13/08/2025 10:41 AM

Translate Language

Home » ಲೈವ್ ನ್ಯೂಸ್ » ಪದವಿ ಕಾಲೇಜು 310 ಪ್ರಾಂಶುಪಾಲರ ನೇಮಕಾತಿ ಶೀಘ್ರವೇ.

ಪದವಿ ಕಾಲೇಜು 310 ಪ್ರಾಂಶುಪಾಲರ ನೇಮಕಾತಿ ಶೀಘ್ರವೇ.

Facebook
X
WhatsApp
Telegram

ಬೆಂಗಳೂರು.13.ಆಗಸ್ಟ.25:- ರಾಜ್ಯ ಸರ್ಕಾರ ಹೊಸ 310 ಪ್ರಾಂಶುಪಾಲರ ಹುದ್ದೆಗಳಿಗೆ  ಶೀಘ್ರವೇ ಅರ್ಹರಿಗೆ ನೇಮಕಾತಿ ಆದೇಶ ಹೊರಡಿಸಲಾಗಿದೆ ಪ್ರಥಮ ದರ್ಜೆ ಕಾಲೇಜುಗಳಿಗೆ 310 ಪ್ರಾಂಶುಪಾಲರ ನೇಮಕ ಸಂಬಂಧ ಶೀಘ್ರವೇ (lನೇಮಕಾತಿ ಆದೇಶ ನೀಡಲು ಸರ್ಕಾರ ಸಿದ್ಧತೆ ನಡೆಸಿರುವುದಾಗಿ ತಿಳಿದು ಬಂದಿದೆ.

ಪ್ರಾಂಶುಪಾಲರ ಹುದ್ದೆಗಳ ಭರ್ತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 310 ಹುದ್ದೆಗಳ ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಿದೆ.

ಮೆರಿಟ್ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಶೈಕ್ಷಣಿಕ ಮತ್ತು ಮೀಸಲಾತಿಗೆ ಸಂಬಂಧಿಸಿದ ದೃಢೀಕೃತ ದಾಖಲೆಗಳನ್ನು ಆ.28ರೊಳಗೆ ಸಲ್ಲಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ತಿಳಿಸಿದೆ.

ಪ್ರಕ್ರಿಯೆ ಯಾವ ಹಂತದಲ್ಲಿದೆ?:

ಮೆರಿಟ್ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ನೀಡಿದ್ದ 15 ದಿನಗಳ ಗಡುವಿನೊಳಗೆ 200 ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಇವುಗಳನ್ನು ಪರಿಶೀಲಿಸಿದ ನಂತರ ಅಂತಿಮ ನೇಮಕಾತಿ ಆದೇಶ ಹೊರಡಿಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಕಾಲೇಜು ಶಿಕ್ಷಣ ಇಲಾಖೆ ಶೇಷಾದ್ರಿ ರಸ್ತೆ, ಬೆಂಗಳೂರು 560 00 Government of Karnataka Department of Collegiate Education Sheshadri Road, Bengaluru-560 001. ಪದವಿ ಕಾಲೇಜು ಪ್ರಾಂಶುಪಾಲರ ಹುದ್ದೆ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದೆ.

ಆಕ್ಷೇಪಣೆಗಳನ್ನು ಪರಿಶೀಲಿಸಲಾಗುತ್ತಿದೆ. ಆದಷ್ಟು ಬೇಗ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು.

| ಡಾ.ಎಂ.ಸಿ.ಸುಧಾಕರ್ ಉನ್ನತ ಶಿಕ್ಷಣ ಸಚಿವ ಮೆರಿಟ್ ಪಟ್ಟಿಗೆ ಒಂದೂವರೆ ವರ್ಷ ಕೆಇಎ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆ ಅನ್ವಯ 141 (ಹೈಕ) ಹಾಗೂ 813 (ಇತರೆ ಜಿಲ್ಲೆ) ಅಭ್ಯರ್ಥಿಗಳ ಅಂತಿಮ ಮೆರಿಟ್ ಪಟ್ಟಿಯನ್ನು 2024ರ ಮಾ.3ರಂದು ಪ್ರಕಟಿಸಲಾಗಿತ್ತು.

ಈ ಅಭ್ಯರ್ಥಿಗಳು ಅರ್ಜಿಯಲ್ಲಿ ದಾಖಲಿಸಿದ ಮಾಹಿತಿಗೆ ಅನುಗುಣವಾಗಿ ವಿದ್ಯಾರ್ಹತೆ, ಮೀಸಲಾತಿ ಸೇರಿ ದೃಢೀಕೃತ ಪ್ರತಿಗಳನ್ನು ಸಲ್ಲಿಸವಂತೆ ಸೂಚಿಸಲಾಗಿತ್ತು. ಒಟ್ಟು 954 ಅಭ್ಯರ್ಥಿಗಳಲ್ಲಿ 779 ಜನರ ದಾಖಲೆ ಸ್ವೀಕರಿಸಲಾಗಿದೆ.

ಉಳಿದ 175 ಅಭ್ಯರ್ಥಿಗಳ ದಾಖಲೆಗಳು ಸ್ವೀಕೃತವಾಗಿಲ್ಲ. ಅರ್ಹತೆ ಪಡೆದಿರುವ ಪಟ್ಟಿಯಲ್ಲಿ 14 ಮಂದಿ ನಿವೃತ್ತಿ ಹೊಂದಿದ್ದಾರೆ.

ಮೂರು ವರ್ಷಗಳ ವಿಳಂಬ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 310 ಗ್ರೇಡ್-1 ಪ್ರಾಂಶುಪಾಲರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ 2022ರ ಡಿ.14ರಂದು ಕೆಇಎ ಅರ್ಜಿ ಆಹ್ವಾನಿಸಿತ್ತು.

ಖಾಸಗಿ ಕಾಲೇಜುಗಳಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದವರು ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರು. ಈ ವಿಚಾರವು ಸಾಕಷ್ಟು ಟೀಕೆಗೂ ಗುರಿಯಾಗಿತ್ತು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD