17 ಡಿಸೆಂಬರ್ 24 ನ್ಯೂ ದೆಹಲಿ:- ದೇಶಾದ್ಯಂತ ಶೈಕ್ಷಣಿಕ ಸಂಸ್ಥೆಗಳ ಮೂಲಸೌಕರ್ಯವನ್ನು ಸುಧಾರಿಸಲು ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿನ ಪ್ರಯತ್ನಗಳ ಕುರಿತು ಇಂದು ನವದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶ್ರೀ ಪ್ರಧಾನ್, ಕಳೆದ ಎಂಟು ವರ್ಷಗಳಲ್ಲಿ ಪ್ರತಿ ಮಗುವಿನ ವೆಚ್ಚದಲ್ಲಿ 130 ಪ್ರತಿಶತದಷ್ಟು ಹೆಚ್ಚಳವಾಗಿದೆ. 2013-14ರಲ್ಲಿ 10 ಸಾವಿರದ 780 ರೂಪಾಯಿ ಇದ್ದ ಮೊತ್ತ ಈಗ 2021-22ಕ್ಕೆ 25 ಸಾವಿರದ 43 ರೂಪಾಯಿಗೆ ಏರಿಕೆಯಾಗಿದೆ.
ಪ್ರಧಾನ ಮಂತ್ರಿ ಪೋಶನ್ ಯೋಜನೆಯಡಿ ಸರ್ಕಾರವು 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಿದೆ ಎಂದು ಶ್ರೀ ಪ್ರಧಾನ್ ತಿಳಿಸಿದರು. ಒಂದು ರಾಷ್ಟ್ರ, ಒಂದು ಚಂದಾದಾರಿಕೆ (ONOS) ಕುರಿತು ಮಾತನಾಡಿದ ಶ್ರೀ. ಪ್ರಧಾನ್ ಅವರು ಸುಮಾರು 13,000 ಇ-ಜರ್ನಲ್ಗಳನ್ನು ಈಗ ವಿದ್ಯಾರ್ಥಿಗಳಿಗೆ ಪ್ರವೇಶಿಸಬಹುದಾಗಿದೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ ಸರ್ಕಾರವು ಈ ಉಪಕ್ರಮದಲ್ಲಿ ಆರು ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ.
