ಬೆಂಗಳೂರು.08.ಆಗಸ್ಟ್.25:- ಈ ಸಲ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಈ ನಕಲಿ PhD ಗಳ ಹಾವಳಿ ಜಾಸ್ತಿಯಾಗಿದೆ ನಕಲಿ ಪಿಎಚ್‌ಡಿ ಹೊಂದಿರುವ ಅತಿಥಿ ಉಪನ್ಯಾಸಕರು ಡಾಕ್ಟರೇಟ್ ಪದವಿಯನ್ನು ಹೊಂದಿರುವುದಾಗಿ ಹೇಳಿಕೊಳ್ಳುವ ವ್ಯಕ್ತಿ, ಆದರೆ ವಾಸ್ತವದಲ್ಲಿ ಅವರು ಅದನ್ನು ಹೊಂದಿಲ್ಲ ಅಥವಾ ಮೋಸದ ವಿಧಾನಗಳ ಮೂಲಕ ಪಡೆದಿದ್ದಾರೆ. ಇದು ಗಂಭೀರ ಸಮಸ್ಯೆಯಾಗಿದೆ ಏಕೆಂದರೆ ಇದು ಸಂಸ್ಥೆಗಳ ಶೈಕ್ಷಣಿಕ ಸಮಗ್ರತೆಯನ್ನು ಹಾಳು ಮಾಡುತ್ತದೆ ಮತ್ತು ವಿದ್ಯಾರ್ಥಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

2025 ನೇ ಸಾಲಿನ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಲ್ಲಿ UGC ಅರ್ಹತೆ ನಿಯಮಗಳನ್ನು ಹೊಂದಿರುವುದು ಕಡ್ಡಾಯ ಎಂದು ತಾವು ತಮ್ಮ ಇಲಾಖೆಯ ಪ್ರಕಟಣೆ ಸಂಖ್ಯೆ : ಕಾಶೀಇ/ನೇವಿ-1/CGD/99/2024-25 ಯಲ್ಲಿ ತಿಳಿಸಿರುತ್ತೀರಿ ಅದರಂತೆ ಅಭ್ಯರ್ಥಿಯು ಪಿಎಚ್.ಡಿ ಕೋರ್ಸ್‌ವರ್ಕ್, ನೆಟ್ ಅಥವಾ ಸೆಟ್ ಹೊಂದಿರಬೇಕಾಗಿರುತ್ತದೆ.
ಇದರಿಂದ ಕೆಲವೊಬ್ಬ UGC ಅನರ್ಹ ಅಭ್ಯರ್ಥಿಗಳು ಅತಿಥಿ ಉಪನ್ಯಾಸಕ ಹುದ್ದೆಯನ್ನು ಪಡೆಯಲೇಬೇಕು ಎಂದು ಅನ್ಯಾಯದ ಮಾರ್ಗದಿಂದ ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳಾದ ಚೌದರಿ ಚರಣ ಸಿಂಗ್ ವಿಶ್ವವಿದ್ಯಾಲಯ, ಮಿರತ್, ಉತ್ತರಪ್ರದೇಶ, ಸನ್ ರೈಸ್ ವಿಶ್ವವಿದ್ಯಾಲಯ ರಾಜಸ್ತಾನ, ಓಂ ಸಾಯಿ ವಿಶ್ವವಿದ್ಯಾಲಯ, ಒಪಿಜಿಸ್ ವಿಶ್ವವಿದ್ಯಾಲಯ, ರಾಜಸ್ತಾನ, ಸಿಂಗಾಣಿಯಾ ವಿಶ್ವವಿದ್ಯಾಲಯ, ಮೇಘಾಲಯ ಇಂತಹ ಇನ್ನೂ ಅನೇಕ ವಿಶ್ವವಿದ್ಯಾಲಯಗಳಿಂದ ನಕಲಿ ಪಿಎಚ್.ಡಿ. ಪ್ರಮಾಣ ಪತ್ರಗಳನ್ನು 3-5 ಲಕ್ಷ ಹಣಕ್ಕೆ ಕೇವಲ ಒಂದು ವಾರದಿಂದ ಒಂದು ತಿಂಗಳ ಒಳಗಾಗಿ ಖರೀದಿಸಿ ಇಲಾಖೆಯ ಕಣ್ಣಿಗೆ ಮಣ್ಣೆರಚಿ, ಆಡಳಿತ ವ್ಯವಸ್ಥೆಯನ್ನೇ ವಂಚಿಸಿ, ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರವನ್ನು ದುರ್ಬಲಗೊಳಿಸಿರುತ್ತಾರೆ.
