01/08/2025 7:20 AM

Translate Language

Home » ಲೈವ್ ನ್ಯೂಸ್ » ನರೆಗಾ ಕೂಲಿಕಾರರ ವಿಮೆ ಮಾಡಿಸಿ ಅವರ ಆಪತ್ತಿನ ಕಾಲದಲ್ಲಿ ನೆರವಾಗಿ-ಡಾ. ಗಿರೀಶ ಬದೋಲೆ

ನರೆಗಾ ಕೂಲಿಕಾರರ ವಿಮೆ ಮಾಡಿಸಿ ಅವರ ಆಪತ್ತಿನ ಕಾಲದಲ್ಲಿ ನೆರವಾಗಿ-ಡಾ. ಗಿರೀಶ ಬದೋಲೆ

Facebook
X
WhatsApp
Telegram

ಬೀದರ.22.ಜುಲೈ.25:- ಕೇಂದ್ರ ಸರಕಾರವು ನರೆಗಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವಿಮೆ ಮಾಡಿಸಲು ಅವಕಾಶ ಮಾಡಿರುವುದರಿಂದ ನರೆಗಾ ಕೂಲಿಕಾರರ ವಿಮೆ ಮಾಡಿಸಿ ಅವರ ಆಪತ್ತಿನ ಕಾಲದಲ್ಲಿ ನೆರವಾಗಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ತಿಳಿಸಿದರು.


ಅವರು ಸೋಮವಾರ ಬೀದರ ಜಿಲ್ಲಾ ಪಂಚಾಯತಿಯಲ್ಲಿ ಜಿಲ್ಲೆಯ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು, ಎಇಇಗಳು, ಎಡಿಗಳು, ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ ಮಾತನಾಡುತ್ತಿದ್ದರು.
ಬೀದರ ಜಿಲ್ಲೆಯ ಮನರೆಗಾ ಕೂಲಿಕಾರರ ವಿಮೆ ಮಾಡಿಸಲು ಜಿಲ್ಲಾ ಪಂಚಾಯತಿಯಿಂದ ಅಭಿಯಾನ ಹಮ್ಮಿಕೊಂಡು ಪ್ರಗತಿ ಸಾಧಿಸಲು ಸೂಚಿಸಲಾಗಿದೆ. ಜುಲೈ.18 ರಿಂದ ಅಗಸ್ಟ್.18 ರವರೆಗೆ ಒಂದು ತಿಂಗಳ ಕಾಲ ಮನರೆಗಾ ಕೂಲಿಕಾರರ ವಿಮೆ ಮಾಡಿಸಲು ಅಭಿಯಾನ ಕೈಗೊಂಡಿದ್ದು ಈ ಅಭಿಯಾನದ ಅವಧಿಯಲ್ಲಿ ಜಿಲ್ಲೆಯ ಎಲ್ಲಾ 504890 ಗ್ರಾಮೀಣ ಕೂಲಿಕಾರರ ವಿಮಾ ಯೋಜನೆಗಳಲ್ಲಿ ಕೂಲಿಕಾರರನ್ನು ಕಡ್ಡಾಯವಾಗಿ ನೊಂದಣಿ ಮಾಡಿಸತಕ್ಕದ್ದು.ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರುಗಳು ವಿಶೇಷ ಆಸಕ್ತಿ ವಹಿಸಿ ನರೆಗಾ ಕೂಲಿಕಾರರ ಪ್ರತಿಶತ 100 ವಿಮೆ ಮಾಡಿಸಬೇಕು” ಎಂದು ಅವರು ಸೂಚಿಸಿದರು.


ನರೆಗಾ ಕೂಲಿಕಾರರಾಗಿ ಕೆಲಸ ಮಾಡುತ್ತಿರುವ ಗ್ರಾಮೀಣ ಕೂಲಿಕಾರರನ್ನು ಪ್ರಧಾನ ಮಂತ್ರಿ ಜೀವನ್ ಬಿಮಾ ಯೋಜನೆ (PMJJBY) ಪ್ರಧಾನ ಮಂತ್ರಿ ಜೀವನ್ ಬಿಮಾ ಯೋಜನೆಯಡಿ ವಾರ್ಷಿಕ ರೂ 436 ಗಳ ವಿಮಾ ಕಂತು ಪಾವತಿಸಿದರೆ ರೂ 2.00 ಲಕ್ಷಗಳ ಜೀವವಿಮೆ ಪಡೆಯಬಹುದು. ಗ್ರಾಮೀಣ ಪ್ರದೇಶದ 18 ರಿಂದ 50 ವಯೋಮಾನದ,ಬ್ಯಾಂಕ್ ಖಾತೆ ಹೊಂದಿರುವ ಫಲಾನುಭವಿಗಳು ಈ ಸೌಲಭ್ಯ ಪಡೆಯಲು ಅರ್ಹರಿದ್ದಾರೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMJJBY)ವಾರ್ಷಿಕ 20 ರೂಪಾಯಿಗಳ ವಿಮಾ ಕಂತು ಪಾವತಿಸುವ 18 ರಿಂದ 70 ವಯೋಮಾನದವರು ಈ ಯೋಜನೆಯಡಿ ನೊಂದಾಯಿಸಿಕೊಳ್ಳಬಹುದು.ಅಪಘಾತದ ಸಂದರ್ಭದಲ್ಲಿ 2.00 ಲಕ್ಷಗಳವರೆಗೆ ವಿಮೆ ಪಡೆಯಬಹುದಾಗಿದೆಂದರು.


