|

ಡಾ. ಮನಮೋಹನ್ ಸಿಂಗ್ ವಿಶ್ವವಿದ್ಯಾಲಯ ಮರು ನಾಮಕರಣ ವಾಗಲಿದೆ.

ಬೆಂಗಳೂರು.19.ಆಗಸ್ಟ್.25:- ಇಂದು ರಾಜ್ಯ ವಿಶ್ವವಿದ್ಯಾಲಯ ವಿಧೇಯಕ ತೀಡುಪಡಿ ಮಾಡಲಾಯ್ತು ಇನ್ಮುಂದೆ ಕರ್ನಾಟಕ ವಿಧಾನಸಭೆಯಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕ ಇಂದು ಅಂಗೀಕಾರಗೊಂಡಿದೆ ಹೀಗಾಗಿ ಬೆಂಗಳೂರು ನಗರ ವಿಶ್ವವಿದ್ಯಾಲಯ, ಇನ್ಮುಂದೆ ಡಾ.ಮನಮೋಹನ್ ಸಿಂಗ್  ವಿಶ್ವವಿದ್ಯಾಲಯ ಎಂಬುದಾಗಿ ಮರು ನಾಮಕರಣವಾಗಲಿದೆ.

ರಾಜ್ಯ ರಾಜಧಾನಿ ಬೆಂಗಳೂರು ನಗರ ವಿಶ್ವವಿದ್ಯಾಲಯ ಹೆಸರು ಮರು ನಾಮಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ  ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು.

ಈ ವಿಧೇಯಕದ ಬಗ್ಗೆ ಚರ್ಚೆಯ ನಂತ್ರ ಅಂಗೀಕಾರವನ್ನು ನೀಡಲಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯದ ಹೆಸರು ಬದಲಾವಣೆಯಾಗಲಿದೆ.

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕವು ವಿಧಾನ ಪರಿಷತ್ತಿನಲ್ಲೂ ಅಂಗೀಕಾರಗೊಂಡರೇ ಡಾ.ಮನಮೋಹನ್ ಸಿಂಗ್ ವವಿಶ್ವವಿದ್ಯಾಲಯ ಎಂಬುದಾಗಿ ಬೆಂಗಳೂರು ನಗರ ವಿಶ್ವವಿದ್ಯಾಲಯ ಮರು ನಾಮಕರಣವಾಗಲಿದೆ.

Similar Posts

Leave a Reply

Your email address will not be published. Required fields are marked *