ಬೀದರ.30.ಜುಲೈ.25:- ಬೀದರ ತೋಟಗಾರಿಕೆ ಇಲಾಖೆಯಿಂದ 2025-26 ನೇ ಸಾಲಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಘಟಕಗಳಿಗೆ ಸೌಲಭ್ಯ ಪಡೆಯಲು ಜಿಲ್ಲೆಯ ಆಸಕ್ತ ರೈತ ಸಮುದಾಯದಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೌಲಭ್ಯ ನೀಡುವ ವಿವಿಧ ಘಟಕಗಳ ವಿವರ: 36 ಹೆಕ್ಟರ್ ಹಣ್ಣಿನ ತೋಟಗಳ ಸ್ಥಾಪನೆ, 15 ಹೆಕ್ಟರ್ ಹೈಬ್ರಿಡ್ ತರಕಾರಿ ಪ್ರದೇಶ ವಿಸ್ತರಣೆ, 25 ಹೆಕ್ಟರ್ ಹೂವಿನ ತೋಟಗಳ ಸ್ಥಾಪನೆ, 08 ಹೆಕ್ಟರ್ ಸುಗಂಧ ದ್ರವ್ಯ ತೋಟಗಳ ಸ್ಥಾಪನೆ, 15 ಹೆಕ್ಟರ್ ಹಣ್ಣಿನ ತೋಟಗಳ ಪುನಶ್ಚೇತನ, ನೀರು ಸಂಗ್ರಹಣ ಘಟಕ, ಸಂರಕ್ಷಿತ ಬೇಸಾಯ ಕಾರ್ಯಕ್ರಮ, ಯಾತ್ರೀಕರಣ, ಕೊಯ್ಲೋತ್ತರ ನಿರ್ವಹಣೆ ಘಟಕಗಳು, ಮಾರುಕಟ್ಟೆ: (ತಳ್ಳುವ ಗಾಡಿ) ಪ್ರತಿ ಘಟಕಗಳಿಗೆ ರೈತ ಬಾಂಧವರು ಸಹಾಯಧನ ಪಡೆದು ಆರ್ಥಿಕವಾಗಿ ಸದೃಢರಾಗಲು ತಿಳಿಸಿರುತ್ತಾರೆ.
ಅರ್ಹರು ಅರ್ಜಿಯನ್ನು ದಿನಾಂಕ: 08-08-2025 ರವರೆಗೆ ಭರ್ತಿ ಮಾಡಿ ಅಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ: ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಬೀದರ (8660841546), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ), ಹುಮನಾಬಾದ (9916874287), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ),ಬಸವಕಲ್ಯಾಣ (7019681952), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಭಾಲ್ಕಿ (9845099625), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಔರಾದ (ಬಿ) (7259270938) ನಂಬರಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.