ಬೀದರ.25.ಜುಲೈ.25:- 2025-26ನೇ ಸಾಲಿಗೆ ಕೇಂದ್ರ ಪುರಸ್ಕøತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ-ತಾಳೆ ಬೆಳೆ ಯೋಜನೆಯಡಿ ಬಸವಕಲ್ಯಾಣ ತಾಲ್ಲೂಕಿಗೆ ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದಡಿ ಒಟ್ಟು 89.50 ಹೆಕ್ಟರ್ ಭೌತಿಕ ಗುರಿ ಇದ್ದು, ನೀರಾವರಿ ಸೌಲಭ್ಯ ಹೊಂದಿರುವ ರೈತ ಫಲಾನುಭವಿಯವರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ ಎಂದು (ಜಿಲ್ಲಾ ಪಂಚಾಯತ) ಬಸವಕಲ್ಯಾಣ ಹಿರಿಯಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕಾಶಿನಾಥ ಸಹಾಯಕ ತೋಟಗಾರಿಕೆ ಅಧಿಕಾರಿ (9483857416), ಮಲ್ಲಿಕಾರ್ಜುನ ಸಹಾಯಕ ತೋಟಗಾರಿಕೆ ಅಧಿಕಾರಿ (6362412305), ಪ್ರಶಾಂತಕುಮಾರ ಸಹಾಯಕ ತೋಟಗಾರಿಕೆ ಅಧಿಕಾರಿ (9844434659), ಲಕ್ಷ್ಮೀಕಾಂತ ಸಹಾಯಕ ತೋಟಗಾರಿಕೆ ಅಧಿಕಾರಿ (9448620837), ಅಶ್ವಿನಿ ಸಹಾಯಕ ತೋಟಗಾರಿಕೆ ಅಧಿಕಾರಿ (7760762812), ನಾಗಶೆಟ್ಟಿ ಸಹಾಯಕ ತೋಟಗಾರಿಕೆ ಅಧಿಕಾರಿ (9341882739) ಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.