ಪ್ರಧಾನ ಮಂತ್ರಿ ಆರೋಗ್ಯ ಯೋಜನೆಯಡಿ ಸರಕಾರದಿಂದ ಗುರುತಿಸಲ್ಪಟ್ಟ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಈ ಯೋಜನೆಯಡಿ ನೊಂದಾಯಿತ ಕುಟುಂಬಗಳಿಗೆ ವಾರ್ಷಿಕ ರೂ 5.00 ಲಕ್ಷಗಳವರೆಗೆ ನಗದು ರಹಿತ ವೈದ್ಯಕೀಯ ಸೌಲಭ್ಯನೀಡಲಾಗುವುದು.ನರೆಗಾ ಯೋಜನೆಯು ಗ್ರಾಮೀಣ ಕೂಲಿಕಾರರಿಗೆ ವರ್ಷದಲ್ಲಿ ಒಂದು ನೂರು ದಿನಗಳ ಉದ್ಯೋಗ ಖಾತ್ರಿ ನೀಡುವುದರ ಜೊತೆಗೆ ಹಲವಾರು ಮಾನವೀಯ ಅಂಶಗಳನ್ನು ಹೊಂದಿದ್ದು ಕೇಂದ್ರ ಸರಕಾರದ ಈ 3 ವಿಮಾ ಯೋಜನೆಗಳು ನರೆಗಾ ಕೂಲಿಕಾರರು ಕೆಲಸದಲ್ಲಿ ಮೃತಪಟ್ಟಾಗ ಇಲ್ಲವೆ ಗಾಯಗೊಂಡಾಗ ಅವರಿಗೆ ನೆರವು ಆಗುವ ಯೋಜನೆಗಳಾಗಿದ್ದು ಕಾರ್ಯನಿರ್ವಾಹಕ ಅಧಿಕಾರಿಗಳು,ಎಡಿಗಳು ಮತ್ತು ಪಿಡಿಒಗಳು ಕೂಲಿಕಾರರ ಬದುಕಿಗೆ ಭದ್ರತೆ ಒದಗಿಸುವ ಈ ಯೋಜನೆಗಳ ಬಗ್ಗೆ ವೈಯಕ್ತಿಕ ಆಸಕ್ತಿ ವಹಿಸಿ ಎಲ್ಲಾ ಕೂಲಿಕಾರರನ್ನು ನೊಂದಾಯಿಸಬೇಕು ಎಂದು ಡಾ.ಗಿರೀಶ ದಿಲೀಪ್ ಬದೋಲೆಯವರು ಕಾರ್ಯನಿರ್ವಾಹಕ ಅಧಿಕಾರಿಗಳು,ಎಡಿಗಳು ಮತ್ತು ಪಿಡಿಒಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.ನರೆಗಾ ಕೂಲಿಕಾರರ ಬದುಕಿಗೆ ಭದ್ರತೆ ಒದಗಿಸುವ ವಿಮಾ ಯೋಜನೆಗಳ ಬಗ್ಗೆ ಬೀದರ ಜಿಲ್ಲೆಯಲ್ಲಿ ಅಭಿಯಾನ ಕೈಗೊಂಡಿರುವುದು ವಿಶೇಷವಾಗಿದೆ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ದಿಲೀಪ್ ಬದೋಲೆಯವರ ಕೂಲಿಕಾರರ ಬಗೆಗಿನ ಕಾಳಜಿ ಮತ್ತು ಮಾನವೀಯ ಕಳಕಳಿಯಿಂದ ಬೀದರ ಜಿಲ್ಲೆಯಲ್ಲಿ ಈ ಅಭಿಯಾನ ನಡೆಯುತ್ತಿದೆ ಎಂದರು.


  ಈ ಸಂದರ್ಭದಲ್ಲಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಯೋಜನಾ ನಿರ್ದೇಶಕ ಜಗನ್ನಾಥ ಮೂರ್ತಿ, ಸಹಾಯಕ ಕಾರ್ಯದರ್ಶಿ ಬೀರೇಂದ್ರಸಿಂಗ್, ಸಹಾಯಕ ನಿರ್ದೇಶಕ ಜಯಪ್ರಕಾಶ ಚೌಹಾಣ, ಪಿ ಆರ ಇ ಡಿ ಯ ಕಾರ್ಯಪಾಲ ಅಭಿಯಂತರರಾದ ಶಿವಾಜಿ ಡೋಣಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಖಲೀಮುದ್ದೀನ್, ಗ್ರಾಮೀಣ ಕುಡಿಯುವ ನೀರ, ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಮಾಣಿಕರಾವ್ ಕೆರೂರ, ಅಧೀಕ್ಷಕ ಮಹ್ಮದ್ ಬಶೀರ, ಡಿ ಪಿ ಎಂ ವಾಸೀಮ್ ಪರ್ವೇಜ್ ,ಎಡಿಪಿಸಿ ದೀಪಕ್ ಕಡಿಮನಿ, ಸಾಮಾಜಿಕ ಲೆಕ್ಕ ಪರಿಶೋಧನೆ ಜಿಲ್ಲಾ ವ್ಯವಸ್ಥಾಪಕ ದೇವಿದಾಸ್, ಗುರುರಾಜ,ಲೋಕೇಶ, ರಜನಿಕಾಂತ, ಅಂಬಿಕಾ, ಕೋಮಲ್, ಧನರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!