಿಕಲಚೇತರ  ಪ್ರಮಾಣ ಪತ್ರಗಳ ನೈಜತೆಯ ಪರಿಶೀಲನೆ ಉನ್ನತ ಶಿಕ್ಷಣ ಇಲಾಖೆ ಅಂಗಳಕೆ  ಪಿಎಚ್‌ಡಿ, ನೆಟ್, ಸೈಟ್ ತೇರ್ಗಡೆಯಾದವರಿಗೆ ಮಾತ್ರ ಅತಿಥಿ ಉಪನ್ಯಾಸಕ ಕೆಲಸ ನೀಡಬೇಕು ಎಂದು ರಾಜ್ಯ ಹೈಕೋರ್ಟ್ ಆದೇಶಿಸಿದೆ. ರಾಜ್ಯದಲ್ಲಿ ಸದ್ಯ ಕೋಟ್ ೯ ಆದೇಶದ ಪ್ರಕಾರವೇ ಅತಿಥಿ ಉಪನ್ಯಾಸಕರ ಆಯ್ಕೆ ಕುರಿತು ಉನ್ನತ ಶಿಕ್ಷಣ ಇಲಾಖೆ ಕೌನ್ಸೆಲಿಂಗ್ ನಡೆಸುತ್ತಿದೆ. ಆದರೆ ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ ವಿಕಲಚೇತನರಿಗೆ ಆದ್ಯತೆ ನೀಡಬೇಕು ಎಂದು ಉಲ್ಲೇಖಿಸಿಲ್ಲ, ಇಲಾಖೆ ಮಾತ್ರ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಎಲ್ಲ ವಿಷಯಗಳಲ್ಲೂ ಮೊದಲು ವಿಕಲಚೇತನರಿಗೆ ಆದ್ಯತೆ ನೀಡಿ ನಂತರ ಶೈಕ್ಷಣಿಕ ಆರ್ಹತೆ ಮತ್ತು ಸೇವಾನುಭವವನ್ನು ಪರಿಗಣಿಸುತ್ತಿದೆ. ಇದು 10-15 ವರ್ಷಗಳ ಸೇವಾನುಭವ ಇರುವ ಅತಿಥಿ ಉಪನ್ಯಾಸಕರ ಆಕ್ರೋಶಕ್ಕೆ ಕಾರಣವಾಗಿದೆ.

ಆದ್ಯತೆ ಮತ್ತು ಶೈಕ್ಷಣಿಕ ಅರ್ಹತೆ ಕಾರಣಕ್ಕಾಗಿಯೇ ಹಲವರು ನಕಲಿ ಪ್ರಮಾಣ ಪತ್ರಗಳನ್ನು ಪಡೆದು ಅರ್ಜಿ ಸಲ್ಲಿಸಿ, ಮೆರಿಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬಂದು ಸದ್ಯ ತಮಗೆ ಅನುಕೂಲ ಇರುವ ಕಾಲೇಜನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಹಲವು ವರ್ಷಗಳ ಕಾಲ ಕಾಲೇಜಿನಲ್ಲಿ ಪಾಠ ಮಾಡಿಯೂ ಕೆಲಸದಿಂದ ವಿಮುಖರಾಗುವವರ ಆಕ್ರೋಶ ಒಂದೆಡೆಯಾದರೆ, ಏನೂ ಅನುಭವ ಇಲ್ಲದೆಯೂ ಕೇವಲ ಪ್ರಮಾಣ ಪತ್ರದ ಆಧಾರದಿಂದ ಕೆಲಸ ಖಾತ್ರಿ ಮಾಡಿಕೊಂಡಿರುವವರ ಸಂತಸ ಮತ್ತೊಂದೆಡೆ. ಇದಕ್ಕೆಲ್ಲ ಪ್ರಮುಖ ಕಾರಣ ಕೆಲಸ ಖಾತ್ರಿ ಮಾಡಿಕೊಂಡಿರುವವರ ಬಳಿ ಇರುವ ಪ್ರಮಾಣ ಪತ್ರಗಳು. ಆ ಪ್ರಮಾಣ ಪತ್ರಗಳ ನೈಜತೆಯ ಪರಿಶೀಲನೆ ಕಳೆದ ಶೈಕ್ಷಣಿಕ ಸಾಲಿನಿಂದ ಶುರುವಾಗಿದೆ. ಅದಕ್ಕಾಗಿ ಇಲಾಖೆ ತಾಂತ್ರಿಕ

