ಮಾಜಿ ಕೇಂದ್ರ ಸಚಿವ ಖೂಬಾ ಆಗ್ರಹ । ಅಧಿವೇಶನದಲ್ಲಿ ಧ್ವನಿ ಎತ್ತಲು ಸಚಿವರಿಗೆ ಸವಾಲು
ಬೀದರ್: ಮಹತ್ವದ ಬೀದರ್-ನಾಂದೇಡ್(ವಯಾ ಔರಾದ್) ಹೊಸ ರೈಲ್ವೆ ಮಾರ್ಗದ ಕಾಮಗಾರಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತಿ ರಾಜ್ಯ ಸರ್ಕಾರದಿಂದ ಅನುದಾನ ಸೇರಿ ಅಗತ್ಯ ನೆರವು ಕೊಡಿಸಲಿ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಸವಾಲು ಹಾಕಿದ್ದಾರೆ.
ಸೋಮವಾರ ದಿಲ್ಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಭೇಟಿಯಾಗಿ ಬೀದರ್ ಜಿಲ್ಲೆಗೆ ಮಂಜೂರಾದ ಬೀದರ್-ನಾಂದೇಡ್ ಹೊಸ ರೈಲ್ವೆ ಲೈನ್ ಕುರಿತು ಗಮನ ಸೆಳೆದಿದ್ದೇನೆ. ಆದಷ್ಟು ಬೇಗ ರಾಜ್ಯ ಸರ್ಕಾರದಿಂದ ಇದಕ್ಕೆ ಅಗತ್ಯ ನೆರವು ಪಡೆದು ಕಾಮಗಾರಿ ಆರಂಭಿಸಲು ಮನವಿ ಮಾಡಿದ್ದೇನೆ. ಈ ಯೋಜನೆಗೆ ರಾಜ್ಯ ಸ್ಪಂದಿಸುತ್ತಿಲ್ಲದ ಕಾರಣ ಕೆಲಸ ಆರಂಭ ಆಗುತ್ತಿಲ್ಲ. ರಾಜ್ಯ ಸರ್ಕಾರ ಇತ್ತ ಗಮನಹರಿಸಲಿ, ಸಚಿವ ಖಂಡೆ ಅವರು ಸದನದಲ್ಲಿ ಈ ಬಗ್ಗೆ ಧ್ವನಿ ಎತ್ತಲಿ ಎಂದು ಇಲ್ಲಿ ಹೊರಡಿಸಿದ ರ ಪ್ರಕಟಣೆಯಲ್ಲಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ. ಈ ಮಹತ್ವದ ಯೋಜನೆಗೆ
ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಸೋಮವಾರ ದಿಲ್ಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಭೇಟಿ ಮಾಡಿ ಬೀದರ್ ಜಿಲ್ಲೆಯ ರೈಲ್ವೆ ಯೋಜನೆ ಕುರಿತು ಚರ್ಚಿಸಿದರು.
ಮಹಾರಾಷ್ಟ್ರ ಸರ್ಕಾರ ಅನುದಾನ ನೀಡಲು ಮುಂದೆ ಬಂದಿದೆ. ಆದರೆ ಕರ್ನಾಟಕ ಸರ್ಕಾರವು ಸಹಕಾರ ನೀಡುತ್ತಿಲ್ಲ. ರೈಲ್ವೆ ಸಚಿವಾಲಯದಿಂದ ಈಗಾಗಲೆ ರಾಜ್ಯ ಸರ್ಕಾರಕ್ಕೆ ಬಗ್ಗೆ ಬಗ್ಗೆ ಕ್ರಮ ಕ್ರಮಕೈ ಕೈಗೊಳ್ಳುವಂತೆ ಸೂಚಿಸಿದ್ದರೂ ಇಲ್ಲಿಯವರೆಗೆ ರಾಜ್ಯ ಸರ್ಕಾರ ಸ್ಪಂದಿಸಿಲ್ಲ.
ತಿಲಾಂಜಲಿಗೆ ಕಾಂಗ್ರೆಸ್ ಯತ್ನ ಬೀದರ್-ನಾಂದೇಡ್ ರೈಲ್ವೆ ಮಾರ್ಗ ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ಜೊತೆಗೆ ಉತ್ತರ
ಭಾರತಕ್ಕೂ ಪ್ರಮುಖ ಸಂಪರ್ಕ ಕೊಂಡಿಯಾಗಲಿದೆ. ವ್ಯಾಪಾರೋದ್ಯಮ, ಶಿಕ್ಷಣ ಮುಂತಾದವುಗಳಿಗೆ ಅನುಕೂಲವಾಗಲಿದೆ ಎಂಬ ಉದ್ದೇಶದಿಂದ 2019ರಲ್ಲಿ ಇದಕ್ಕೆ ಮಂಜೂರಿ ಮಾಡಿಸಿದ್ದೇನೆ. ಆಗಿನ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಇದಕ್ಕೆ ರಾಜ್ಯ ಸರ್ಕಾರದಿಂದ ಅನುದಾನ ನೀಡುವುದಾಗಿ ತಿಳಿಸಿದ್ದರು. ಬಳಿಕ ಬಂದ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿತ್ತು. ಆದರೆ ನಂತರ ಬಂದ ಕಾಂಗ್ರೆಸ್ ಸರ್ಕಾರ ಈ ಬಜೆಟ್ ವಾಪಸ್ ಪಡೆದುಕೊಂಡಿದೆ. ರಾಜ್ಯ ಸರ್ಕಾರ ಈ ರೈಲ್ವೆ ಯೋಜನೆಗೆ ತಿಲಾಂಜಲಿ ನೀಡಲು ಪ್ರಯತ್ನಿಸುತ್ತಿದೆ. ರಾಜ್ಯ ಸರ್ಕಾರದ ಮೇಲೆ ತಾವೇ ಒತ್ತಡ ಹಾಕಿ ಈ ಯೋಜನೆಗೆ ಅಗತ್ಯ ಅನುದಾನ ಪಡೆಯುವಂತೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದೇನೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಖೂಬಾ ಹೇಳಿದ್ದಾರೆ.
