05/08/2025 3:21 AM

Translate Language

Home » ಲೈವ್ ನ್ಯೂಸ್ » ಪಂಚಾಯತ ಪ್ರಗತಿ ಸೂಚ್ಯಾಂಕ 2.0 ಕಾರ್ಯಗಾರ

ಪಂಚಾಯತ ಪ್ರಗತಿ ಸೂಚ್ಯಾಂಕ 2.0 ಕಾರ್ಯಗಾರ

Facebook
X
WhatsApp
Telegram

ಬೀದರ.13.ಜುಲೈ.25:- ಪಂಚಾಯತ ಅಭಿವೃದ್ಧಿ ಸೂಚ್ಯಾಂಕ (PDI)  ಅನ್ನು ಪಂಚಾಯತ್ ಪ್ರಗತಿ ಸೂಚ್ಯಂಕ Panchayat Advancement Index (PAI)  ಎಂದು ಮರುನಾಮಕರಣಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಕಿಶೋರಕುಮಾರ ದುಬೆ ತಿಳಿಸಿದರು.

ಅವರು ಶುಕ್ರವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಭಾರತ ಸರಕಾರ ಪಂಚಾಯತರಾಜ್ ನಿರ್ದೇಶನದಂತೆ PAI (ಪಂಚಾಯತ ಪ್ರಗತಿ ಸೂಚ್ಯಾಂಕ 2.0) ಕಾರ್ಯಾಲಯ ಜಿಲ್ಲಾ ಹಂತದಲ್ಲಿ ತಾಲ್ಲೂಕಾ ಮಟ್ಟದ ಅಧಿಕಾರಿಗಳಿಗೆ ತರಬೇತಿದಾರರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪಂಚಾಯತ್‍ಗಳ ಸಮಗ್ರ ಅಭಿವೃದ್ಧಿ, ಕಾರ್ಯಕ್ಷಮತೆ ಮತ್ತು ಪ್ರಗತಿಯನ್ನು PAI ನಿರ್ಣಯಿಸುತ್ತದೆ. ಸ್ಥಳೀಯ SDG  ಗಳನ್ನು (Localised SDG themes)  ಸಾಧಿಸುವಲ್ಲಿ ಗ್ರಾಮ ಪಂಚಾಯಿತಿಗಳು ಮಾಡಿದ ಪ್ರಗತಿಯನ್ನು ಸೂಚಂಕಗಳ ಆಧಾರದ ಮೇಲೆ (Based on indicators) ಅಳೆಯುವುದು PAI ನ ಮುಖ್ಯ ಉದ್ದೇಶವಾಗಿದೆ. ತಾಲ್ಲೂಕಾ ಹಂತದಲ್ಲಿ ಅನುμÁ್ಠನ ಇಲಾಖೆಯ ಮತ್ತು ತಾಲ್ಲೂಕು ಪಂಚಾಯತಿಯ ಕರ್ತವ್ಯಗಳು : ಗ್ರಾಮ ಪಂಚಾಯತಿಗಳಿಂದ PAI  ಪೆÇೀರ್ಟಲ್ನಲ್ಲಿ ಸ್ವೀಕೃತಗೊಂದ ದತ್ತಾಂಶಗಳನ್ನು ಮೌಲ್ಯಮಾಪನ ಮಾಡುವುದು. ಒಂದು ವೇಳೆ ದತ್ತಾಂಶಗಳ ವ್ಯತ್ಯಾಸಗಳು ಕಂಡುಬಂದಲ್ಲಿ ಸರಿಪಡಿಸಿ ಸಲ್ಲಿಸುವಂತೆ ಗ್ರಾಮ ಪಂಚಾಯತ PAI  ಲಾಗಿನ್ಗೆ ಹಿಂದಿರುಗಿಸುವುದು. ಗ್ರಾಮ ಪಂಚಾಯತಿಗಳು PAI  ಪೆÇ್ರೀಟಲ್ ಮೂಲಕ ಸಲ್ಲಿಸಿರುವ ದತ್ತಾಂಶಗಳು ಸರಿ ಇದ್ದಲ್ಲಿ ಅಂತಹ ಮಾಹಿತಿಯನ್ನು ಕಾರ್ಯನಿರ್ವಾಹಕ ಆದಿಕಾರಿಯವರ ಲಾಗಿನ್‍ಗೆ ಮುಂದಿನ ಕ್ರಮಕ್ಕಾಗಿ ಸಲ್ಲಿಸುವುದು. ಕಾರ್ಯನಿರ್ವಹಕ ಅಧಿಕಾರಿಯವರು ತಮ್ಮ ಲಾಗಿನ್ ನಿಂದ ಜಿಲ್ಲಾ ಹಂತದ ಲಾಗಿನ್‍ಗೆ ಮುಂದಿನ ಕ್ರಮಕ್ಕಾಗಿ ಸಲ್ಲಿಸುವುದರ ಬಗ್ಗೆ ಅವರು ತಿಳಿಸಿದರು.

