ಬೀದರ.01.ಆಗಸ್ಟ್.25- ಬಸವಕಲ್ಯಾಣದ ನಾರಾಯಣಪೂರದಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ 11ನೇ ತರಗತಿಯ ಖಾಲಿಯಿರುವ ಸೀಟುಗಳಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳು ರಾಜ್ಯ ಶಿಕ್ಷಣ ಇಲಾಖೆಯ ಹತ್ತನೇ ತರಗತಿಯಲ್ಲಿ ಶೆ. 60 ರಷ್ಟು ಅಂಕಗಳನ್ನು ಪಡೆದಿರಬೇಕು. ಅಲ್ಲದೇ ವಿಜ್ಞಾನ ಹಾಗೂ ಗಣಿತ ವಿಷಯದಲ್ಲಿಯೂ ಶೇ.60% ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಅರ್ಜಿ ಸಲ್ಲಿಸಲು ಆಗಸ್ಟ್.10 ಕೊನೆಯ ದಿನಾಂಕವಾಗಿದೆ.
ಆಭ್ಯರ್ಥಿಗಳು ಖುದ್ದಾಗಿ ವಿದ್ಯಾಲಯದಿಂದ ಅರ್ಜಿ ಪಡೆದು ಅಥವಾ ವಿದ್ಯಾಲಯದ ವೆಬ್‍ಸೈಟ್
https://www.navodaya.gov.in/nvs/nvs-school/BIDAR/en/home/#
ನಿಂದ ಅರ್ಜಿ ಡೌನ್‍ಲೋಡ್ ಮಾಡಿ ಭರ್ತಿ ಮಾಡಿ ಆಗಸ್ಟ್.10 ರೊಳಗಾಗಿ ಅರ್ಜಿ ಸಲ್ಲಿಸಬೇಕೆಂದು ನವೋದಯ ವಿದ್ಯಾಲಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.