ನಾನು ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು, ರಾಜ್ಯ ಸರ್ಕಾರದಿಂದ ಸಹಕಾರ ಪಡೆದು ರೈಲ್ವೆ ಲೈನ್ ಕಾಮಗಾರಿ ಪ್ರಾರಂಭಿಸುವುದಾಗಿ ಅಭಯ ನೀಡಿದ್ದಾರೆ ಎಂದಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವ ಖಂಡ್ರೆ ಅವರು ಜಿಲ್ಲೆಗೆ ಹೊಸ ಯೋಜನೆಗಳನ್ನು ತರುವ ಯೋಗ್ಯತೆ ಹೊಂದಿಲ್ಲ. ಸಂಸದರಾದ ಇವರ
ಸಾಗರ್ ಖಂಡ್ರೆಯವರಾದರೂ ತಂದೆ ಮೇಲೆ ಒತ್ತಡ ತಂದು ಅನುದಾನ ಕೊಡಿಸಬೇಕು. ಅಥವಾ ಮಗನ ಮುಖ ನೋಡಿಯಾದರೂ ತಂದೆ ಅನುದಾನ ಕೊಡಿಸಲಿ, ಎರಡೂ ಆಗುತ್ತಿಲ್ಲ ಎಂದಾದರೆ ಇವರು ಕಳೆದ ಒಂದೂವರೆ ವರ್ಷದಿಂದ ನಿಷ್ಕ್ರಿಯರಾಗಿದ್ದಾರೆ ಎಂಬುದಕ್ಕೆ ಇದು ನಿದರ್ಶನವಾಗಲಿದೆ ಎಂದು ಚಚ್ಚಿದ್ದಾರೆ.
ಮಂದಗತಿಯಲ್ಲಿ ಸಾಗುತ್ತಿದ್ದರಿಂದ ಬೀದರ್ ರೈಲ್ವೆ ನಿಲ್ದಾಣದ ನವೀಕರಣ ಕಾಮಗಾರಿ ಎರಡೂವರೆ ವರ್ಷವಾದರೂ ಇನ್ನೂ ಮುಗಿದಿಲ್ಲ. ಈ ಕೆಲಸ ಬೇಗ ಮುಗಿಸುವಂತೆ ಮಾಡಿದ ಮನವಿಗೆ ಹಾಗೂ ಬೀದರ್-ಬೆಂಗಳೂರು ನಡುವೆ ವಂದೇ ಭಾರತ್ ರೈಲ್ವೆ ಸೇವೆ ಆರಂಭಿಸಬೇಕೆಂಬ ಬೇಡಿಕೆಗೆ ರೈಲ್ವೆ ಸಚಿವರು ಸಕಾರಾತ್ಮಕ ಸ್ಪಂದಿಸಿದ್ದಾರೆ.
# ಭಗವಂತ ಖೂಬಾ ಮಾಜಿ ಕೇಂದ್ರ ಸಚಿವ
ನಾನು ಮಾಡಿದ ಹಲವಾರು ಯೋಜನೆಗಳಿಗೆ ಈಶ್ವರ ಖಂಡೆ ಅವರು ನಾನು ಮಾಡಿರುವುದಾಗಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಖಂಡೆ ಅವರ ಕೈಯಿಂದ ಆಗುವುದಾದರೆ ಈಗ ನಡೆಯುತ್ತಿರುವ ಬೆಳಗಾವಿ ಅಧಿವೇಶನದಲ್ಲಿ ಬೀದರ್-ನಾಂದೇಡ್ ರೈಲ್ವೆ ಲೈನ್ ಬಗ್ಗೆ ಧ್ವನಿ ಎತ್ತಿ ಅನುದಾನ ಕೊಡಿಸಲಿ ಎಂದು ಒತ್ತಾಯಿಸಿದ್ದಾರೆ.





Any questions related to ನಾಂದೇಡ್ ರೈಲ್ವೆ ಮಾರ್ಗಕ್ಕೆ ಖಂಡ್ರೆ ಸ್ಪಂದಿಸಲಿ?