ಗ್ರಾಮ ಪಂಚಾಯತನ ಪಿಡಿಓ ಮಾತನಾಡಿ, ಪ್ರಾಥಮಿಕ ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರ,ಆರೋಗ್ಯ ಮತ್ತು ಸುತ್ತಮುತ್ತಲ್ಲಿನ ಪರಿಸರವನ್ನು ಸುಸ್ಥಿರತೆಯಲ್ಲಿ ಇಟ್ಟುಕೊಂಡಿರುವ ಬಗ್ಗೆ ಪರಿಶೀಲನೆ ಮಾಡಬೇಕು. ಮಹಿಳೆಯರಿಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸಂದೇಹವಿಲ್ಲದೆ ಚರ್ಚಿಸಿ, ಅರಿವು ಮೂಡಿಸಬೇಕು ಎಂದು ತಿಳಿಸಿದರು.

  ಆರೋಗ್ಯಧಿಕಾರಿ ಡಾ.ಶಂಕ್ರೆಪ್ಪಾ ಬೊಮ್ಮ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ, ಗೃಹಿಣಿಯರಿಗೆ, ಮಕ್ಕಳಿಗೆ, ವೃದ್ಧರಿಗೆ ಆರೋಗ್ಯವಾಗಿರಲು ಸುರಕ್ಷಿತ ನೀರು ಸೇವೆನೆ, ಸೊಳ್ಳೆ ಕಡಿತಗಳಿಂದ ರಕ್ಷಣೆ ಮಾಡಿಕೊಂಡು ಕಾಲರಾ, ಮಲೇರಿಯಾ, ಮುಂತಾದ ಸಾಂಕ್ರಮಿಕ ರೋಗಗಳಿಂದ ರಕ್ಷಣೆ ಮಾಡಿಕೊಳ್ಳಬೇಕು. ಯಾವುದೇ ರೀತಿಯ ಅನಾರೋಗ್ಯ ಕಂಡು ಬಂದಲ್ಲಿ ತಕ್ಷಣೆ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಲು ತಿಳಿಸಿದರು. 

ಈ ಕಾರ್ಯಗಾರದಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳಾದ ಶಿಕ್ಷಣಾಧಿಕಾರಿ ಗೋಪಾಲರಾವ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, NRLM ಶಾಖೆಯ DPM ರವರಾದ ನಾಗೇಂದ್ರ ಹಾಗೂ ತರಬೇತಿಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕಿನ ಎಲ್ಲ ಸಹಾಯಕ ನಿರ್ದೇಶಕರು ಪಂ.ರಾ.,ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಗಳ ಪಿಡಿಓ ಮತ್ತು ಡಿ.ಇ.ಓ. ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರತಿಕಾಂತ ನೇಳಗೆ ಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD