ಜಿಪಂ ವ್ಯಾಪ್ತಿಗೆ ಪಿಯು ಡಿಡಿ ಕಚೇರಿ ವರ್ಗಕ್ಕೆ ವಿರೋಧ
ಚಿತ್ರದುರ್ಗ.14.ಮಾರ್ಚ್.26: ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರ ಕಚೇರಿ ಆಡಳಿತಾತ್ಮಕ ನಿಯಂತ್ರಣವನ್ನು ಜಿಪಂಗೆ ವರ್ಗಾ ಯಿಸುವ ಪ್ರಸ್ತಾವ ಹಿಂಪಡೆಯಲು ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯ ಹಾಗೂ ಉಪನ್ಯಾಸಕರ ಸಂಘದ ಜಿಲ್ಲಾ ಘಟಕಗಳ ನೇತೃತ್ವದಡಿ ಪ್ರಾಚಾರ್ಯರು, ಉಪನ್ಯಾಸಕರು ಗುರುವಾರ ಮೌನ ಪ್ರತಿ ಭಟನೆ ಮಾಡಿದರು.
ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಆರ್.ಮಲ್ಲೇಶ್ ಮಾತನಾಡಿ, ರಾಜ್ಯದಲ್ಲಿ ೧೩೧೭ ಸರ್ಕಾರಿ, ೮೨೯ ಅನುದಾನಿತ ಪ ದವಿ ಪೂರ್ವ ಕಾಲೇಜುಗಳಿವೆ. ಪ್ರತಿ ಜಿಲ್ಲೆ ಪಿಯು ಡಿಡಿಗಳು ಆಡಳಿತಾತ್ಮಕ ಕೆಲಸದ ಜತೆ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ.
ಒಂದು ವೇಳೆ ಇಲಾಖೆಯ ಆಡಳಿತ, ಶೈಕ್ಷಣಿಕ, ಮಾನ್ಯತೆ, ನವೀಕರಣ, ಮೂಲ ಸೌಕರ್ಯ ಒದಗಿಸುವ ಅಽಕಾರವನ್ನು ಜಿಪಂ ಸಿಇಒಗೆ ವಹಿಸಿದರೆ ಇಲಾಖೆ ಅಸ್ಮಿತೆಗೆ ಧಕ್ಕೆಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಪಿಎಂಜೆ ರಾಜೇಶ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಉತ್ತರ ಪತ್ರಿಕೆ ಮೌಲ್ಯ ಮಾಪನ ಭತ್ಯೆ, ಪರೀಕ್ಷಾ ಸಂಭಾವನೆ ಪರಿಷ್ಕರಿಸಿಲ್ಲ. ಅಲ್ಲದೇ ಕಳೆದ ವರ್ಷದ ಬಾಕಿ ಇರುವ ಸಂಭಾವನೆಯನ್ನು ಖಾಸಗಿ ಹಾಗೂ ಅತಿಥಿ ಉಪನ್ಯಾಸಕರಿಗೆ ಈವರೆಗೂ ವಿತರಿಸಿಲ್ಲ ಎಂದರು.
ಜಿಲ್ಲಾ ಉಪನ್ಯಾಸಕರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಕಾಂತರಾಜು ಮಾತನಾಡಿ, ಖಾಲಿ ಇರುವ ಪ್ರಾಚಾರ್ಯ, ಉಪನ್ಯಾಸ ಕರ ಹುದ್ದೆ ಭರ್ತಿ ಆಗದದಿದ್ದರೆ ಕಾಲೇ ಜು ಮುಚ್ಚಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ನೌಕರರ ಸಂಘದ ಜಂಟಿ ಕಾರ್ಯದರ್ಶಿ ಎ.ನಾಗರಾಜ್ ಮಾತನಾಡಿ, ಬೇಡಿಕೆಗಳನ್ನು ಈಡೇರಿಸದಿದ್ದರೇ ೨೦೨೬ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ-೧ರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸಲಾಗುವುದು ಹಾಗೂ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಇಲಾಖೆ ಸಿಬ್ಬಂದಿಯೊoದಿಗೆ ಅನಿರ್ದಿಷ್ಟಾವಽ ಧರಣಿ ಹಮ್ಮಿಕೊಳ್ಳಲಾಗುವುದು ಎಂದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಆರಂಭವಾದ ಮೆರವಣಿಗೆ, ಒನಕೆ ಓಬವ್ವ ವೃತ್ತದ ಮೂಲಕ ಜಿಲ್ಲಾಽಕಾರಿ ಕಚೇರಿ ಆವರಣ ಸೇರಿ ಎಸಿ ಕಾಂತರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು.
ಹೊಸದುರ್ಗ ತಾಲೂಕು ಸಂಘದ ಕಾರ್ಯದರ್ಶಿ ಆರ್.ಮೂರ್ತಪ್ಪ ಮಾತನಾಡಿದರು. ಪ್ರಾಚಾರ್ಯ ಸಣ್ಣ ಪಾಲಯ್ಯ, ಬಿ.ಕÊಷ್ಣಪ್ಪ, ಟಿ.ದುರುಗಪ್ಪ, ಎಸ್.ದೇವೆಂದ್ರಪ್ಪ, ಡಿ.ಎಸ್. ವೇದಮೂರ್ತಿ, ಕೆ.ನಾಗರಾಜಪ್ಪ, ಉಪನ್ಯಾಸಕರಾದ ಸಿ.ಕಲ್ಲಪ್ಪ, ರಾಜಭಕ್ಷಿ, ಎಚ್. ಎಸ್. ವಸಂತಕುಮಾರ್, ಪಿ.ಎ.ಶಿವಕುಮಾರ್, ಕಾಮಾಕ್ಷಿ, ಯಶೋಧ, ಪರೀದ್ಪರ್ವಿನ್, ಬಿ.ಸುರೇಶ, ಎಚ್.ಶ್ರೀನಿವಾಸ ಎನ್.ಟಿ.ನಾಗರಾಜ್, ಎಸ್.ಮಂಜುನಾಥ, ತಿಪ್ಪೇಸ್ವಾಮಿ ಕೆರೆಯಾಗಳಹಳ್ಳಿ, ಟಿ.ಪೆನ್ನಯ್ಯ ಇತರರಿದ್ದರು.

