ಬೀದರ, 05ಡಿಸೆಂಬರ್24:- ಕರ್ನಾಟಕ ರಾಜ್ಯ ಲೇವಾದೇವಿಗಾರರು, ಗಿರವಿ ಕಾಯ್ದೆ 1961 ರ ಅಡಿ ಪರವಾನಿಗೆ ಪಡೆದು ಕಾರ್ಯನಿರ್ವಾಹಿಸುತ್ತಿರುವ ಬೀದರ ಜಿಲ್ಲೆಯ ಲೇವಾದೇವಿ, ಗಿರಿವಿ ಹಾಗೂ ಹಣಕಾಸು ಸಂಸ್ಥೆಗಳ ಪರವಾನಿಗೆ ಅವಧಿಯು 31 ನೇ ಮಾರ್ಚ್ 2025 ರಂದು ಮುಕ್ತಾಯವಾಗುತ್ತಿರುವುದರಿಂದ ತಮ್ಮ ಸಂಸ್ಥೆಯ ಪರವಾನಿಗೆ ನವೀಕರಣಕ್ಕೆ ಸಂಬಂಧಿಸಿದಂತೆ 31 ಜನೆವರಿ 2025 ರೊಳಗಾಗಿ ನಿಗಧಿತ ಶುಲ್ಕವನ್ನು ಪಾವತಿಸಿ ನವೀಕರಣ ಮಾಡಿಕೊಳ್ಳಬೇಕು.
ನಂತರ ಬಂದ ನವೀಕರಣ ಅರ್ಜಿಗಳಿಗೆ ಕಾಯ್ದೆ ಕಲಂ 6 (4) ರಲ್ಲಿ ನಿರ್ದಿಷ್ಟಪಡಿಸಲಾದ ದರದ ದುಪ್ಪಟ್ಟು (ಎರಡರಷ್ಟು) ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ ಎಂದು ಬೀದರ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಜಿಲ್ಲೆಯ ಲೇವಾದೇವಿಗಾರರು, ಗಿರವಿದಾರರು ಮತ್ತು ಹಣಕಾಸು ಸಂಸ್ಥೆಗಳ ಪರವಾನಿಗೆ ನವೀಕರಣಗೋಳಿಸದೆ ವ್ಯವಹಾರ ತೊಡಗಿಸಿಕೊಂಡಲ್ಲಿ ಅವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ನವೀಕರಣ ಗೊಳಿಸದೆ ಇರುವ ಲೇವಾದೇವಿಗಾರರು, ಗಿರವಿದಾರರು ಮತ್ತು ಹಣಕಾಸು ಸಂಸ್ಥೆಗಳ ಭದ್ರತಾ ಠೇವಣಿಯನ್ನು ಮುಟ್ಟಗೋಲೂ ಮಾಡಲಾಗುವುದು ಹಾಗೂ ಕರ್ನಾಟಕ ರಾಜ್ಯ ಲೇವಾದೇವಿಗಾರರು, ಗಿರವಿ ಕಾಯ್ದೆ 1961 ರ ಕಾಯ್ದೆ ಕಲಂ 7ಎ (2) ರ ಪ್ರಕಾರ ವ್ಯವಹಾರದಲ್ಲಿ ತೊಡಗಿಸಿದ ಮೊತ್ತಕ್ಕೆ ಅನುಗುಣಾವಾಗಿ ಭದ್ರತಾ ಠೇವಣಿಯನ್ನು ಪಾವತಿಸಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಬೀದರ ಈ ಕಛೇರಿಯ ಮುಖಾಂತರ ನವೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.