ಬೆಂಗಳೂರು.07.ಆಗಸ್ಟ್.25:- ರಾಜ್ಯ ಸರ್ಕಾರ ಅಂಬೇಡ್ಕರ್ ಅಭಿವೃದ್ಧಿ ಯೋಜನೆ ವತಿಯಿಂದ ರಾಜ್ಯಾದ್ಯಂತ ಪರಿಶಿಷ್ಟ ಜಾತಿ ಸಮುದಾಯಕೆ ವಿವಿಧ ಯೋಜನೆಗಳಿಗೆ ಅರ್ಹರು ಅಭ್ಯರ್ಥಿಗಳಿಂದ ಅರ್ಜಿಅಭಾನಿಸಲಾಗಿದೆ.
ಕೊನೆಯ ದಿನಾಂಕ :10/09/2025
ವಿವಿಧ ಆರ್ಥಿಕ ಯೋಜನೆಗಳಾದ ನೇರಸಾಲ ಯೋಜನೆ, ಉದ್ಯಮಶೀಲತಾ ಅಭಿವೃದ್ಧಿ ಯೋಜನೆ, ಸ್ವಾವಲಂಭಿ ಸಾರಥಿ ಯೋಜನೆ, ಫಾಸ್ಟ್ ಫುಡ್ ಟ್ರಕ್ ಟ್ರೆಲರ್/ಮೊಬೈಲ್ ಕಿಚನ್ ಫುಡ್ ಕಿಯೋಸ್ಕ್, ಹೈನುಗಾರಿಕೆ ಯೋಜನೆ, ಕುರಿ ಸಾಕಾಣಿಕೆ ಯೋಜನೆ, ಮೈಕ್ರೋಕ್ರೆಡಿಟ್ ಪ್ರೇರಣಾ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಹಾಗೂ ಭೂ ಒಡೆತನ ಯೋಜನೆಗಳಿಗೆ ಗ್ರಾಮ-1, ಕರ್ನಾಟಕ-1, ಸೇವಾ ಸಿಂಧು, ಪೋರ್ಟಲ್ ಮೂಲಕ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್
https://sevasindhu.karnataka.gov.in ಹಾಗೂ ದೂ.ಸಂ.08182-224349 ನ್ನು ಸಂಪರ್ಕಿಸಬಹುದು
ಮೈಕ್ರೋ ಕ್ರೆಡಿಟ್ (ಪ್ರೇರಣಾ)
ಯೋಜನೆ:
ಮಹಿಳಾ ಸ್ವಸಹಾಯ ಸಂಘಗಳಿಗೆ (ಕನಿಷ್ಠ 30 ಸದಸ್ಯರು) ಕಿರು ಆರ್ಥಿಕ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ ಸೌಲಭ್ಯ ನೀಡಲಾಗುವುದು.
ಉದ್ಯಮಶೀಲತಾ ಅಭಿವೃದ್ಧಿ
ಯೋಜನೆ:
( ಬ್ಯಾಂಕ್‌ಗಳ ಸಹಯೋಗದೊಂದಿಗೆ)
1. ಸ್ವಾವಲಂಬಿ ಸಾರಥಿ:
ಸರಕು ವಾಹನ/ಟ್ಯಾಕ್ಸಿ (ಹಳದಿ ಬೋರ್ಡ್) ಉದ್ದೇಶದಡಿ ಘಟಕ ವೆಚ್ಚದ ಶೇ.75 ರಷ್ಟು ಅಥವಾ ಉದ್ದೇ ಗರಿಷ್ಟ ರೂ. 4.00 ಲಕ್ಷಗಳ ಸಹಾಯಧನ.
2. ಫಾಸ್ಟ್ ಫುಡ್ ಟ್ರಕ್ ಟ್ರೈಲರ್/ಮೊಬೈಲ್ ಪಿಜನ್
ವಾಹನಗಳ ಉದ್ದೇಶದಡಿ ಘಟಕ ವೆಚ್ಚದ ಶೇ.75 ರಷ್ಟು ಅಥವಾ ಗರಿಷ್ಠ ರೂ. 4.00 ಲಕ್ಷಗಳ ಸಹಾಯಧನ
3. ಹೈನುಗಾರಿಕೆ:
ಹೈನುಗಾರಿಕೆ ಕೈಗೊಳ್ಳಲು ಎರಡು ಎಮ್ಮೆ/ಹಸುಗಳಿಗೆ ಘಟಕ ವೆಚ್ಚದ ಶೇ.50ರಷ್ಟು ಅಥವಾ ಗರಿಷ್ಠ 1.25 ಲಕ್ಷ
4. ಇತರೆ ಉದ್ದೇಶ:
ವ್ಯಾಪಾರ ಮತ್ತು ಇತರೆ ಉದ್ದೇಶಗಳಿಗೆ ಘಟಕ ವೆಚ್ಚದ ಸಹಾಯಧನ
ವಿಶೇಷ ಸೂಚನೆ:
ನಿಗಮದ ನಿರ್ದೇಶಕ ಮಂಡಳಿ ವಿವೇಚನಾ ಕೋಟಾ ಅಥವಾ ಸರ್ಕಾರದ ಸಾಂಸ್ಥಿಕ ಕೋಟಾದಡಿ ಸ್ವೀಕರಿಸುವ ಅರ್ಜಿಗಳನ್ನು ಸಹ ಸೇವಾಸಿಂಧು ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರುಗಳಕಛೇರಿ ಅಥವಾ ನಿಗಮಗಳ ವೆಬ್ ಸೈಟ್ ಅಥವಾ ಕಲ್ಯಾಣಮಿತ್ರ ಸಹಾಯವಾಣಿ ಸಂಖ್ಯೆ 9482300400 ಸಂಪರ್ಕಿಸುವುದು.
ಕುರಿ ಸಾಕಾಣಿಕೆ ಯೋಜನೆ:
ಕುರಿ ಸಾಕಾಣಿಕೆ ಉದ್ದೇಶಕ್ಕೆ ನಿಗಮದಿಂದ ಸಹಾಯಧನ ಮತ್ತು ನೇರಸಾಲ ಮಂಜೂರು ಮಾಡಲಾಗುತ್ತದೆ.
