ಬೆಂಗಳೂರು.06.ಆಗಸ್ಟ್.25:- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ನಿರ್ವಹಿಸ್ತಿರುವ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯ ಸಮಯದಲ್ಲಿ ನಕಲಿ M.Phil ಮತ್ತು PH.D ಪ್ರಮಾಣ ಪಾತ್ರವನ್ನು ಪರಿಶೀಲಿಸಲು ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮನವಿ.
2025-2026 ನೇ ಸಾಲಿನ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಲ್ಲಿ UGC ನಿಯಮಗಳು ಹೊಂದಿರುವುದು ಕಡ್ಡಾಯ ಎಂದು ತಮ್ಮ ಇಲಾಖೆಯಿಂದ ಪ್ರಕಟಣೆ ಮಾಡಿದ್ದು ಇರುತ್ತದೆ, ಪ್ರಕಟಣೆ ಸಂಖ್ಯೆ ಕಾಶಿಇ/ನೇವಿ- 1CGD/99/2024-2025 ಪ್ರಕಟಣೆಯಂತೆ ಅಭ್ಯರ್ಥಿಯೂ ಪಿಎಚ್ ಡಿ ಕೋರ್ಸ್ ವರ್ಕ್, ನೆಟ್, ಸೆಟ್/ ಸೆಟ್ ಹೊಂದಿರುಬೇಕಾಗಿರುತ್ತದೆ.
ಇದರಿಂದ ಕೆಲ ದೈಹಿಕ ಶಿಕ್ಷಣ ವಿಭಾಗದ ಅಭ್ಯರ್ಥಿಗಳು ಹೊರ ರಾಜ್ಯಗಳಿಂದ ಅನ್ಯಾಯ ಮಾರ್ಗದಿಂದ 4/6 ಲಕ್ಷ ರೂಪಾಯಿ ಕೊಟ್ಟು ಉಪನ್ಯಾಸಕ ಹುದ್ದೆಯನ್ನ ಪಡೆಯಲೇಬೇಕು ಎಂಬ ಉದ್ದೇಶದಿಂದ ಕೆಲವು ವಾರ/ ತಿಂಗಳುಗಳಲ್ಲಿ ಪ್ರಮಾಣ ತಂದು ಶಿಕ್ಷಣ ವ್ಯವಸ್ಥೆಯನ್ನ ಬುಡಮೇಲು ಮಾಡಿರುತ್ತಾರೆ, ಹೊರ ರಾಜ್ಯಗಳಿಂದ ತಂದ ಎಲ್ಲಾ ಪ್ರಮಾಣ ಪತ್ರಗಳು ಅಕ್ರಮವಾಗಿದ್ದಾವೆ ಎಂದು ಹೇಳಲ್ಲ, ಅವುಗಳಲ್ಲಿ ಕೆಲವು ಪ್ರಮಾಣ ಪತ್ರಗಳು ಅಕ್ರಮವಾಗಿ ಇದಾವೆ, ಆ ಪ್ರಮಾಣಪತ್ರಗಳು ಯಾವು ಎಂದು ತಿಳಿಯಲು ಕೌನ್ಸೆಲಿಂಗ್ ಸೇರಿ ಸ್ಥಳ ಆಯ್ಕೆ ಮಾಡಿ ಕೊಂಡು ವೃತ್ತಿಗೆ ಸೇರುವು ಸಂಧರ್ಭದಲ್ಲಿ ಆಯುಕ್ತರ ಮಟ್ಟದಲ್ಲಿ ಕಟ್ಟು ನಿಟ್ಟಾಗಿ ದಾಖಲಾತಿಗಳನ್ನ ಪರಿಶೀಲಿಸಿದರೆ ಅಕ್ರಮ ದಾಖಲಾತಿಗಳು ಸಿಗುವವು.
ಅಕ್ರಮ ದಾಖಲಾತಿಗಳು ಸಿಕ್ಕ ನಂತರ ಅಭ್ಯರ್ಥಿಯ ವಿರುದ್ಧ ಕಾನೂನು ಕ್ರಮ ಜರುಗಿಸಿ, ತನಿಖೆಗೆ ಒಳಪಡಿಸಬೇಕು.
ನ್ಯಾಯಯುತವಾಗಿ ಅಧ್ಯಯನ ಮಾಡಿ UGC ಅಹರ್ತೆ ಪಡೆದ ಸಾವಿರಾರು ಅಭ್ಯರ್ಥಿಗಳು ರಾಜ್ಯಗಳಲ್ಲಿ ಇದಾರೆ ಅಂತಹವರಿಗೆ ನ್ಯಾಯ ಒದಗಿಸಿ, 2025-26 ನೇ ಸಾಲಿನಲ್ಲಿ ಉಪನ್ಯಾಸಕರ ಹುದ್ದೆಗೆ ಸೇರುವ ಹೊರ ರಾಜ್ಯಗಳಿಂದ ತಂದ ದಾಖಲಾತಿಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲು ಮಾನ್ಯ ಆಯುಕ್ತರು ಕ್ರಮ ಕೈಗೊಳ್ಳಲು ಮನವಿ,