ಮೈಸೂರು.02. ಡಿಸೆಂಬರ್.25:- 2025-26 ನೇ ಸಾಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ನಿಯಮಬಾಹಿರ ಆಯ್ಕೆಯ ಕೌನ್ಸಲಿಂಗ್ ಪ್ರಕ್ರಿಯನ್ನು ತಡೆಯಲು ಆಗ್ರಹಿಸುತ್ತಾ.
ನಿಯಮಬಾಹಿರ ಆಯ್ಕೆಯ ಕೌನ್ಸಲಿಂಗ್ ಪ್ರಕ್ರಿಯನ್ನು ತಡೆಯಲು ಆಗ್ರಹ. ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ 440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹತ್ತು, ಹದಿನೈದು, ಇಪ್ಪತ್ತು ವರ್ಷಗಳಿಂದ 10,972 ಅತಿಥಿ ಉಪನ್ಯಾಸಕರು ಅನೇಕ ವರ್ಷಗಳಿಂದ ಅತ್ಯಂತ ಕನಿಷ್ಠ ಗೌರವಧನ ವೇತನ ಪಡೆದು ನಿಷ್ಠೆ ಮತ್ತು ಪ್ರಮಾಣಿಕತೆಯಿಂದ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಪ್ರಸಕ್ತ 2025-26 ನೇ ಸಾಲಿನಲ್ಲಿ ಸುಮಾರು 6,904 ಅತಿಥಿ ಉಪನ್ಯಾಸಕರು ಯುಜಿಸಿ ಅರ್ಹತೆ ಪಡೆದಿಲ್ಲವೆಂಬ ಕಾರಣಕ್ಕಾಗಿ ಇವರೆಲ್ಲರನ್ನು ಕೆಲಸದಿಂದ ತೆಗೆದು ಹಾಕಲು, ಹೊಸದಾಗಿ ನೇಮಕಾತಿ ಮಾಡಲು ಈಗಾಗಲೇ ಕೌನ್ಸಲಿಂಗ್ ಪ್ರಕ್ರಿಯೆಯನ್ನು ಮಾಡಲಾಗಿದೆ. ಇದರಿಂದ ಸಾವಿರಾರು ಅತಿಥಿ ಉಪನ್ಯಾಸಕರು ಬೀದಿಗೆ ಬೀಳುವಂತಾಗಿದೆ ಮತ್ತು ಇವರುಗಳು ಉದ್ಯೋಗಕ್ಕೆ ಬೇರೆಲ್ಲೂ ಅರ್ಜಿ ಸಲ್ಲಿಸಲು ವಯೋಮಿತಿ ಮೀರಿದೆ. ಇವರನ್ನೇ ಅವಲಂಭಿಸಿದ ಕುಟುಂಬ, ವಯೋವೃದ್ಧ ತಂದೆತಾಯಿಂದಿರ ಜೀವನ ನಿರ್ವಹಣೆ ಕಷ್ಟದಾಯಕವಾಗಲಿದೆ.
ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ಕೌನ್ಸಲಿಂಗ್ ಪ್ರಕ್ರಿಯೆಯು ನಿಯಮಬಾಹಿರವಾಗಿರುತ್ತದೆ ಮತ್ತು ಸಾಮಾಜಿಕ ನ್ಯಾಯ ಮತ್ತು ನೀತಿಗೆ ವಿರುದ್ದವಾಗಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ರೋಸ್ಟರ್ ನಿಯಮಗಳನ್ನು ಅಳವಡಿಸಿಕೊಂಡಿರುವುದಿಲ್ಲ, ಬೇಕಾಬಿಟ್ಟಿ ಕೌನ್ಸಲಿಂಗ್ ಪ್ರಕ್ರಿಯೆಯು ನಡೆಸುತ್ತಲಿರುವುದು ಸಾಮಾಜಿಕ ನ್ಯಾಯ ನೀತಿಗೆ ದಕ್ಕೆ ಉಂಟಾಗುವಂತಿದೆ. ಆದ್ದರಿಂದ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಮತ್ತು ಉನ್ನತ ಶಿಕ್ಷಣ ಸಚಿವರು ಮಧ್ಯೆಪ್ರವೇಶಿಸಿ ಈ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು. ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಅತಿಥಿ ಉಪನ್ಯಾಸಕರುಗಳನ್ನೇ ಸೇವೆಯಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಅಗತ್ಯಕ್ರಮ ಜರುಗಿಸಬೇಕೆಂದು ಈ ಪತ್ರಿಕಾಗೊಷ್ಠಿ ಮೂಲಕ ಆಗ್ರಹಪಡಿಸುತ್ತೇವೆ.






Any questions related to ನಿಯಮಬಾಹಿರ ಆಯ್ಕೆಯ ಕೌನ್ಸಲಿಂಗ್ ಪ್ರಕ್ರಿಯನ್ನು ತಡೆಯಲು ಆಗ್ರಹ?