ಹಿಂದೆ 2023 24ನೇ ಸಾಲಿನಲ್ಲಿ ಇಲ್ಲದ ಪಿಎಚ್.ಡಿ ವಿದ್ಯಾರ್ಹತೆ 2024-25ನೇ ಸಾಲಿನಲ್ಲಿ ದಿಡೀರನೆ ಹೊರ ರಾಜ್ಯದಿಂದ ನಕಲಿ ಪಿಎಚ್.ಡಿ. ಪ್ರಮಾಣ ಪತ್ರವು ದೊರೆತಿರುತ್ತದೆ. ಇದೇ ನಕಲಿ ಪ್ರಮಾಣ ಪತ್ರವನ್ನು ತೋರಿಸಿ 2025-26 ನೇ ಸಾಲಿನ ಮೆರಿಟ್ ಲಿಸ್ಟನಲ್ಲಿ ಕೌನ್ಸೆಲ್ಲಿಂಗ್ ನಲ್ಲೂ ಭಾಗಿಯಾಗಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಮತ್ತು ಸೇವೆ ಸಲ್ಲಿಸುತ್ತಲೇ ಈ ನಕಲಿ ಪಿಎಚ್.ಡಿ ಪದವಿಯನ್ನು ಪಡೆದಿರುತ್ತಾರೆ. ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಮತ್ತು ಈ ನಕಲಿ ಪಿಎಚ್.ಡಿ ಹಾವಳಿಯು ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಗಣಿಸಿ ತನಿಖೆಗೆ ಒಳಪಡಿಸಬೇಕು.
ಅದೂ ಅಲ್ಲದೆ 2024 ರ ಮಾನ್ಯ ಹೈಕೋರ್ಟ್ನ ಏಕಸದಸ್ಯ ಪೀಠದ ತೀರ್ಪು WP 23600, ಪುಟ ಸಂಖ್ಯೆ 9 ರಲ್ಲಿ ರೆಗ್ಯುಲರ್ ಮೋಡ್ ನಲ್ಲಿ ಮಾತ್ರ ಪಿಎಚ್.ಡಿ ಅನ್ನು ಪಡೆದಿರಬೇಕೆಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. ಆದ್ದರಿಂದ ಇವರು ನಕಲಿ ಪ್ರಮಾಣ ಪತ್ರವನ್ನು ತಂದಿರುವುದರಲ್ಲಿ ತುಂಬಾ ಅನುಮಾನ ವ್ಯಕ್ತವಾಗುತ್ತಿದೆ.
UGC ವಿದ್ಯಾರ್ಹತೆ ಕಡ್ಡಾಯವಾಗಿ ಜಾರಿಯಾಗಿರುವುದರಿಂದ ರಾಜ್ಯಾದ್ಯಂತ ಸಾವಿರಾರು ಬಗ್ಗೆ ಪತ್ರಿಕೆಗಳಲ್ಲಿ ಅಭ್ಯರ್ಥಿಗಳು ನಕಲಿ ಪಿಎಚ್.ಡಿ ಪದವಿಯನ್ನು ತಂದಿರುತ್ತಾರೆ. ಇದರ ವರದಿಯಾಗಿರುತ್ತದೆ. ಈಗಲೂ ತಾವು ಮೌನ ವಹಿಸಿದರೆ ಉನ್ನತ ಶಿಕ್ಷಣದ ಗುಣಮಟ್ಟ ತಳಮಟ್ಟಕ್ಕೆ ಸೇರುವುದರ ಜೊತೆಗೆ ನೈಜವಾಗಿ UGC ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ತುಂಬಲಾರದ ನಷ್ಟ ಮತ್ತು ಮೋಸವಾಗುತ್ತಿದೆ. ಅಭ್ಯರ್ಥಿಗಳು ಪೂರ್ಣಾವಧಿಯಲ್ಲಿ ಅತಿಥಿ ಉಪನ್ಯಾಸಕ ಕರ್ತವ್ಯದ ಜೊತೆಗೆ ಅದೇ ಶೈಕ್ಷಣಿಕ ಸಾಲಿನ ಅವಧಿಯಲ್ಲಿ ಪಿಎಚ್.ಡಿ ಪದವಿ ಪಡೆದಿರುತ್ತಾರೆ. ಇಲಾಖೆಯ ನಿಯಮಗಳ ಬಾಹಿರವಾಗಿ ಪಿಎಚ್.ಡಿ ಪದವಿ ಪಡೆದು ಮೋಸದ ಚೆಲ್ಲಾಟವಾಡುವವರಿಗೆ ಸರ್ಕಾರ ಬಿಸಿ ಮುಟ್ಟಿಸಬೇಕು.
ಇಂತಹ ವಂಚಕರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಿ, ಇವರನ್ನು ಅತಿಥಿ ಉಪನ್ಯಾಸಕ ಆಯ್ಕೆ ಪ್ರಕ್ರಿಯೆಯಿಂದ ಶಾಶ್ವತವಾಗಿ ಕೈ ಬಿಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳತ್ತೇವೆ. ಈ ಎಲ್ಲಾ ಮಾಹಿತಿಯನ್ನು ವಿನಯದಿಂದ ತಮ್ಮ ಗಮನಕ್ಕೆ ತಂದಿರುತ್ತೇವೆ. ತಾವು ಇವರ ಮೇಲೆ ಯಾವುದೇ ಕ್ರಮವನ್ನು ಜರುಗಿಸದೆ ಹೋದರೆ ಇದಕ್ಕೆ ಸಂಭಂದಪಟ್ಟವರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕಾನೂನು ಹೋರಾಟ ಮಾಡುವುದು ಆನಿವಾರ್ಯವಾಗಿರುತ್ತದೆ.
Example
ಹೊರ ರಾಜ್ಯದ ವಿ.ವಿಗಳ ಪಿಎಚ್.ಡಿ: ಈ ಅಭ್ಯರ್ಥಿಗಳು ಸಲ್ಲಿಸಿದ್ದ ಪಿಎಚ್.ಡಿ ಪ್ರಮಾಣ ಪತ್ರಗಳು ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳದ್ದಾಗಿದ್ದವು. ಸರ್ಕಾರಿ ಆದೇಶದ (ಇಡಿ/398/ಯುಆರ್‌ಸಿ2014 ದಿನಾಂಕ 14/10/2014) ಪ್ರಕಾರ ರಾಜ್ಯದ ಹೊರಗಿನ ವಿ.ವಿಗಳ ಪಿಎಚ್.ಡಿ ಪದವಿಗಳ ನೈಜತೆಯನ್ನು ಕೆಇಎ ಪರಿಶೀಲನೆಗೆ ಒಳಪಡಿಸಿತ್ತು.
‘ಪರಿಶೀಲನಾ ವರದಿಯಲ್ಲಿ ಈ ಅಭ್ಯರ್ಥಿಗಳ ಪಿಎಚ್.ಡಿ ನೈಜತೆಯಿಂದ ಕೂಡಿಲ್ಲ ಎಂದು ಉಲ್ಲೇಖವಾಗಿದೆ. ಹಾಗಾಗಿ ಅವರ ಅಭ್ಯರ್ಥಿತನವನ್ನು ರದ್ದುಗೊಳಿಸಿ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ’ ಎಂದು ಕೆಇಎ ಆಡಳಿತಾಧಿಕಾರಿ ಗಂಗಾಧರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಕಲಿ ಶೈಕ್ಷಣಿಕ ದಾಖಲೆಗಳನ್ನು ಸಲ್ಲಿಸಿ ನೇಮಕ ಹೊಂದಲು ಮುಂದಾಗಿದ್ದ ಈ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಾಧಿಕಾರವು ಸರ್ಕಾರಕ್ಕೆ ಪತ್ರ ಬರೆಯಲಿದೆ’ ಎಂದು ಅವರು ಮಾಹಿತಿ ನೀಡಿದರು.
