Home » ಲೈವ್ ನ್ಯೂಸ್ » ನಕಲಿ ಪಿಹೆಚ್‌ಡಿ ಪ್ರಮಾಣ ಪತ್ರ ಸಲ್ಲಿಸಿ ಅತಿಥಿ ಉಪನ್ಯಾಸಕರ ಹುದ್ದೆ.

ನಕಲಿ ಪಿಹೆಚ್‌ಡಿ ಪ್ರಮಾಣ ಪತ್ರ ಸಲ್ಲಿಸಿ ಅತಿಥಿ ಉಪನ್ಯಾಸಕರ ಹುದ್ದೆ.

Facebook
X
WhatsApp
Telegram

ಬಾಗಲಕೋಟೆ.07.ಫೆಬ್ರವರಿ.26: ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ  ಅತಿಥಿ ಉಪನ್ಯಾಸಕರ ವಿರುದ್ಧ ನಕಲಿ ಪಿಎಚ್‌ಡಿ ಪ್ರಮಾಣ ಪತ್ರ (PHD Certificate) ಸಲ್ಲಿಸಿ ನೌಕರಿ ಪಡೆದ ಆರೋಪವೊಂದು ಕೇಳಿಬರುತ್ತಿದೆ.

ಅದರಲ್ಲಿ 60% ರಷ್ಟು ಅತಿಥಿ ಉಪನ್ಯಾಸಕರು ಹೊರ ರಾಜ್ಯದಿಂದ ನಕಲಿ ಪಿಎಚ್‌ಡಿ ಪ್ರಮಾಣ ಪತ್ರ ಪಡೆದು ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ.

ಬಾಗಲಕೋಟೆ ಜಿಲ್ಲೆಯಲ್ಲಿರುವ 19 ಸರ್ಕಾರಿ ಕಾಲೇಜಗಳಲ್ಲಿ 120ಕ್ಕೂ ಹೆಚ್ಚು ಮಂದಿ ಅತಿಥಿ ಉಪನ್ಯಾಸಕರು ಸೇವೆ ಮಾಡುತ್ತಿದ್ದಾರೆ.

ನಕಲಿ ಪ್ರಮಾಣಪತ್ರಗಳನ್ನು ಉತ್ತರಪ್ರದೇಶ ಮೂಲದ ಚೌಧರಿ ಚರಣಸಿಂಗ್ ವಿವಿ ಸೇರಿದಂತೆ ವಿವಿಧ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ನಕಲಿ ಪಿಹೆಚ್‌ಡಿ ಪ್ರಮಾಣಪತ್ರ ಸಲ್ಲಿಕೆ ಆಗಿರೋದು ಬೆಳಕಿಗೆ ಬಂದಿದೆ. ಒಂದೊಂದು ಪ್ರಮಾಣಪತ್ರಕ್ಕೆ 3ರಿಂದ 5ಲಕ್ಷ ಹಣ ನೀಡಿ ಪ್ರಮಾಣ ಪತ್ರ ಪಡೆದ ಆರೋಪ ಇದೆ. ಜಮಖಂಡಿ, ಹುನಗುಂದ, ಮುಧೋಳ ಸೇರಿದಂತೆ ಹಲವೆಡೆ ನಕಲಿ ಪ್ರಮಾಣ ಪತ್ರ ಸಲ್ಲಿಕೆಯಾಗಿದೆ.

ಚೌಧರಿ ಚರಣಸಿಂಗ್ ವಿವಿಯಲ್ಲಿ ಕನ್ನಡ ವಿಭಾಗವೇ ಇಲ್ಲ. ಆದರೂ ಅದರ ಹೆಸರಲ್ಲಿ ಕನ್ನಡದಲ್ಲಿ ಪಿಹೆಚ್‌ಡಿ ಪ್ರಮಾಣ ಪತ್ರ ಪಡೆದಿರೋದು ಅನುಮಾನಕ್ಕೆ ಕಾರಣವಾಗಿದೆ. ಪಿಎಚ್‌ಡಿ ಪ್ರಮಾಣ ಪತ್ರ ನೈಜತೆ ತಿಳಿಯಲು ಶಿಕ್ಷಣ ಇಲಾಖೆ ಮುಂದಾಗಿದೆ.

ಉನ್ನತ ಶಿಕ್ಷಣ ಇಲಾಖೆ 2024-25 ಹಾಗೂ 2025-26 ರಲ್ಲಿ ನೇಮಕವಾದ ಅತಿಥಿ ಉಪನ್ಯಾಸಕರ ಪ್ರಮಾಣ ಪತ್ರಗಳನ್ನ ಪರಿಶೀಲನೇ ಮಾಡುತ್ತಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology