ಬೀದರ.22.ಜುಲೈ.25:- ಜಿಲ್ಲಾ ಉದ್ಯೋಗ ವಿನೀಮಯ ಕಛೇರಿ ಬೀದರ, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಐಟಿಐ ಕಾಲೇಜ್ ಆವರಣ, ಕುಮಬಾರವಾಡಾ ಕ್ರಾಸ್, ಮನ್ನಳ್ಳಿ ರೋಡ ಬೀದರನಲ್ಲಿ ಜುಲೈ.26 ರಂದು ಬೆಳಿಗ್ಗೆ 11 ರಿಂದ 3 ಗಂಟೆಯವರೆಗೆ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಈ ಉದ್ಯೋಗ ಮೇಳದಲ್ಲಿ ಖಾಸಗಿ ಕಂಪನಿಗಳು ಭಾಗವಹಿಸುತ್ತಿರುವುದರಿಂದ ಗ್ರಾಮೀಣ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುವುದರಿಂದ ಈ ಉದ್ಯೋಗ ಮೇಳದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾಗವಹಿಸುವ ಅಭ್ಯರ್ಥಿಗಳು ಮೊಬೈಲ್ ಸಂಖ್ಯೆ: 9154955835, 9901563260, 9164741989 ಗೆ ಕರೆ ಮಾಡಿ ಪೂರ್ವ ನೋಂದಣಿ ಮಾಡಿಕೋಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನೀಮಯ ಕಛೇರಿ ಬೀದರಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.