02/07/2025 8:52 AM

Translate Language

Home » ಲೈವ್ ನ್ಯೂಸ್ » ನೀತಿ ನಿರೂಪಣೆಯಲ್ಲಿ ಅಂಕಿ ಸಂಖ್ಯೆಗಳ ಪಾತ್ರ ಬಹುಮುಖ್ಯ-ಕಿಶೋರ್ ಕುಮಾರ್ ದುಬೆ

ನೀತಿ ನಿರೂಪಣೆಯಲ್ಲಿ ಅಂಕಿ ಸಂಖ್ಯೆಗಳ ಪಾತ್ರ ಬಹುಮುಖ್ಯ-ಕಿಶೋರ್ ಕುಮಾರ್ ದುಬೆ

Facebook
X
WhatsApp
Telegram

ಬೀದರ.01.ಜುಲೈ.25:- ಸರ್ಕಾರದ ನೀತಿ ನಿರೂಪಣೆಯಲ್ಲಿ ಅಂಕಿ ಸಂಖ್ಯೆಗಳ ಪಾತ್ರ ಬಹುಮುಖ್ಯವಾಗಿದ್ದು, ತೆರೆಮೆರೆಯಲ್ಲಿ ಕರ್ತವ್ಯ ನಿರ್ವಹಿಸುವ ಸಾಂಖ್ಯಿಕ ಇಲಾಖೆಯ ಪಾತ್ರ ಬಹುಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ಕಿಶೋರ್ ಕುಮಾರ್ ದುಬೆ ತಿಳಿಸಿದರು.


ಅವರು ಮಂಗಳವಾರ ಡಾ.ಪ್ರೊ.ಪಿ.ಸಿ.ಮಹಾಲ ನೋಬಿಸ್ ಸಾಂಖ್ಯಿಕ ತಜ್ಞರ ಇವರ ಜನ್ಮ ದಿನಾಚರಣೆ ಕಾರ್ಯಕ್ರಮ ನಿಮಿತ್ಯ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ರಾಷ್ಟಿçÃಯ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬೀದರ ವಿಶ್ವವಿದ್ಯಾಲಯದ ಕುಲಸಚಿವೆ ಸುರೇಖಾ ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಯಶಸ್ಸು ಸಾಂಖ್ಯಿಕ ಇಲಾಖೆಯ ಅಂಕಿ ಅಂಶಗಳ ಮೇಲೆ ಅವಲಂಬಿತವಾಗಿದ್ದು, ಅದನ್ನು ಜಾಗರೂಕತೆಯಿಂದ ನಿರ್ವಹಿಸಬೇಕೆಂದರು.


ಇದೇ ಸಂರ್ಭದಲ್ಲಿ ನಿವೃತ್ತ ಉಪನಿರ್ದೆಶಕ (ಸಾಂಖ್ಯಿಕ) ಬಸವರಾಜ್ ಕುಂಬಾರ್ ಅವರು ಈ ವರ್ಷದ “ರಾಷ್ಟಿçÃಯ ಸಾಂಖ್ಯಿಕ ದಿನಾಚರಣೆ”ಯ ಥೀಮ್ “ರಾಷ್ಟಿçÃಯ ಮಾದರಿ ಸಮೀಕ್ಷೆಗೆ 75 ವರ್ಷ” ವಿಷಯದ ಕುರಿತು ಹಾಗೂ ತಮ್ಮ ಸೇವಾವಧಿಯಲ್ಲಿನ ಪ್ರಾಯೋಗಿಕ ಅನುಭವ ಹಂಚಿಕೊoಡರು.


ಈ ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾನಾಧಿಕಾರಿ ರವಿ ಹಕಾರೆ, ಸಾಹಿತಿಗಳಾದ ಪಾರ್ವತಿ ಸೋನಾರೆ, ಸಂಖ್ಯಾ ಸಂಗ್ರಹಣಾಧಿಕಾರಿ ಸುವರ್ಣಾ, ಪುಂಡಲಿಕ ಕಣಜಿಕರ್, ಶಂಕರ ಕನಕ, ಸುಶೀಲ್ ಕುಮಾರ, ಅಶೋಕ, ಸಂತೋಷ್, ಪಂಡೀತ್ ಶರ್ಮಾ, ರಾಜಕುಮಾರ್, ಶಂಕರ್ ಪಾಟೀಲ್, ಸೇರಿದಂತೆ ಕಛೇರಿಯ ವಿವಿಧ ಅಧಿಕಾರಿ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು. ರತಿಕಾಂತ ನೆಳಗೆ ಕಾರ್ಯಕ್ರಮ ನಿರೂಪಣೆ, ಜಗದೀಶ ವಂದಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!