ಶ್ರೀ ದತ್ತಾಶ್ರಮ ವಾರ್ಷಿಕ ಮಹೋತ್ಸವದ ಅಂಗವಾಗಿ ಶ್ರೀ ದತ್ತಾಶ್ರಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ರಾಂಪೂರೆ ಕಾಲೋನಿಯಲ್ಲಿ ಡಿಸೇಂಬರ್ 14 ಮತ್ತು 15 ರಂದು ಎರಡು ದಿವಸಗಳ ಶ್ರೀ ದತ್ತ ಜಯಂತಿ ಆನಂದ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ಡಿ. ರಂದು ಬೆಳಿಗ್ಗೆ 7:30 ಕ್ಕೆ ಶ್ರೀ ದತ್ತಾತ್ರೇಯ ಮಹಾಭಿಷೇಕ, 9 ಗಂಟೆ ಶ್ರೀ ದತ್ತಾತ್ರೇಯ ನವನಾಥ ಸಂಪ್ರದಾಯ ಯಜ್ಞ ಪ್ರಾರಂಭ ಹಾಗೂ ಮಧ್ಯಾಹ್ನ 12:30 ಪೂರ್ಣಾಹುತಿ ನೆರವೇರಲಿದೆ. ತದನಂತರ 3 ಗಂಟೆಗೆ ಗಣ್ಯರಿಗೆ ಸನ್ಮಾನ, ಸಂಜೆ 4:30 ಕ್ಕೆ ಪೂಜ್ಯ ಜ್ಯೋತಿರ್ಮಯಾನಂದರಿಂದ ಪ್ರವಚನ ಕಾರ್ಯಕ್ರಮ, ರಾತ್ರಿ 9:45 ಕ್ಕೆ ಭಜನಾ ಕಾರ್ಯಕ್ರಮ ನಡೆಯಲಿದೆ.
ಡಿ. 15 ರಂದು ಬೆಳಿಗ್ಗೆ 11 ಗಂಟೆಗೆ ಪಲ್ಲಕ್ಕಿ ಸೇವೆ, 11:45 ಕ್ಕೆ ಗೋಪಾಳಕಾಲ, ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ, 3 ಗಂಟೆಗೆ ಪೀಠಾಧಿಪತಿಗಳಾದ ಶ್ರೀ ಜಗನ್ನಾಥ್ ಮಹಾರಾಜ ಕರಕಮಲದಿಂದ (ಬಿದಾಗಿ) ವಿತರಣೆ, 4 ಗಂಟೆಗೆ ಶ್ರೀ ದತ್ತ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ನಂತರ ದೀಪೋತ್ಸವ ಕಾರ್ಯಕ್ರಮ ಜರುಗಲಿದ್ದು. ಈ ಶ್ರೀ ದತ್ತ ಜಯಂತಿ ಆನಂದ ಮಹೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಭಕ್ತರು ಭಾಗವಹಿಸಿ ದತ್ತಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ದತ್ತಾಶ್ರಮ ಚಾರಿಟೇಬಲ್ ಟ್ರಸ್ಟ್ ನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Source: www.prajaprabhat.com