|

ಡಿ.ಎಡ್ ಮತ್ತು ಬಿ.ಎಡ್ ವಿಶೇಷ ಶಿಕ್ಷಣ : ಹುದ್ದೆಗಳಿಗೆ ಅರ್ಜಿ ಆಹ್ವಾನ

2025-26ನೇ ಶೈಕ್ಷಣಿಕ ಸಾಲಿಗೆ ಖಾಲಿ ಇರುವ ಬಿಐಇಆರ್‍ಟಿ ಪ್ರಾಥಮಿಕ ನಾನಾ ತಾತ್ಕಾಲಿಕ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಗ್ರ ಶಿಕ್ಷಣ ಅಭಿಯಾನದ ಉಪನಿರ್ದೇಶಕರು ತಿಳಿಸಿದ್ದಾರೆ.

ಸಮನ್ವಯ ಶಿಕ್ಷಣ ವಿಭಾಗದಡಿ ಪ್ರಾಥಮಿಕ

(1 -5) ಡಿ. ಎಡ್ ವಿಶೇಷ ಶಿಕ್ಷಣ(ಆರ್‍ಸಿಐ ಸಿಆರ್‍ಆರ್ ಸಂಖ್ಯೆಯೊಂದಿಗೆ),

(6 ರಿಂದ 8)ಪ್ರೌಢ  ಬಿ.ಎಡ್ ವಿಶೇಷ ಶಿಕ್ಷಣ(ಆರ್‍ಸಿಐ ಸಿಆರ್‍ಆರ್ ಸಂಖ್ಯೆಯೊಂದಿಗೆ)

(9 ರಿಂದ 12) ಪ್ರೌಢ ಬಿ.ಎಡ್ ವಿಶೇಷ

ಶಿಕ್ಷಣ (ಆರ್‍ಸಿಐ ಸಿಆರ್‍ಆರ್ ಸಂಖ್ಯೆಯೊಂದಿಗೆ)  ಹುದ್ದೆಗಳಿಗೆ ತಾತ್ಕಾಲಿಕವಾಗಿ ನೇರ ಗುತ್ತಿಗೆ ಅಡಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು 18-6-2025 ರೊಳಗಾಗಿ ಉಪನಿರ್ದೇಶಕರು ಮತ್ತು ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಶಿಕ್ಷಣ ಕರ್ನಾಟಕ, ರಾಯಚೂರು ಇವರಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

Similar Posts

Leave a Reply

Your email address will not be published. Required fields are marked *