ಕೊಪ್ಪಳ.12.ಜನವರಿ.26: ಕೊಪ್ಪಳ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸಲು ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಿಸಲು ಸರ್ವೀಸ್ ಕಾಂಟ್ರ್ಯಾಕ್ಟ್ಗಾಗಿ ನೋಂದಾಯಿತ ಅರ್ಹ ಸಂಸ್ಥೆಗಳಿಂದ ಇ-ಟೆಂಡರ್ ಅನ್ನು ಕೆಪಿಪಿಪಿ ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ದಿನಾಂಕ: 17-01-2026ರ ಸಾಯಂಕಾಲ 4 ಗಂಟೆಯೊಳಗೆ ಸಲ್ಲಿಸಬೇಕು. ಅರ್ಹ ಸಂಸ್ಥೆಗಳು ತಮ್ಮ ಅರ್ಜಿಯನ್ನು ಕೆಪಿಪಿಪಿ ಪೋರ್ಟಲ್ ವೆಬ್‌ಸೈಟ್ https://kppp.karnataka.gov.in ಟೆಂಡರ್ ರೆಫರೆನ್ಸ್ ನಂ: HCK/2025-26/SE0110/CALL-2 ಮೂಲಕ ಅರ್ಜಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಮುಖ್ಯ ಆಡಳಿತಾಧಿಕಾರಿಗಳು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕೊಪ್ಪಳ ಇವರನ್ನು ಕಾರ್ಯಾಲಯದ ಅವಧಿಯಲ್ಲಿ ಸಂಪರ್ಕಿಸಬಹುದು ಎಂದು ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಕಟಣೆ ತಿಳಿಸಿದೆ.






Any questions related to ನ್ಯಾಯಾಲಯಗಳಲ್ಲಿ ಸ್ವಚ್ಛತಾ ಸಿಬ್ಬಂದಿಗಳ ಪೂರೈಕೆಗೆ ಅರ್ಜಿ ಆಹ್ವಾನ?