ಯಾದಗಿರಿ.12.ಎಪ್ರಿಲ್ .25:- ರಾಜೀವಗಾಂಧಿ ನಗರ ಮೈದಾನದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತ್ಯೋತ್ಸವ ಅಂಗವಾಗಿ ಕೊಟಗೇರಾವಾಡ ಪ್ರಿಮೀಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಕೊಟಗೇರಾವಾಡ ಮುಖಂಡರಿಂದ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಏರಿಯಾ ಮುಖಂಡರಾದ ಧರ್ಮ ಗಿರೆಪ್ಪನೋರ್ ಮಾತನಾಡಿ ಕ್ರೀಡಾಕೂಟಗಳ ಮಹತ್ವವನ್ನು ಅರಿತು ಕ್ರೀಡೆಗಳನ್ನು ಅಭಿವೃದ್ಧಿಪಡಿಸುವ ಮನೋಭಾವ ಬೆಳೆಸಿಕೊಂಡು ಇಂದಿನ ಯುವಜನತೆಯು ದುಶ್ಚಟಗಳಿಗೆ ಬಲಿಯಾಗದೆ ನಗರದಲ್ಲಿ ಉತ್ತಮ ಆಟಗಾರರಿದ್ದು ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಬೇಕೆಂದರು ಹೇಳಿದರು.
ಈ ಸಂದರ್ಭದಲ್ಲಿ ಚಂದ್ರಕಾಂತ ಮುನಿಯಪ್ಪನೋರ್, ಬಸವರಾಜ ಗಿರೆಪ್ಪನೋರ್, ಚಂದಪ್ಪ ಮುನಿಯಪ್ಪನೋರ್, ಧರ್ಮ ಗಿರೆಪ್ಪನೋರ್, ಸೈದಪ್ಪ ಕುಯಿಲೂರು, ಶಿವು ಗಿರೆಪ್ಪನೋರ್, ತಾಯಪ್ಪ ಭಂಡಾರಿ, ಸುರೇಶ ಮುನಿಯಪ್ಪನೋರ್, ರಾಹುಲ್ ಕೊಲ್ಲುರ್, ಮಲ್ಲಪ್ಪ ನೂಲ್, ಪ್ರವೀಣ. ರಾಕೇಶ್, ರಾಜು ಇನ್ನಿತರರು ಇದ್ದರು.
