ಬೆಂಗಳೂರು.22.ಜನವರಿ.26:ವಿಧಾನಮಂಡಲ ಜಂಟಿ ಅಧಿವೇಶನವನ್ನು ಜನವರಿ 22 ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ಸಮಾವೇಶಗೊಳ್ಳುವಂತೆ ಅಧಿಸೂಚನೆ 15 ಜನವರಿ 2026 ಹೊರಡಿಸಿದ್ದಾರೆ.
ಜನವರಿ 22 ರಿಂದ 31ರವರೆಗೆ ಅಧಿವೇಶನದಲ್ಲಿ ನಡೆಯಲಿರುವ ತಾತ್ಕಾಲಿಕ ಕಾರ್ಯಕ್ರಮ ಪಟ್ಟಿಯನ್ನು ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಪ್ರಕಟಿಸಿದ್ದಾರೆ.
ಜನವರಿ 22ರಂದು ಬೆಳಿಗ್ಗೆ 11 ಗಂಟೆಗೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜಪಾಲರು ಭಾಷಣ ಮಾಡಲಿದ್ದಾರೆ. ಜನವರಿ 23ರಂದು ಕಲಾಪ ನಡೆಯಲಿದೆ.
ಜ. 24 ಶನಿವಾರ, ಜ. 25 ಭಾನುವಾರ ಮತ್ತು ಜನವರಿ 26ರ ಸೋಮವಾರ ಗಣರಾಜ್ಯೋತ್ಸವ ಸೇರಿ ಮೂರು ದಿನ ಸಾರ್ವತ್ರಿಕ ರಜಾ ದಿನ ಇರಲಿದೆ.
ಜನವರಿ 27 ರಿಂದ 31ರ ಶನಿವಾರದವರೆಗೆ ಐದು ದಿನ ಸತತವಾಗಿ ಕಲಾಪ ನಡೆಯಲಿದ್ದು, ಒಟ್ಟು 7 ದಿನಗಳ ಕಾಲ ವಿಧಾನ ಮಂಡಲ ಉಭಯ ಸದನಗಳ ಅಧಿವೇಶನ ನಡೆಯಲಿದೆ.






Any questions related to ಜ. 22ರಿಂದ 31ರವರೆಗೆ ವಿಶೇಷ ಅಧಿವೇಶನ’ ನಡೆಯಲಿದೆ.?