ಮೇಲ್ದರ್ಜೆ ಅಳವಡಿಸಿಕೊಂಡಿದೆ. ಪ್ರಮಾಣ ಪತ್ರಗಳ ನೈಜತೆ ಪರಿಶೀಲನೆಗೆ ಮುಂದಾಗಿದೆ. ಈ ನೈಜತೆ ಪರಿಶೀಲನಾ ಕಾರ್ಯ ಉನ್ನತ ಶಿಕ್ಷಣ ಇಲಾಖೆಗೆ ಹೊಸದೇನಲ್ಲ, ಈ ಹಿಂದೆ ಅಂದರೆ 2017ರಲ್ಲಿ ಇಂಥದ್ದೇ ಪರಿಶೀಲನೆಗೆ ಸ್ವತಃ ಇಲಾಖೆಯೆ ಮುಂದಾದಾಗ ಸುಮಾರು 23 ಜನ ಪಿಎಚ್‌ ಡಿ ಪಡೆದಿರುವುದು ನಕಲಿ ಎಂದು ಸಾಬೀತಾಗಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ಸಹ ದಾಖಲಾಗಿತ್ತು.

2025-26ನೇ ಶೈಕ್ಷಣಿಕ ಸಾಲಿನಲ್ಲಿ ಉನ್ನತ ಶಿಕ್ಷಣ ಇಲಾಖೆ ಅತಿಥಿ ಉಪನ್ಯಾಸಕರು ಸಲ್ಲಿಸಿರುವ ಪ್ರಮಾಣ ಪತ್ರಗಳ ನೈಜತೆಗಾಗಿ ಮುಂದಾಗಿ ಅದಕ್ಕೆ ತಗುಲುವ ವೆಚ್ಚವನ್ನು ಅವರೇ ಭರಿಸುವಂತೆ ಸೂಚಿಸಿದ್ದರಿಂದ ನೈಜತೆ ಪ್ರಮಾಣ ಪತ್ರಗಳೂ ನಕಲಿ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಈಗ ಇಲಾಖೆಯೇ ಪ್ರಮಾಣ ಪತ್ರಗಳ ನೈಜತೆ ಅರಿಯಲು ಮುಂದಾಗುವ ಅನಿವಾರ್ಯತೆ ಎದುರಾಗಿದೆ. ಇಂಥ ಸಂದಿಗ್ಧ ಸ್ಥಿತಿಯಲ್ಲೂ ಇಲಾಖೆ ವಿಕಲಚೇತನರಿಗೆ ಆದ್ಯತಾನುಸಾರ ಶೇಕಡಾ 10 ರಷ್ಟು ಅಂಕಗಳನ್ನು ಹೆಚ್ಚುವರಿಯಾಗಿ ನೀಡಿದ್ದಲ್ಲದೇ ಮೆರಿಟ್ ಪಟ್ಟಿಯಲ್ಲೂ ಅವರಿಗೆ ಅಗ್ರಸ್ಥಾನ ನೀಡಿರುವುದು ವಿಕಲಚೇತನ ಪ್ರಮಾಣ ಪತ್ರಗಳ ನೈಜತೆ ಮಾತ್ರವಲ್ಲ, ಪ್ರಮಾಣ ಪತ್ರ ಹೊಂದಿರುವವರ ಅಂಗಗಳ ಮರುಪರೀಕ್ಷೆಗೂ ಒತ್ತಾಯಿಸುತ್ತಿರುವುದು ತಪ್ಪೇನಲ್ಲ,

