ಕೊಪ್ಪಳ.08.ಜುಲೈ .25: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಪ್ಪಳ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಯಲಬುರ್ಗಾ, ಪ್ರಾಥಮಿಕ ಆರೋಗ್ಯ ಕೇಂದ್ರ, ಬೇವೂರು ಇವರ ಸಂಯುಕ್ತಾಶ್ರಯದಲ್ಲಿ ಜುಲೈ 04 ರಂದು ಬೇವೂರಿನ 4ನೇ ಅಂಗನವಾಡಿ ಕೇಂದ್ರದಲ್ಲಿ ದಂಪತಿ ಸಂಪರ್ಕ ಪಾಕ್ಷಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಿವಾನಂದ ವ್ಹಿ.ಪಿ ಅವರು ಮಾತನಾಡಿ, ಪ್ರತಿ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಇದರ ಅಂಗವಾಗಿ ಜಿಲ್ಲೆಯಲ್ಲಿ ಜೂನ್ 27 ರಿಂದ ಜುಲೈ 10 ರವರೆಗೆ ದಂಪತಿ ಸಂಪರ್ಕ ಪಾಕ್ಷಿಕ ಕಾರ್ಯಕ್ರಮ ಆಚರಿಸಿ, ಕುಟುಂಬ ಕಲ್ಯಾಣ ಯೋಜನೆಯ ವಿಧಾನಗಳ ಬಗ್ಗೆ ಅರ್ಹ ದಂಪತಿಗಳಿಗೆ ಅರಿವು ಮೂಡಿಸಲಾಗುತ್ತದೆ. ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಕನಿಷ್ಠ 3 ರಿಂದ 4 ವರ್ಷ ಅಂತರ ಕಾಪಾಡಲು ಕುಟುಂಬ ಕಲ್ಯಾಣ ಯೋಜನೆಯ ತಾತ್ಕಾಲಿಕ ಹೊಸ ವಿಧಾನಗಳಾದ 3 ತಿಂಗಳಿಗೊAದು ಅಂತರ ಚುಚ್ಚುಮದ್ದು, ವಾರಕ್ಕೆ 2 ಬಾರಿ ಛಾಯಾ ನುಂಗುವ ಮಾತ್ರೆ, ಪ್ರಸವ ನಂತರ 5-10 ವರ್ಷಗಳವರೆಗೆ ಕಾಪರ್-ಟಿ, ಪುರುಷರು ನಿರೋಧ್ ಬಳಸಿ, ಹೆರಿಗೆಗಳ ನಡುವೆ ಅಂತರ ಕಾಪಾಡಬೇಕು. ಅಂತರ ಕಾಪಾಡುವುದರಿಂದ ತಾಯಿ ಮತ್ತು ಶಿಶುಗಳ ಆರೋಗ್ಯ ಸುರಕ್ಷಿತವಾಗಿಡಬಹುದು. ಮೇಲಿಂದ ಮೇಲೆ ಹೆರಿಗೆ ಆಗುವುದರಿಂದ ತಾಯಿಗೆ ಗರ್ಭಕೋಶದ ತೊಂದರೆ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಹೆರಿಗೆಯಾದ ಹೆಣ್ಣುಮಕ್ಕಳು ಯಾವುದಾದರೂ ಒಂದು ಕುಟುಂಬ ಕಲ್ಯಾಣ ಯೋಜನೆಗಳ ವಿಧಾನಗಳನ್ನ ಬಳಸುವುದರಿಂದ ಅಂತರ ಕಾಪಾಡಬಹುದು ಎಂದು ಹೇಳಿದರು.
ಹೆಣ್ಣಿರಲಿ-ಗಂಡಿರಲಿ ಒಂದು ಅಥವಾ ಎರಡು ಮಕ್ಕಳು ಆದ ಮೇಲೆ ಶಾಶ್ವತ ವಿಧಾನಗಳಾದ ಮಹಿಳೆಯರಿಗೆ ಉದರ ದರ್ಶಕ ಶಸ್ತçಚಿಕಿತ್ಸೆ ಹಾಗೂ ಪುರುಷರಿಗೆ ಎನ್.ಎಸ್.ವಿ ಶಸ್ತçಚಿಕಿತ್ಸೆ ಉಚಿತವಾಗಿ ಮಾಡಲಾಗುತ್ತದೆ. ಶಸ್ತçಚಿಕಿತ್ಸೆ ನಂತರ ಅವರ ಖಾತೆಗೆ ಗೌರವಧನ ಜಮೆ ಮಾಡಲಾಗುತ್ತದೆ. ಇದರಿಂದ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಚಿಕ್ಕಸಂಸಾರ ಚೊಕ್ಕಸಂಸಾರ ಎಂಬುನ್ನು ಅರಿತುಕೊಂಡು ಎಲ್ಲರೂ ಉತ್ತಮ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಉಮಾ ಅವರು ಮಾತನಾಡಿ, ಗರ್ಭಿಣಿಯರ ಆರೈಕೆ, ಲಸಿಕಾ ಕಾರ್ಯಕ್ರಮದ ಮಹತ್ವ, ಎದೆಹಾಲಿನ ಮಹತ್ವ, ಮಕ್ಕಳ ಲಾಲನೆ-ಪಾಲನೆ, ಮಕ್ಕಳಲ್ಲಿ ಕಂಡುಬರುವ ಅಪೌಷ್ಠಿಕ ನಿರ್ಮೂಲನೆ ಬಗ್ಗೆ, ರಕ್ತಹೀನತೆ ಮುಕ್ತ ಪೌಷ್ಠಿಕ ಕರ್ನಾಟಕ, ಹೆಣ್ಣು ಮಗುವಿನ ಮಹತ್ವ ಕುರಿತು, ವಿವರವಾಗಿ ಮಾತನಾಡಿದರು ಮತ್ತು ಶ್ರೀ ಕೃಷ್ಣ, ಎಸ್.ಟಿ.ಎಸ್, ಇವರು ಕ್ಷಯರೋಗ ನಿರ್ಮೂಲನೆ ಮತ್ತು ಕ್ಷಯರೋಗಿಗಳ ಪೌಷ್ಠಿಕ ಆಹಾರ ಸೇವನೆ ಮತ್ತು ಚಿಕಿತ್ಸೆ ಕುರಿತು ವಿವರವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಆರೋಗ್ಯಾಧಿಕಾರಿ ಮಂಜುಳಾ, ಆಶಾ ಕಾರ್ಯಕರ್ತೆಯರಾದ ಅನ್ನಪೂರ್ಣ, ಶರಣಮ್ಮ, ನಿರ್ಮಲಾ, ನೀಲಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳಾ, ಸುವರ್ಣ ಹಾಗೂ ಗರ್ಭಿಣಿಯರು, ಬಾಣಂತಿಯರು, ತಾಯಂದಿರು ಭಾಗವಹಿಸಿದ್ದರು.