ಬೀದರ.02.ಜುಲೈ.25:- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತ ಬಾಂಧವರಿಗಾಗಿ/ಪಶುಪಾಲಕರಿಗಾಗಿ ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರನಲ್ಲಿ ವೈಜ್ಞಾನಿಕ ಪಶುಪಾಲನೆಯಿಂದ ಆರ್ಥಿಕ ಅಭಿವೃದ್ದಿ ಮತ್ತು ಸುಸ್ಥಿರತೆ ಕುರಿತು ನಾಲ್ಕು ದಿನಗಳ ತರಬೇತಿ ಕಾರ್ಯಕ್ರಮವನ್ನು ಜುಲೈ. 15 ರಿಂದ 18 ರವರೆಗೆ ಆಯೋಜಿಸಲಾಗುತ್ತಿದೆ ಎಂದು ಪಶುವೈದ್ಯಕೀಯ ಮಹಾವಿದ್ಯಾಲಯದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಬೆಂಗಳೂರು ಪ್ರಾಯೋಜಿಸಿರುವ ಸದರಿ ತರಬೇತಿಯಲ್ಲಿ ಕೇವಲ 30 ರೈತರಿಗೆ ಅವಕಾಶವಿದ್ದು, ಆಸಕ್ತ ರೈತಬಾಂಧವರು/ಪಶುಪಾಲಕರು ಜುಲೈ.7 ರೊಳಗಾಗಿ ಮೊಬೈಲ್ ಸಂಖ್ಯೆ: 8023281592 ಅಥವಾ 7411479651 ಗೆ ಸಂಪರ್ಕಿಸಿ ಹೆಸರನ್ನು ನೋಂದಾಯಿಸಬೇಕು. ಮೊದಲು ನೋಂದಾಯಿಸಿದ ರೈತರಿಗೆ ಆದ್ಯತೆ ನೀಡಲಾಗುತ್ತಿದ್ದು, ಯಶಸ್ವಿಯಾಗಿ ತರಬೇತಿಯನ್ನು ಪೂರ್ಣಗೊಳಿಸುವ ಶಿಬಿರಾರ್ಥಿಗಳಿಗೆ/ ಪಶುಪಾಲಕರಿಗೆ ಪ್ರಮಾಣ ಪತ್ರವನ್ನು ನೀಡಲಾಗುತ್ತದೆಂದು ಅವರು ತಿಳಿಸಿದ್ದಾರೆ.