ಆದರೆ ವಿಕಲಚೇತನ ಪ್ರಮಾಣ ಪತ್ರ ಸಲ್ಲಿಸಿದವರೆಲ್ಲ ನಕಲಿ ಎಂಬುದು ಒಪ್ಪುವ ವಿಚಾರವಲ್ಲ, ಖಂಡಿತವಾಗಿ ನಕಲಿ ಪ್ರಮಾಣ ಪತ್ರ ಪಡೆದವರು ಇರಬಹುದು. ಆದರೆ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಸಮಂಜಸವಲ್ಲ. ಹೀಗೆ ನಕಲಿ ಪ್ರಮಾಣ ಪತ್ರ ಪಡೆದವರಿಗೆ ಖಂಡಿತವಾಗಿ ಅಳುಕು ಇದ್ದೇ ಇರುತ್ತದೆ. ಅದರಲ್ಲಿ ಸುಮಾರು ಶೇಕಡಾ 80 ರಷ್ಟು ಜನ ಇಲಾಖೆ ನಡೆಸುತ್ತಿರುವ ಕೌನ್ಸೆಲಿಂಗ್‌ಗೆ ಹಾಜರಾಗಿಲ್ಲ ಎಂಬುದು ಗಮನಾರ್ಹ ಸಂಗತಿ. ಇನ್ನುಳಿದವರು ಖಂಡಿತವಾಗಿ ನಿಜವಾಗಿಯೂ ವಿಕಲಚೇತರರಿಬಹುದು. ಕೌನ್ಸೆಲಿಂಗ್‌ಗೆ ಹಾಜರಾದವರ ಪೈಕಿ ಸುಮಾರು ಶೇಕಡಾ 5 ರಿಂದ 10 ರಷ್ಟು ಜನ ನಕಲಿ ವಿಕಲಚೇತನರು ಇರುವುದನ್ನು ಅಲ್ಲಗಳೆಯುವಂತಿಲ್ಲ. ಖಂಡಿತವಾಗಿ ಅವರಿಗೆ ತಕ್ಕ ಶಾಸ್ತ್ರಿ ಆಗಲೇಬೇಕು. ಮಾನವೀಯ ನೆಲೆಗಟ್ಟಿನ ವಿಚಾರದಲ್ಲಿ ಹೇಳುವುದಾದರೆ ಸುಮಾರು 20 ವರ್ಷಗಳಿಂದ ರಾಜ್ಯದ ಸರಕಾರಿ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವವರ ಪೈಕಿ ಬಹುತೇಕ ಜನರು ತಮ್ಮ ಸ್ನಾತಕ ಪದವಿಯ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಸೇರಿದಂತೆ ಕೆಲವು ಸ್ನಾತಕ ವಿಷಯಗಳಲ್ಲಿ ಮೂರನೇ ದರ್ಜೆಯಲ್ಲಿ ತೇರ್ಗಡೆಯಾದವರು ತಾತ್ಕಾಲಿಕ, ಭಾಗಶಃ ಹೀಗೇ ಬೇರೆ ಬೇರೆ ಹೆಸರುಗಳಿಂದ ಗುರುತಿಸಿಕೊಂಡು ಇಂದು ಅತಿಥಿ ಉಪನ್ಯಾಸಕರು ಎನಿಸಿಕೊಂಡವರೇ. ಅವರಿಂದ ವಿದ್ಯಾರ್ಜನೆ ಮಾಡಿದವರು ಇಂದು ದೊಡ್ಡ ದೊಡ್ಡ ಹುದ್ದೆಗಳಲ್ಲಿ ಅಲಂಕೃತಗೊಂಡಿರುವುದು ಸುಳ್ಳೇನಲ್ಲ, 2018ರಲ್ಲಿ ಯಿಜಿಸಿ ನೆಟ್, ಸ್ಟೇಟ್, ಪಿಎಚ್ಡಿಗಳನ್ನು ಅತಿಥಿ ಉಪನ್ಯಾಸಕರ ಹುದ್ದೆಗಳಿಗೂ ಕಡ್ಡಾಯಗೊಳಿಸಿದ್ದು, ಸೇವಾನುಭವ

