|

ಟಣಕನಕಲ್: ಆದರ್ಶ ವಿದ್ಯಾಲಯದ 6ನೇ ತರಗತಿಯ ಖಾಲಿ ಸೀಟುಗಳಿಗೆ ಕೌನ್ಸಲಿಂಗ್

ಕೊಪ್ಪಳ.03.ಆಗಸ್ಟ.25: ಕೊಪ್ಪಳ ತಾಲ್ಲೂಕಿನ ಟಣಕನಕಲ್ ಆದರ್ಶ ವಿದ್ಯಾಲಯದಲ್ಲಿ 2025-26ನೇ ಸಾಲಿಗೆ 6ನೇ ತರಗತಿಯ ಕೊನೆಯ ಸುತ್ತಿನ ದಾಖಲಾತಿಗೆ ಸಂಬಂಧಿಸಿದಂತೆ ಕೌನ್ಸಲಿಂಗ್ ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.

ಟಣಕನಕಲ್ ಆದರ್ಶ ವಿದ್ಯಾಲಯದ 6ನೇ ತರಗತಿಗೆ 1 ರಿಂದ 3ನೇ ಸುತ್ತಿನ ದಾಖಲಾತಿ ನಂತರ ಖಾಲಿ ಉಳಿದಿರುವ ಒಟ್ಟು 40 ಸೀಟುಗಳಿಗೆ ವಿವಿಧ ಮಿಸಲಾತಿವಾರು, 1:30 ಅನುಪಾತದಂತೆ ಒಂದು ಸೀಟಿಗೆ 30 ವಿದ್ಯಾರ್ಥಿಗಳಂತೆ ಕೌನ್ಸಲಿಂಗ್‌ಗೆ ಅರ್ಹವಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಆದರ್ಶ ವಿದ್ಯಾಲಯ ಟಣಕನಕಲ್ ಹಾಗೂ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಈ ಪಟ್ಟಿಯಲ್ಲಿ ಹೆಸರಿರುವ ವಿದ್ಯಾರ್ಥಿಗಳಿಗೆ ಆಗಸ್ಟ್ 11 ರಿಂದ 14ರ ವರೆಗೆ ಬೆಳಿಗ್ಗೆ 10 ಗಂಟೆಗೆ ಟಣಕನಕಲ್ ಆದರ್ಶ ವಿದ್ಯಾಲಯದಲ್ಲಿ ಕೌನ್ಸಲಿಂಗ್ ಏರ್ಪಡಿಸಲಾಗಿದೆ.

ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೀಡಿರುವ ದೂರವಾಣಿ ಸಂಖ್ಯೆಗೆ ಈ ಕೌನ್ಸಲಿಂಗ್ ಬಗ್ಗೆ ರಾಜ್ಯ ಕಛೇರಿಯಿಂದ ಸಂದೇಶವನ್ನು ಅಥವಾ ಎಸ್.ಎಮ್.ಎಸ್ ಕಳಿಸಲಾಗುವುದು. ಪಟ್ಟಿಯಲ್ಲಿ ತಮ್ಮ ಹೆಸರನ್ನು ಖಚಿತಪಡಿಸಿಕೊಂಡು ಕೌನ್ಸಲಿಂಗ್‌ಗೆ ಹಾಜರಾಗುವ ಸಂದರ್ಭದಲ್ಲಿ 6ನೇ ತರಗತಿಯ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರ ಮತ್ತು ಇತರೆ ಸಂಬಂಧಿಸಿದ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು. ಹೆಚ್ಚಿನ ಮಾಹಿತಿಗಾಗಿ ಟಣಕನಕಲ್ ಆದರ್ಶ ವಿದ್ಯಾಲಯಕ್ಕೆ ಶಾಲಾ ಅವಧಿಯಲ್ಲಿ ಭೇಟಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.

Similar Posts

Leave a Reply

Your email address will not be published. Required fields are marked *