03/08/2025 10:17 AM

Translate Language

Home » ಲೈವ್ ನ್ಯೂಸ್ » ಜೆಸ್ಕಾಂ ಮುನಿರಾಬಾದ್: ಇಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

ಜೆಸ್ಕಾಂ ಮುನಿರಾಬಾದ್: ಇಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

Facebook
X
WhatsApp
Telegram

ಕೊಪ್ಪಳ.03.ಆಗಸ್ಟ್.25:- ಮುನಿರಾಬಾದ್ ಪವರ್ ಹೌಸ್‌ನಲ್ಲಿ 220 ಕೆ.ವಿ ಲಿಂಗಾಪುರ-ಮುನಿರಾಬಾದ್ ಲೈನ್-2 ರ ಹಾನಿಗೊಳಗಾದ ಇನ್ಸುಲೇಟರ್ ಸ್ಟ್ರಿಂಗ್‌ಗಳನ್ನು ತುರ್ತು ಆಧಾರದ ಮೇಲೆ ಬದಲಾವಣೆ ನಡೆಸುತ್ತಿರುವ ಪ್ರಯುಕ್ತ ಮುನಿರಾಬಾದ್ ವ್ಯಾಪ್ತಿಯ ಗ್ರಾಹಕರಿಗೆ ಆಗಸ್ಟ್ 3 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಅಂದು 110ಕೆ.ವಿ ಎಕ್ಸಟೆನ್‌ಶನ್ ಬುಸ್ ಆ್ಯಟ್ 433 ಬೈ ಡಬ್ಲ್ಯೂ.ಎಸ್ ಕೊಪ್ಪಳ 220ಕೆ.ವಿ ಮುನಿರಾಬಾದ್ ಪವರ್ ಹೌಸ್, 33ಕೆವಿ ಕಂಪಸಾಗರ ಮತ್ತು 33ಕೆವಿ ಎಮ್.ಎಸ್.ಪಿ.ಎಲ್ ಪೀಡರ್ ಕೆ.ಪಿ.ಟಿ.ಸಿ.ಎಲ್., ಮುನಿರಾಬಾದ್‌ಗೆ ಒಳಪಡುವ ಎಫ್-1 ಫ್ಯಾಕ್ಟರಿ ಫೀಡರ್ ಗ್ರಾಮಗಳಾದ ಲಿಂಗಾಪುರ, ಹೊಸಳ್ಳಿ ಮತ್ತು ಬೇವಿನಹಳ್ಳಿ, ಹುಲಿಗಿ (ಆರ್.ಎಸ್) ಟಾಟಾ ಶೋ ರೂಮ್ ಏರಿಯಾ ಮತ್ತು ಎಫ್-2 ಕಾಲೋನಿ ಫೀಡರ್ ನ ಕಿರ್ಲೋಸ್ಕರ್ ಕಾರ್ಖಾನೆ ಏರಿಯಾ, ಮುನಿರಾಬಾದ್ ಮತ್ತು ಎಸ್.ಆರ್.ಎಸ್ ಲಿಂಗಾಪುರ, ಹಾರ್ಟಿಕಲ್ಟರ್ ಕಾಲೇಜ್ ಏರಿಯಾ, ಚಿಕ್ಕ ಕಾಸನಕಂಡಿ ಏರಿಯಾ ಹಾಗೂ ಎಫ್-4 ಮುನಿರಾಬಾದ್ ಐ.ಪಿ ಫೀಡರ್ ನ ಲಿಂಗಾಪುರ, ಹೊಸಳ್ಳಿ ಮತ್ತು ಕಾಸನಕಂಡಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು.


ನಿರ್ವಹಣ ಕಾರ್ಯದ ಪ್ರಯುಕ್ತ ವಿದ್ಯುತ್ ಮಾರ್ಗಮುಕ್ತತೆ (ಲೈನ್ ಕ್ಲೇರ್) ತೆಗೆದುಕೊಳ್ಳಲಾಗಿರುತ್ತದೆ. ಒಂದು ವೇಳೆ ನಿರ್ಣಯಿಸಿದ ಅವಧಿಗಿಂತ ಮೊದಲೇ ಕಾಮಗಾರಿ ಪೂರ್ಣಗೊಂಡರೆ, ತಕ್ಷಣವೇ ಮಾರ್ಗಮುಕ್ತತೆಯನ್ನು ರಿಟರ್ನ್ ಮಾಡಿ ವಿದ್ಯುತ್ ಪೂರೈಕೆಯನ್ನು ಪುನಃ ಸ್ಥಾಪಿಸಲಾಗುವುದು. ಆದ್ದರಿಂದ ಸಾರ್ವಜನಿಕರು, ಗ್ರಾಹಕರು ಯಾವುದೇ ಕಾರಣಕ್ಕೂ ಮಾರ್ಗಮುಕ್ತತೆ ತೆಗೆದುಕೊಂಡ ಅವಧಿಯಲ್ಲಿ ವಿದ್ಯುತ್‌ಗೆ ಸಂಬಂಧಿಸಿದ ಯಾವುದೇ ಕಾಮಗಾರಿಯನ್ನು ನಡೆಸಬಾರದೆಂದು ಈ ಮೂಲಕ ಕೋರಲಾಗಿದೆ.

ಈ ಕಾರಣದಿಂದಾಗಿ ಯಾವುದೇ ವಿದ್ಯುತ್ ಅವಘಡ ಸಂಭವಿಸಿದಲ್ಲಿ ಕಾಮಗಾರಿಯನ್ನು ನಡೆಸಿದರೆ, ಕಾಮಗಾರಿಯನ್ನು ನಡೆಸಿದ ಸಾರ್ವಜನಿಕರೇ ಅಥವಾ ಗ್ರಾಹಕರೇ ನೇರ ಹೊಣೆಗಾರರಾಗುತ್ತಾರೆ. ಇಂತಹ ವಿದ್ಯುತ್ ಅವಘಡಕ್ಕೆ ಜೆಸ್ಕಾಂ ಯಾವುದೇ ರೀತಿಯಲ್ಲಿ ಜವಾಬ್ದಾರವಲ್ಲ ಎಂದು ಈ ಮೂಲಕ ಸ್ಪಷ್ಟಪಡಿಲಾಗಿದೆ ಎಂದು ಮುನಿರಾಬಾದ್ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!