ಇದ್ದವರಿಗೆ ಕೊಂಚ ನುಂಗಲಾರದ ತುತ್ತಾಯಿತು. ಈ ಯಾವುದೇ ಅರ್ಹತೆ ಇಲ್ಲದವರು ಮಾಡುವ ಪಾಠಕ್ಕೂ, ಈ ಎಲ್ಲ ಅರ್ಹತೆ ಇರುವವರು ಮಾಡುವ ಪಾಠಕ್ಕೂ ಖಂಡಿತವಾಗಿ ವ್ಯತ್ಯಾಸವಿದೆ. ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ಶೈಕ್ಷಣಿಕ ಅರ್ಹತೆ ನಿಗದಿ ಮಾಡಿರುವುದು ಸರಿಯೋ? ತಪ್ಪೋ? ಬೇಡ. ಆದರೆ ಸೇವಾನುಭವಕ್ಕೆ ಆದ್ಯತೆ ನೀಡದಿರುವುದು ಖಂಡಿತವಾಗಿ ತಪ್ಪೇ.

ಯುಜಿಸಿ ಮತ್ತು ಉನ್ನತ ಶಿಕ್ಷಣ ಇಲಾಖೆ ಪ್ರಮಾಣ ಪತ್ರಗಳಿಗೆ ಮಾತ್ರ ಬೆಲೆ ನೀಡುವ ಪರಿಪಾಠ ಆರಂಭಿಸಿದ್ದರಿಂದ ಸಹಜವಾಗಿ ನಕಲಿಗಳ ಸಂಖ್ಯೆ ಉದ್ಭವಿಸುತ್ತಿರುವುದು ಸತ್ಯ. ಈ ವ್ಯೂಹದಲ್ಲಿ ಸೇವಾನುಭವ ಇದ್ದವರು ಬದುಕುವ ಮುಂದಿನ ದಾರಿ ಕಾಣದೇ ಸಿಲುಕಿರುವುದು ಸಜ ನಿಜವೇ. ಇದುವರೆಗೂ ಹತ್ತು-ಹದಿನೈದು ಸಾವಿರ ರೂಪಾಯಿವರೆಗೆ ಇದ್ದ ಗೌರವ ಧನ ಈಗ ಸುಮಾರು 35 ರಿಂದ 40 ಸಾವಿರ ರೂಪಾಯಿಯಾದ ಕಾರಣಕ್ಕೆ ಮಕ್ಕಳಿಗೆ ಪಾಠ ಕಲಿಸುವವರು ನಕಲಿಗಳಾಗಿರಬಾರದು. ಹಾಗೆಯೇ ಪ್ರಮಾಣ ಪತ್ರಗಳಿಗಿಂತ ಅವರ ಪಾಠದ ವೈಖರಿಯೇ ಪ್ರಮುಖ ಮಾನದಂಡವಾಗಬೇಕು. ಅಂದಾಗ ಮಾತ್ರ ಗುಣಮಟ್ಟದ ಶಿಕ್ಷಣ ಸಾಧ್ಯ. ಇದಕ್ಕೆ ಪರಿಹಾರವೆಂದರೆ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಯುಜಿಸಿ ನಿಯಮಾನುಸಾರ ಭರ್ತಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯದ ವಿದ್ಯಾರ್ಥಿಗಳು ಸರಕಾರ, ಉನ್ನತ ಶಿಕ್ಷಣ ಇಲಾಖೆ ಹಾಗೂ ಯುಜಿಸಿಯ ಈ ತಲೆಬುಡವಿಲ್ಲದ ನಿಯಮಗಳಿಂದ ಅತ್ಯುತ್ತಮ ಪಾಠ, ಪ್ರಚನಗಳಿಲ್ಲದೇ ದಾರಿ ತಪ್ಪುವುದು ಖಚಿತ.

ರಾಜ ಮಾರ್ಗ

ಉದಯಕಾಲ ವಿಶೇಷ

-ಬಸವರಾಜ ಕರುಗಲ್

9380605892

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology