03/08/2025 6:57 PM

Translate Language

Home » ಲೈವ್ ನ್ಯೂಸ್ » ದೂರಶಿಕ್ಷಣ: ಕೆಎಸ್‌ಒಯು ಆನ್‌ಲೈನ್‌ ಕೋರ್ಸ್‌ಗಳಿಗೂ ಅವಕಾಶ

ದೂರಶಿಕ್ಷಣ: ಕೆಎಸ್‌ಒಯು ಆನ್‌ಲೈನ್‌ ಕೋರ್ಸ್‌ಗಳಿಗೂ ಅವಕಾಶ

Facebook
X
WhatsApp
Telegram

ಮೈಸೂರು.21.ಜುಲೈ.25:- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ), ಇದೀಗ 10 ಆನ್‌ಲೈನ್‌ ಕೋರ್ಸ್‌ಗಳಿಗೆ ಯುಜಿಸಿ ಅನುಮೋದನೆ ಪಡೆದಿದೆ.

ಬಿ.ಎ., ಬಿ.ಕಾಂ., ಎಂ.ಎ.- ಕನ್ನಡ, ಹಿಂದಿ, ಸಂಸ್ಕೃತ, ಇಂಗ್ಲಿಷ್, ಅರ್ಥಶಾಸ್ತ್ರ, ಎಂ.ಕಾಂ., ಎಂಬಿಎ, ಎಂಎಸ್ಸಿ- ಗಣಿತಶಾಸ್ತ್ರ ಶಿಕ್ಷಣ ಕ್ರಮಗಳಿಗೆ ಈ ಅವಕಾಶ ಲಭ್ಯವಾಗಿದೆ.

ಮೈಸೂರಿನಲ್ಲಿರುವ ಕೇಂದ್ರ ಕಚೇರಿ ಅಥವಾ ಜಿಲ್ಲೆಗಳಲ್ಲಿ ಇರುವ ಪ್ರಾದೇಶಿಕ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು.

ರಾಜ್ಯ ಅಲ್ಪಸಂಖ್ಯಾತ ಸಚಿವಾಲಯದ ಜೊತೆ ಶೈಕ್ಷಣಿಕ ಒಡಂಬಡಿಕೆಯನ್ನೂ ವಿಶ್ವವಿದ್ಯಾಲಯ ಮಾಡಿಕೊಂಡಿದೆ. ನಿಗದಿತ ಮಾನದಂಡಗಳಿಗೆ ಒಳಪಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾವಕಾಶ ಇದೆ. 2025-26ರ ಜುಲೈ ಆವೃತ್ತಿಯ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದೆ. ಆನ್‌ಲೈನ್‌ ಸೇರಿದಂತೆ ಒಟ್ಟು 79 ಕೋರ್ಸ್‌ಗಳು ಲಭ್ಯವಿವೆ ಎಂದು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!