ಬೀದರ.22.ಜೂನ್.25:- ಅಂತರರಾಷ್ಟ್ರೀಯ ಯೋಗ ದಿನವನ್ನು ವಿಶ್ವ ಯೋಗ ದಿನ ಎಂದು ಕರೆಯುತ್ತಾರೆಂದು ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ ಹೇಳಿದರು.
ಅವರು ಶನಿವಾರ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ, ರಾಷ್ಟಿçಯ ಸೇವಾ ಯೋಜನೆ ಮತ್ತು ತೋಟಗಾರಿಕೆ ಮಹಾವಿದ್ಯಾಲಯ ಬೀದರ ಇವರುಗಳ ಸಹಯೋಗದೊಂದಿಗೆ ತೋಟಗಾರಿಕೆ ಮಹಾವಿದ್ಯಾಲಯ ಬೀದರನಲ್ಲಿ ಹಮ್ಮಿಕೊಂಡಿದ್ದ 11ನೇ ಅಂತರರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೊದಲ ಬಾರಿಗೆ ಇದನ್ನು 21 ಜೂನ್ 2015 ರಂದು ಆಚರಿಸಲಾಯಿತು. ಭಾರತದ ಪ್ರಧಾನಮಂತ್ರಿಯವರು 27 ಸೆಪ್ಟೆಂಬರ್ 2014 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯೋಗಕ್ಕೆ ಸಂಬAಧಿಸಿದ ಪ್ರಭಾವಶಾಲಿ ಭಾಷಣವನ್ನು ನೀಡುವ ಮೂಲಕ ಈ ಉಪಕ್ರಮವನ್ನು ಕೈಗೊಂಡರು. ಈ ಕಾರಣಕ್ಕಾಗಿ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಲಾಯಿತು ಎಂದು ಹೇಳಿದರು.
ಈ ವರ್ಷದ ಘೋಷವಾಕ್ಯ “ಒಂದು ಭೂಮಿ ಒಂದು ಆರೋಗ್ಯ” ಈ ಮೂಲಕ ಜಗತ್ತೆ ಒಂದು ಎಂದು ಸಾರುವ ಮೂಲಕ ಎಲ್ಲರ ಆರೋಗ್ಯ ಅತೀ ಮುಖ್ಯವಾಗಿರುವುದೆಂದು ತೋರಿಸುತ್ತದೆ. ಪ್ರಪಂಚದಾದ್ಯoತ ಸಾವಿರಾರು ಜನರು ಇದನ್ನು ತಮ್ಮ ದೈನಂದಿನ ದಿನಚರಿಯ ಭಾಗವಾಗಿಸಿಕೊಂಡಿದ್ದಾರೆ. ಹಾಗೂ ಇದರಿಂದ ರೋಗಮುಕ್ತ ಜೀವನವನ್ನು ಹೊಂದಲು ಯೋಗವು ಬಹಳ ಸಹಕಾರಿಯಾಗಿದೆ ಎಂದರು.
ಕು. ಆಶಾರಾಣಿ ಹೌದಖಾನಿ, ಯುವ ಯೋಗ ಪಟು, ಬೀದರ ರವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮದದಲ್ಲಿದ್ದಂತಹ ಮಹಾವಿದ್ಯಾಲಯದ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳಿಗೆ ಯೋಗದ ಬಗ್ಗೆ ಮಾಹಿತಿ ನೀಡಿ ಯೋಗದ ಆಸನಗಳ ಪ್ರಾತ್ಯಕ್ಷಿಕೆ ಮೂಲಕ ಯೋಗವು ಮಾಡುವಂತೆ ಸೂಚಿಸಿದರು.
ಈ ಕಾರ್ಯಕ್ರಮದಲ್ಲಿ ರಾಷ್ಟಿçಯ ಸೇವಾ ಯೋಜನೆಯ ಸಂಯೋಜಕರಾದ ಡಾ. ವಿಜಯಮಹಾಂತೇಶ ಹಾಗೂ ಡಾ. ರಮೇಶ ನಾಯಕ್, ಮಹಾವಿದ್ಯಾಲಯದ ಬೋಧಕ, ಬೊಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಥಮ ವರ್ಷದ ಎನ್.ಎಸ್.ಎಸ್. ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು.