ಬೀದರ.26.ಮಾರ್ಚ.25:- ದಿನಾಂಕ: 05-04-2025 ರಂದು ‘ಹಸಿರು ಕ್ರಾಂತ್ರಿಯ ಹರಿಕಾರ’ ಡಾ.ಬಾಬು ಜಗಜೀವನ ರಾಂ ಅವರ 118ನೇ ಜಯಂತಿಯನ್ನು ಆಚರಿಸುವ ಕುರಿತು ಮಾರ್ಚ.28 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳು ಬೀದರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯನ್ನು ಕರೆಲಾಗಿದೆ ಎಂದು ಬೀದರ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಯುಕ್ತ ಪೂರ್ವಭಾವಿ ಸಭೆಗೆ ಸಭೆಗೆ ಪರಿಶಿಷ್ಟ ಜಾತಿ ಸಮಾಜದ ಮುಖಂಡರು, ವಿವಿಧ ದಲಿತ ಸಂಟನೆಗಳ ಪದಾಧಿಕಾರಿಗಳು, ಸಂಘ-ಸAಸ್ಥೆಗಳ ಮುಖಂಡರು ಸಭೆಗೆ ಹಾಜರಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಅವರು ತಿಳಿಸಿದ್ದಾರೆ.